Dr. Babu Jagjivan Ram Leather Industries Development ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ರಾಜ್ಯದ ಪಾರಂಪರಿಕ ಚರ್ಮಗಾರಿಕೆಯಲ್ಲಿ ತೊಡಗಿರುವ ಕುಟುಂಬಗಳ ಯುವ ಜನರಿಗೆ (ಪರಿಶಿಷ್ಟ ಜಾತಿಯಲಿ ಬರುವ ಮಾದಿಗ, ಸಮಗಾರ, ಡೋರ, ಆದಿಜಾಂಬವ, ಮಚಗಾರ, ಮೋಚಿ ಹಾಗೂ ಇತರೆ ಚರ್ಮೋಗಾರಿಕೆಗೆ ಒಳಪಡುವ ಸಮುದಾಯಗಳಿಗೆ) ಪ್ರಸ್ತುತ ಚರ್ಮ ಉದ್ಯಮದಲ್ಲಿ ಚಾಲ್ತಿಯಲ್ಲಿರುವ ಹೊಸ ತಂತ್ರಜ್ಞಾನಗಳು, ವಿನ್ಯಾಸಗಳು ಹಾಗೂ ಮಾರುಕಟ್ಟೆಯ ಬೇಡಿಕೆಗಳನ್ನು ಪರಿಚಯಿಸಲು ಚರ್ಮ ಆಧಾರಿತ ಕೈಗಾರಿಕೆಗಳಲ್ಲಿ ಮುಂಚೂಣಿಯಲ್ಲಿರುವ ಆಗ್ರಾ, ಉತ್ತರ ಪ್ರದೇಶ ಹಾಗೂ ಕೊಲ್ಕತ್ತಾ, ಪಶ್ಚಿಮ ಬಂಗಾಳದ ರಾಜ್ಯಗಳಲ್ಲಿರುವ ಮೆ|| ಸೆಂಟ್ರಲ್ ಫುಟ್‌ವೇರ್ ಟ್ರೆöÊನಿಂಗ್ ಇನ್‌ಸ್ಟಿಟ್ಯೂಟ್/ಸೆಂಟರ್ ಇಲ್ಲಿಗೆ 60 ದಿನಗಳ ವಸತಿ ಸಹಿತ ಕೌಶಲ್ಯ ಅಭಿವೃದ್ಧಿ ತರಬೇತಿ ‘ಫುಟ್‌ವೇರ್ ಡಿಸೈನಿಂಗ್ ಆಂಡ್ ಪ್ರೊಡಕ್ಷನ್” ಪಡೆಯಲು ಕಳುಹಿಸಿಕೊಡಲಾಗುತ್ತಿದ್ದು, 10ನೇ ತರಗತಿ ಪಾಸಾಗಿರುವ 18 ರಿಂದ 40 ವರ್ಷ ವಯೋಮಿತಿಯುಳ್ಳ ಆಸಕ್ತ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಆಯ್ಕೆಯಾದ ಅರ್ಹ ಅಭ್ಯರ್ಥಿಗಳ ಪ್ರಯಾಣ ವೆಚ್ಚ, ಉಟೋಪಚಾರ, ವಸತಿ ವ್ಯವಸ್ಥೆಯನ್ನು ನಿಗಮದಿಂದ ಕಲ್ಪಿಸಲಾಗುವುದು, ತರಬೇತಿ ಅವಧಿಯಲ್ಲಿ ದಿನಕ್ಕೆ 200/- ರೂ.ನಂತೆ ರೂ. 12,000/-ಪಾವತಿಸಲಾಗುವುದು. ಮೊದಲನೆ ಹಂತದಲ್ಲಿ ಆಗ್ರಾ, ಉತ್ತರ ಪ್ರದೇಶದ ಮೆ|| ಸೆಂಟ್ರಲ್ ಫುಟ್‌ವೇರ್ ಟ್ರೆöÊನಿಂಗ್ ಇನ್‌ಸ್ಟಿಟ್ಯೂಟ್/ಸೆಂಟರ್‌ನಲ್ಲಿ ಆಗಸ್ಟ್ 19 ರಿಂದ ಅಕ್ಟೋಬರ್ 18ರವರೆಗೆ ನಡೆಯುವ ತರಬೇತಿಗೆ ನಿಯೋಜಿಸಲಾಗುವುದು.
Dr. Babu Jagjivan Ram Leather Industries Development ಆಸಕ್ತರು ತಮ್ಮ ವೈಯಕ್ತಿಕ ವಿವರ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್‌ಪಾಸ್ ಪುಸ್ತಕದ ಜೇರಾಕ್ಸ್ ಪ್ರತಿ, ಪಾಸ್‌ಪೋರ್ಟ್ ಸೈಜ್ 5 ಪೋಟೋಗಳನ್ನು ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ, ನಂ. 32, ಲಿಡ್ಕರ್ ಭವನ, ಮಿಲ್ಲರ್ಸ್ ಟ್ಯಾಂಕ್ ಬಂಡ್ ಏರಿಯಾ, ವಸಂತನಗರ, ಬೆಂಗಳೂರು-560052 ಇಲ್ಲಿಗೆ ಜುಲೈ 31ರೊಳಗಾಗಿ ಸಲ್ಲಿಸುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರು, ಲಿಡ್ಕರ್, ನೆಹರು ರಸ್ತೆ, ಶಿವಮೊಗ್ಗ ದೂ.ಸಂ.: 9449181136 ಇವರನ್ನು ಸಂಪರ್ಕಿಸುವುದು.
Dr. Babu Jagjivan Ram Leather Industries Development ಕೌಶಲ್ಯ ಅಭಿವೃದ್ದಿಗೆ ತರಬೇತಿ ಪಡೆಯಲು ಅರ್ಜಿ ಆಹ್ವಾನ
Date: