Sunday, December 14, 2025
Sunday, December 14, 2025

Guru Purnima ಗುರುವಿನ ಮಹಿಮೆಯ ಅರಿಯಿರಿ

Date:

ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ.

Guru Purnima “ಗುರುಬ್ರಹ್ಮ ಗುರುವಿಷ್ಣು ಗುರುದೇವೋ
ಮಹೇಶ್ವರ/
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ
ಶ್ರೀಗುರುವೇ ನಮಃ//

ಗುರುಗಳನ್ನು ತ್ರಿಮೂರ್ತಿಗಳಿಗೆ ಹೋಲಿಸುತ್ತ ವಂದಿಸುವ ಈ ಶ್ಲೋಕ ಬಹಳ ಅರ್ಥಪೂರ್ಣ
ವಾಗಿದೆ.
ನಾವು ಯಾವುದೇ ಶ್ಲೋಕಗಳನ್ನು ಪಠಣಮಾಡಲು ಆರಂಭಿಸುವಾಗ ‘ಶ್ರೀಗುರುಭ್ಯೋನಮಃ ಹರಿಃ ಓಂ”
ಎಂದು ಭಕ್ತಿಯಿಂದ ಹೇಳುವುದನ್ನು ಕೇಳಿದ್ದೇವೆ.
ಗುರುವಿನ ಸ್ಥಾನ ಅಂತಹದು.
ಸಂಗೀತ ಪಿತಾಮಹ ಶ್ರೀಪುರಂದರದಾಸರು
“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂದು ಬಣ್ಣಿಸಿದ್ದಾರೆ.
“ಗು” ಎಂದರೆ ನೆರಳು “ರು” ಎಂದರೆ ಚದುರಿಸುವುದು ಎಂದರ್ಥ.ಯಾರು ಅಜ್ಞಾನದ ಅಂಧಕಾರವನ್ನು ಹೋಗಲಾಡಿಸುತ್ತಾರೋ ಅವರೇ
ನಿಜವಾದ ಗುರುಗಳು.
ಶಿಷ್ಯರಿಗೆ ಕಲಿಸಿಕೊಡುವ ಗುರುಗಳು ಸಾಮಾನ್ಯವಾಗಿ ಶಿಷ್ಯರಿಗೆ ಸರಿಯಾದ ಮಾರ್ಗದರ್ಶಕರಾಗಿರುತ್ತಾರೆ.
ಗುರುಪೂರ್ಣಿಮೆಯ ದಿನ ನಮಗೆ ವಿದ್ಯೆಕಲಿಸಿದ
ಗುರುಗಳನ್ನು ಅಭಿವಂದಿಸುವ ದಿನವಾಗಿದೆ.
ಈಗೆಷ್ಟು ಕಲಿತಿದ್ದೇವೆ,ಮುಂದೆ ಏನು ಕಲಿಯಬೇಕು
ಮತ್ತು ಮುಂದಿನ ಜೀವನದ ದಾರಿಯನ್ನು ನಿರ್ಧಾರಮಾಡಿ ಅದರ ಬಗ್ಗೆ ಸಂಪೂರ್ಣ ಗಮನ
ವಿಡುವುದು ಈ ಶುಭ ದಿನದ ಉದ್ದೇಶ.
ತಂದೆಯು ಮಗನಿಗೆ ಜನ್ಮದಾತನಾದರೆ,ಗುರುಗಳು
ಆತನನ್ನು ಜನನ ಮರಣಗಳ ಸಂಕೋಲೆಯಿಂದ
ಮುಕ್ತ ಗೊಳಿಸಲು ಸಹಕರಿಸುತ್ತಾರೆ.ಪೂಜನೀಯ
ಸ್ಥಾನದಲ್ಲಿ ಗುರುಗಳನ್ನು ನೋಡಬೇಕು
ತಂದೆತಾಯಿಗಳ ನಂತರ ಪ್ರಮುಖ ಸ್ಥಾನ ನೀಡಿ
Guru Purnima ಆಚಾರ್ಯ ದೇವೋ ಭವ ಎಂದೇ ಗುರುಗಳನ್ನು ಪೂಜಿಸಿ,ಗೌರವಿಸುವ ಭವ್ಯ ಪರಂಪರೆ ನಮ್ಮದು.
ಪೂಜ್ಯ ವ್ಯಾಸ ಮಹರ್ಷಿಗಳು ಹಾಗೂ ಎಲ್ಲ ಗುರು ಪರಂಪರೆಯನ್ನೂ ವಂದಿಸಿ,ಗೌರವಿಸುವ ಗುರುಪೂರ್ಣಿಮಾ ಮಹಾ ಪರ್ವವನ್ನು ಆಷಾಢ
ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ.
ಗುರು ಪೂರ್ಣಿಮೆಯು ಕೇವಲ ವೇದ ಪಾಠಶಾಲೆ
ಗಳಿಗೆ ಮಾತ್ರ ಸೀಮಿತವಾಗಿಲ್ಲ.ಹಿಂದೂಗಳು ಈದಿನವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ
ಜೈನ,ಬೌದ್ಧ ಧರ್ಮೀಯರು ಸಹ ಗುರುಪೂರ್ಣಿ
