Sri Shivaganga Yoga Centre ಶಿವಮೊಗ್ಗ ಪ್ರತಿಯೊಂದು ಹಂತದಲ್ಲೂ ಗುರುವಿನ ಮಾರ್ಗದರ್ಶನ ಬೇಕು. ಗುರುವಿನ ಪಾತ್ರ ಬಹಳ ಪ್ರಮುಖವಾದದ್ದು, ಗುರುವಿಲ್ಲದೇ ಜ್ಞಾನವಿಲ್ಲ ಎಂದು ಶಿವಗಂಗಾ ಯೋಗಾ ಕೇಂದ್ರದ ರಾಘವ ಶಾಖೆಯ ಯೋಗಾ ಗುರುಗಳಾದ ಜಿ.ಎಸ್.ಓಂಕಾರ್ ಅಭಿಮತ ವ್ಯಕ್ತಪಡಿಸಿದರು.
ಶಿವಮೊಗ್ಗ ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ರಾಘವ ಶಾಖೆಯ ಯೋಗಾ ಪಟುಗಳು ಆಯೋಜಿಸಿದ್ದ ಗುರು ವಂದನಾ ಹಾಗೂ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಗೌರವ ಸಮರ್ಪಣೆ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಜೀವನದಲ್ಲಿ ಅಂಧಕಾರ ಹೋಗಲಾಡಿಸಿ, ಬೆಳಕನ್ನು ನೀಡುವ ಗುರುವಿನ ಸ್ಥಾನ ತುಂಬಾ ದೊಡ್ಡದು ಎಂದರು.
ಮತ್ತೋರ್ವ ಯೋಗ ಗುರುಗಳಾದ ಹರೀಶ್ ಮಾತನಾಡಿ, ನಮ್ಮ ದೇಹ ಮನಸ್ಸು ಸ್ವಾಸ್ಥ್ಯದಲ್ಲಿ ಇರಬೇಕಾದರೆ ಯೋಗ, ಪ್ರಾಣಯಾಮ, ಧ್ಯಾನ ತುಂಬಾ ಅಗತ್ಯ ಇದೆ. ಈ ನಿಟ್ಟಿನಲ್ಲಿ ನಾವೆಲ್ಲ ಸುಖಿಗಳು, ನಮಗೆ ಉಚಿತವಾಗಿ ಯೋಗ ತರಗತಿಗಳನ್ನು ಶಿವಗಂಗಾ ಯೋಗ ಕೇಂದ್ರ ಆಯೋಜಿಸಿದೆ ಎಂದರು.
ಇನ್ನೋರ್ವ ಯೋಗ ಗುರುಗಳಾದ ವಿಜಯ್ ಕೃಷ್ಣ ಮಾತನಾಡಿ, ಇಂದು ಗುರುಗಳ ಮೇಲೆ ಶಿಕ್ಷಕರಿಗೆ ಗೌರವ ಕಡಿಮೆ ಆಗುತ್ತಿದೆ. ಯೋಗ ನಮ್ಮ ಮನಸ್ಸು ದೇಹವನ್ನು ಸಧೃಡಗೊಳಿಸುತ್ತದೆ ಎಂದರು.
ಶಿ.ಜಿ.ವಾ ಮತ್ತು ಕೈಗಾರಿಕಾ ಸಂಘದ ಸಹಕಾರ್ಯದರ್ಶಿ ರೋ. ಜಿ.ವಿಜಯ್ ಕುಮಾರ್ ಮಾತನಾಡಿ, ಪ್ರಸ್ತುತ ಹೆತ್ತ ತಂದೆ ತಾಯಿ, ಗುರುಗಳ ಋಣ ಬಹಳ ದೊಡ್ಡದು. ನಮಗೆ ಯೋಗದಲ್ಲಿ ಸಂಸ್ಕಾರದ ಜೊತೆಗೆ ಆಧ್ಯಾತ್ಮ ಹಾಗೂ ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂದು ನುಡಿದರು.
Sri Shivaganga Yoga Centre ಇದೇ ಸಂದರ್ಭದಲ್ಲಿ ರಾಘವ ಶಾಖೆಯ 4 ಜನ ಯೋಗ ಶಿಕ್ಷಕರಿಗೆ ಫಲ ಪುಷ್ಪ ನೀಡಿ ಸನ್ಮಾನಿಸಲಾಯಿತು. ಕಾಟನ್ ಜಗದೀಶ್ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಮಾರಂಭದಲ್ಲಿ ಬಿಂದು ವಿಜಯ್ ಕುಮಾರ್, ನರಸೋಜಿ ರಾವ್, ಶ್ರೀನಿವಾಸ, ಎಸ್.ಟಿ.ಆನಂದ, ಮಹೇಶ, ಸುಜಾತ, ಮಧುಕೇಶ್ವರ, ಗಾಯಿತ್ರಿ, ಸುಮಾ, ಶೋಭಾ, ಶಂಕರ, ವಿಕ್ಕಿ, ಅಶೋಕ, ಸುಮಂತ್, ಪ್ರೇಮ..ಪ್ರೀತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.