Thursday, March 19, 2026
Thursday, March 19, 2026

Shivamogga Co-Op Milk Producer’s Societies Union Ltd ಶಿಮುಲ್ ಚುನಾವಣೆ ಪಾರದರ್ಶಕವಾಗಿ ನಡೆಸಲು ಜಿಲ್ಲಾಧಿಕಾರಿಗಳಿಗೆ ಬಿಜೆಪಿ ಮನವಿ

Date:

Shivamogga Co-Op Milk Producer’s Societies Union Ltd ಮಾಚೇನಹಳ್ಳಿಯಲ್ಲಿರುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಇದರ ಆಡಳಿತ ಮಂಡಲಿ ಸದಸ್ಯರ ಆಯ್ಕೆಗೆ ನಡೆಯಲಿರುವ ಚುನಾವಣೆಯಲ್ಲಿ ಆರ್.ಎಂ.ಮಂಜುನಾಥ ಗೌಡ ಬಿನ್ ರಾಮಪ್ಪಗೌಡ ಇವರ ಪ್ರತಿನಿಧಿತ್ವವನ್ನು ಪರಿಗಣಿಸಬಾರದು.

ಶಿಮುಲ್ ಚುನಾವಣೆ ಪಾರದರ್ಶಕವಾಗಿ ನಡೆಸಬೇಕೆಂದು ಬಿಜೆಪಿ ಮುಖಂಡರು ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.
ಮಂಜುನಾಥಗೌಡ ಇವರು ಶಿವಮೊಗ್ಗ ತಾಲೂಕು ಕಲ್ಲುಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಲಿ ನಿರ್ದೇಶಕರಾಗಿರುವುದು ಅನೂರ್ಜಿತವಾಗಿದೆ. ಶಿಮುಲ್‌ಗೆ ಪ್ರತಿನಿಧಿ ಆಗಲು ಕಾನೂನಿನಲ್ಲಿ ಇದಕ್ಕೆ ಯಾವುದೇ ಅವಕಾಶ ಇಲ್ಲ. ಸುರೇಶ ಎನ್ನುವವರು 2023ರ ಡಿ. 20ರಂದು ಕಲ್ಲುಕೊಪ್ಪ ಹಾಲು ಸಂಘಕ್ಕೆ ತಮ್ಮ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾರ್ಯಕಾರಿ ಸಮಿತಿ ಸಭೆಯಲ್ಲಿ ಇದು ಅಂಗೀಕಾರವಾಗಿದೆ.

ಈ ಸಭೆಯ ಸಂದರ್ಭದಲ್ಲಿ ಸುರೇಶ ಹಾಜರಿದ್ದು, ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿದ್ದಾರೆ.

ಇದು ಸಹಕಾರ ಸಂಘಗಳ ಕಾಯ್ದೆ ೧೯೫೯, ಕಲಂ ೨೯-ಬಿ ಉಲ್ಲಂಘನೆಯಾಗಿದೆ ಎಂದಿದ್ದಾರೆ.
ಸುರೇಶ ರಾಜಿನಾಮೆ ವಿ?ಯವನ್ನು ಮುಖ್ಯ ಕಾರ್ಯಸೂಚಿಯಲ್ಲಿ ತಾರದೇ ಇರುವುದು ಸಹಕಾರ ಸಂಘಗಳ ಕಾಯ್ದೆ ೧೯೫೯, ನಿಯಮಗಳು ೧೯೬೦, ನಿಯಮ ೧೪-ಎಕೆ(೬)ಉಲ್ಲಂಘನೆಯಾಗಿದೆ.ಮಂಜುನಾಥಗೌಡ ಇವರನ್ನು ನಿರ್ದೇಶಕರಾಗಿ ಕೋ-ಆಪ್ಸ್ ಮಾಡಿಕೊಂಡಿರುವುದು ಕೂಡ ಮುಖ್ಯ ಕಾರ್ಯಸೂಚಿಯಲ್ಲಿತಾರದೇ ಇರುವುದು ಸಹಕಾರ೧೯೬೦, ನಿಯಮ ೧೪-೨(೬) ಸಂಘಗಳ ಕಾಯ್ದೆ ೧೯೫೯, ನಿಯಮಗಳು ಉಲ್ಲಂಘನೆಯಾಗುತ್ತದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.

Shivamogga Co-Op Milk Producer’s Societies Union Ltd ಸಹಕಾರ ಸಂಘಗಳ ಕಾಯ್ದೆ ಕಲಂ ೨೯-ಇ ಪ್ರಕಾರ ಮಂಡಲಿಯ ಉಳಿದ ಪದಾವಧಿಯು ಅದರ ಮೂಲ ಪದಾವಧಿಯ ಅರ್ಧಕ್ಕಿಂತ ಹೆಚ್ಚು ಇದ್ದರೆ, ಖಾಲಿ ಸ್ಥಾನವನ್ನು ಭರ್ತಿ ಮಾಡಲು ಚುನಾವಣೆಯನ್ನು ನಡೆಸತಕ್ಕದು ಎಂದಿದ್ದು, ಈ ಆಡಳಿತ ಮಂಡಲಿಯ ಚುನಾವಣೆಯು ದಿನಾಂಕ ೦೪-೦೧-೨೦೨೨ರ ಜನವರಿ ೪ಕ್ಕೆ ನಡೆದಿದೆ., ರಾಜೀನಾಮ ೨೦೨೩ರ ಡಿ. ೨೦ ಆಗಿದೆ. ಉಳಿದ ಪದಾವಧಿಯು ಅರ್ಧಕ್ಕಿಂತ ಹೆಚ್ಚು ಇರುವುದರಿಂದ ಚುನಾವಣೆ ನಡೆಸಬೇಕು.

ನಿಯಮ ೧೪-ಎಎಫ್ ಪ್ರಕಾರ ೬೦ ದಿನಗಳೊಳಗೆ ಚುನಾವಣೆ ನಡೆಸಬೇಕಾಗಿದ್ದು, ಚುನಾವಣೆಯು ನಡೆದಿಲ್ಲ ಎಂದು ವಿವರಿಸಿದ್ದಾರೆ..
ಈ ವರ್ಷದ ಮಾ. ೧೫ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶಿಮುಲ್‌ನ ಆಡಳಿತ ಮಂಡಲಿ ಚುನಾವಣೆಗೆ ಪ್ರತಿನಿಧಿ ಆಗಿ ನಿರ್ದೇಶಕ ಲೋಕೇಶ್ ಹೆಸರನ್ನು ಸೂಚಿಸಿದ್ದು, ಆದರೆ, ನಡಾವಳಿಯಲ್ಲಿ ಆರ್.ಎಂ.ಮಂಜುನಾಥಗೌಡ ಹೆಸರು ನಮೂದಾಗಿದೆ ಎಂದಿದ್ದಾರೆ.

ಮನವಿ ಸಲ್ಲಿಕೆ ವೇಳೆ ತ್ಯಾಜ್ಯವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಟಿ.ಬಿ.ಜಗದೀಶ್, ಸಹಕಾರಿ ಕ್ಷೇತ್ರದ ಪ್ರಮುಖರಾದ ಎಸ್.ಹೆಚ್.?ಣ್ಮುಖಪ್ಪ, ಹೆಚ್.ಈ.ಗಡ್ಲಬಸಪ್ಪ, ಈಶ್ವರಪ್ಪ, ಎಸ್.ಜಿ.ಮಲ್ಲಿಕಾರ್ಜುನ್, ಚಂದ್ರು ಹಾಗೂ ಪ್ರಾಥಮಿಕ ಸಹಕಾರ ಸಂಘದ ನಿರ್ದೇಶಕರಾದ ಹೆಚ್.ಬಿ.ನಂದೀಶ್, ಬಿ.ಟಿ.ಈಶ್ವರಪ್ಪ, ಹೆಚ್.ವಿ.ಅರುಣ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...