ಮೆಯನ್ನು ಆಚರಿಸುವುದು ರೂಢಿಯಲ್ಲಿದೆ.
ಸಿದ್ಧಾರ್ಥ ಗೌತಮ ಬುದ್ಧನಾಗಿ ಮೊದಲ ಧರ್ಮ ಪ್ರವಚನವನ್ನು ಮಾಡಿದಂತಹ ದಿನ ಗುರುಪೂರ್ಣಿಮೆ.ಇಂದು ಶ್ರೇಷ್ಠ ಗ್ರಂಥವಾದ ಮಹಾಭಾರತವನ್ನು ರಚಿಸಿದ ಶ್ರೀವೇದವ್ಯಾಸ ಗುರುಗಳ ಜನ್ಮದಿನವೂ ಆಗಿದೆ.ಹಾಗಾಗಿ ಈ ದಿನವನ್ನು ಶ್ರೀವ್ಯಾಸಪೂರ್ಣಿಮೆ ಎಂದೂ ಕರೆಯುತ್ತಾರೆ.
ಈ ದಿನ ಶಂಕರನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಉಪದೇಶಿಸಿ ಪ್ರಥಮ ಗುರು ಎಂದೆನಿಸಿಕೊಂಡ ದಿನ ಗುರು ಪೂರ್ಣಿಮ.
ಈ ದಿನ ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸಿದ
ಗುರುವೃಂದಕ್ಕೆ ಕೃತಜ್ಞತೆ ಸಲ್ಲಿಸುವ ಸಂಪ್ರದಾಯವೂ ನಡೆದುಬಂದಿರುತ್ತೆ.ಗುರುಗಳು ತಮ್ಮ ಶಿಷ್ಯರಿಗೆ ಸಹಾಯ ಮಾಡಿದ ಒಂದು ಪ್ರಸಂಗ ನೆನಪಿಗೆ ಬರುತ್ತೆ.ಒಮ್ಮೆ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಗೆ ತನ್ನ ಪಿ.ಯು.ಸಿ ಪರೀಕ್ಷೆಗೆ ಹಣ ಕಟ್ಟಲು ಪರದಾಡುತ್ತಿದ್ದಾಗ ಅವನಿಗೆ
ಪಾಠ ಹೇಳಿಕೊಡುತ್ತಿದ್ದ ಗುರುಗಳು ಶಿಷ್ಯನಿಗೆ ಪರೀಕ್ಷೆಯ ಫೀಸನ್ನು ಕಟ್ಟಲು ತಾವೇ ಸಹಾಯ ಮಾಡುತ್ತಾರೆ.ಪರೀಕ್ಷೆಯ ಫಲಿತಾಂಶ ಹೊರಬಂದಾಗ ಆ ವಿದ್ಯಾರ್ಥಿ ಆ ಶಾಲೆಗೇ ಮೊದಲ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾನೆ.
ಇದನ್ನು ಕೇಳಿದ ಗುರುಗಳಿಗೆ ಬಹಳ ಸಂತೋಷವಾಗುತ್ತದೆ ಮತ್ತು ಆ ವಿದ್ಯಾರ್ಥಿ ಗುರುಗಳಿಗೆ ತನ್ನ ಕೃತಜ್ಞತೆಗಳನ್ನು ವ್ಯಕ್ತ ಪಡಿಸುತ್ತಾನೆ.ಹೀಗೆ ಗುರುಗಳು ಪಾಠ ಹೇಳಿಕೊಡುವುದು ಮಾತ್ರವಲ್ಲದೆ ಪರೀಕ್ಷೆಗೆ ಕೂಡಲು ಹಣದ ಸಹಾಯವನ್ನು ಸಹ ತಮ್ಮ ಕೈಯಲ್ಲಾಗುವ ಸಹಾಯವೆಂತ ಮಾಡುವ ಗುರುವೃಂದವೂ ಇದೆ..
ಇಂದು ಸೂಕ್ತ ಮಾರ್ಗದರ್ಶನದ ಕೊರತೆ ಕಂಡು ಬರುತ್ತಿದೆ.ಹಾಗಾಗಿ ಸತ್ಯ,ಧರ್ಮ ಮಾರ್ಗದಲ್ಲಿ ನಡೆ
ಯುವವರ ಸಂಖ್ಯೆ ಬಹಳ ಕಡಿಮೆಯಾಗುತ್ತಿದೆ.
ಸರಿಯಾದ ಮಾರ್ಗ ದರ್ಶನ ಸಿಕ್ಕು ಜನತೆ ಧರ್ಮ ಮಾರ್ಗದಲ್ಲಿ ನಡೆದು ಮಾನವೀಯ ಮೌಲ್ಯಗಳನ್ನು
ಮೈಗೂಡಿಸಿಕೊಂಡು ಸೌಹಾರ್ದತೆಯಿಂದ ಬಾಳಿದಾಗ ಪ್ರತಿಯೊಬ್ಬರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ.
ಈ ಬಾರಿ ಬಂದಿರುವ ಗುರುಪೂರ್ಣಿಮೆಯ
ಶುಭ ಸಂದರ್ಭದಲ್ಲಿ ಜಗತ್ತಿನ ಎಲ್ಲಾ ಗುರು ಶ್ರೇಷ್ಠರಿಗೂ ನಮ್ಮ ಅನಂತ ನಮಸ್ಕಾರಗಳನ್ನು
ಅರ್ಪಿಸೋಣ.


LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...