Thirtahalli Poultry farm ತೀರ್ಥಹಳ್ಳಿ ತಾಲೂಕು ನಂಟೂರು ಗ್ರಾಮದ ಶ್ರೀಕಾಂತ್ ಎಂಬುವವರ ಕೋಳಿ ಫಾರಂ ಮೇಲೆ ಮಳೆ ಗಾಳಿಗೆ ಬೃಹದಾಕಾರದ ಮರ ಬಿದ್ದಿದ್ದು ಸುಮಾರು 50 ಕೋಳಿಗಳು ಸತ್ತು ಹೋಗಿವೆ.
ಫಾರಂನ ಶೀಟ್‌ಗಳು ಜಖಂ ಆಗಿದ್ದು, ಈ ಮರ ತೆರವುಗೊಳಿಸುವ ಸಂದರ್ಭದಲ್ಲಿ ಇಬ್ಬರು ಶೆಡ್ ನಿಂದ ಕೆಳಗೆ ಬಿದ್ದು ತುಂಬಾ ಗಾಯಗಳಾಗಿವೆ.
ಇನ್ನೊಂದು ಘಟನೆಯಲ್ಲಿ ಆಗುಂಬೆ ಹೋಬಳಿ ಚಂಗಾರು ಗ್ರಾಮದ ಹುಂಚಿಕೊಪ್ಪದಲ್ಲಿ ಸುರೇಶ್ ಎಂಬುವರ ಮನೆ ಪಕ್ಕದಲ್ಲಿ ರಾತ್ರಿ 1:15 ರ ಸಮಯದಲ್ಲಿ ಬೃಹತ್ ತೆಂಗಿನಮರ ಧರೆಗುರುಳಿದ್ದು , ಜೊತೆಗೆ ಕರೆಂಟ್ ಕಂಬ ಕೂಡ ಬಿದ್ದಿದ್ದು ತಂತಿ ಕಟ್ ಆಗಿದೆ. ಇನ್ನೂ ತೆಂಗಿನ ಮರ ಸ್ವಲ್ಪ ಚದುರಿ ಬಿದ್ದಿದ್ದು ಮನೆಯಲ್ಲಿದ್ದವರು ಅದೃಷ್ಟವಶಾತ್ ಪಾರಾಗಿದ್ದಾರೆ.
ಮರ ಬಿದ್ದು ಅಪಾರ ಹಾನಿ:
ಶಿವಮೊಗ್ಗ ನಗರದಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಶಿವಮೊಗ್ಗದ ಕೀರ್ತಿನಗರದ ಮನೆಯೊಂದರ ಮೇಲೆ ಬೃಹದಾಕಾರದ ಮರದ ಕೊಂಬೆಯೊAದು ಬಿದ್ದಿದೆ.
ಹಳೆಯ ಜೈಲ್ ಕಾಂಪೌಡಿನಲ್ಲಿರುವ ಈ ಮರವನ್ನು ತೆರವುಗೊಳಿಸುವಂತೆ ಮನೆಯ ಮಾಲಿಕ ಹರೀಶ್ ಹಲವು ಬಾರಿ ಸಂಬಧಪಟ್ಟ ಇಲಾಖೆಗಳಿಗೆ ಮಾನವಿ ಮಾಡಿದ್ದರೂ ಯಾವೊಬ್ಬ ಅಧಿಕಾರಿಯೂ ಇತ್ತ ಗಮನಹರಿಸಿಲ್ಲ ಎಂದು ಮನೆ ಮಾಲೀಕರು ಆರೋಪಿಸಿದ್ದಾರೆ.
Thirtahalli Poultry farm ಮರದ ಕೊಂಬೆ ಮನೆಯಮೇಲೆ ಬಿದ್ದಿದೆ. ಅದೃಷ್ಟವಶಾತ್ ಮನೆಯ ಮುಂಭಾಗದಲ್ಲಿ ಕೊಂಬೆ ಬಿದ್ದಿದ್ದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಹಳೆ ಜೈಲಿನ ಕಾಂಪೌಂಡ್ ಕೂಡ ಮನೆಯ ಕಡೆ ಬಾಗಿದೆ. ಈ ವಿಚಾರವಾಗಿಯೂ ಮನೆಯ ಮಾಲಿಕರು ಜಿಲ್ಲಾಡಳಿತ, ಅರಣ್ಯ ಇಲಾಖೆ, ಪಾಲಿಕೆ ಹಾಗೂ ಜೈಲಿನ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದರು.