Tuesday, February 3, 2026
Tuesday, February 3, 2026

Gopal Krishna Belur ಸಾಗರ- ಹೊಸನಗರ ಕ್ಷೇತ್ರದ ಮಳೆಹಾನಿ ಸಮಸ್ಯೆಗೆ ಸ್ಪಂದಿಸಿ ಆನ್ ಲೈನ್ ಮೀಟೀಂಗ್ ನಡೆಸಿದ ಶಾಸಕ ಬೇಳೂರು ಗೋಪಾಲಕೃಷ್ಷ

Date:

Gopal Krishna Belur ಸಾಗರ-ಹೊಸನಗರ ಕ್ಷೇತ್ರದಲ್ಲಿ ಮಳೆಹಾನಿ ಕುರಿತು ಬೆಲ್ಜಿಯಂ ದೇಶದಿಂದ ಸಾಗರ ವಿಧಾನಸಭಾ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು ಆನ್’ಲೈನ್ ಮೀಟಿಂಗ್ ನಡೆಸಿದರು.

ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಮಳೆಹಾನಿ ಪರಿಹಾರ ನೀಡಲು ವಿದೇಶದಲ್ಲಿದ್ದರೂ 24*7 ಜನರ ಮೇಲಿನ ಕಾಳಜಿಗೆ ಜನತೆಯು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಳೆಯಿಂದ ಕ್ಷೇತ್ರದ ಜನತೆಗೆ ಯಾವುದೇ ರೀತಿಯ ತೊಂದರೆ ಆಗಬಾರದೆಂದು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಸೂಚನೆ ನೀಡಿದರು.

ಹಾನಿಗೊಳಗಾದ ಎಲ್ಲರಿಗೂ ಸೂಕ್ತ ರೀತಿಯ ಪರಿಹಾರ ನೀಡಲಾಗಿದೆ ಎಂದ ಸಾಗರ ತಹಶಿಲ್ದಾರರಾದ ಚಂದ್ರಶೇಖರ ನಾಯ್ಕ ಮತ್ತು ಸಾಗರ ನಗರಸಭಾ ಕಮೀಷನರ್ ಎಚ್.ಕೆ. ನಾಗಪ್ಪ ತಿಳಿಸಿದರು

ಗ್ರಾಮೀಣ ಭಾಗದಲ್ಲಿ ಮಳೆಯಿಂದ ಹಾನಿಗೊಳಗಾದ ಕಡೆ ಹೆಚ್ಚಿನ ಗಮನ ನೀಡಲಾಗಿದ್ದು, ಹಾನಿಗೊಳಗಾದ ಪ್ರತಿಯೊಂದು ಕಡೆ ನಿಗಾ ವಹಿಸಲು ಪಿಡಿಓಗಳಿಗೆ ಹೇಳಲಾಗಿದೆ-ಇಓ ಗುರುಕೃಷ್ಣ ಶೆಣೈ

ಗ್ರಾಮೀಣ ಭಾಗದ ಕುಡಿಯುವ ನೀರು ಮತ್ತು ನೈರ್ನಲ್ಯದ ಬಗ್ಗೆ ಗಮನವಿಟ್ಡು ಜನತೆಗೆ ತೊಂದರೆ ಆಗದಂತೆ ಕೆಲಸ ಮಾಡಲಾಗಿದೆ-ಇಂಜಿನಿಯರ್ ಭರತ್

ರಸ್ತೆಗಳು ಮಳೆಯಿಂದ ಹಾನಿಗೊಳಗಾದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮತ್ತು ಸಾಗರ ತಾಲ್ಲೂಕು ಕಚೇರಿ ಮೇಲ್ಚಾವಣಿಗೆ ಟೆಂಡರ್ ಕತೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಲೋಕೋಪಯೋಗಿ ಇಂಜಿನಿಯರ್ ಮಂಜುನಾಥ ಮಾಹಿತಿ ನೀಡಿದರು.

Gopal Krishna Belur ಮಳೆಯಿಂದ ಶಾಲೆಗಳಿಗೆ ಹಾನಿಯಾಗಿದ್ದು, ಅವುಗಳಲ್ಲಿ ಪಾಠ ಮಾಡಲು ಸಾಧ್ಯವಾಗದೇ ಇದ್ದರೆ ಅಂತಹ ಸ್ಥಳದಲ್ಲಿ ಮುಖ್ಯಶಿಕ್ಷಕರು ತೀರ್ಮಾನ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಬಿಇಓ ಪರಶುರಾಮ್ ತಿಳಸಿದರು.

ಮೆಸ್ಕಾಂ ಲೈನ್’ಮನ್ ‘ಗಳ ಪರಿಶ್ರಮಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಮೆಚ್ಚುಗೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...