Chamber Of Commerce ವಿತರಕರ ಹಿತಕ್ಕಾಗಿ ಕೆಲವು ಕೆಲಸಗಳನ್ನು ಮಾಡಲು ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದೇವೆ. ಕಂಪನಿ ಮತ್ತು ವಿತರಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವುದು, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆಶಯಗಳಿಗೆ ಸ್ಪಂದಿಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಹೊಸ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ದೇವರಾಜ್.ಎಂ.ಸಿ ಭರವಸೆ ನೀಡಿದರು.
ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಹೊಸ ಆಡಳಿತ ಮಂಡಳಿಗೆ ಆಯ್ಕೆ ಆದ ನಿರ್ದೇಶಕರುಗಳು ಸಭೆ ಸೇರಿದ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಮಾತನಾಡಿದ ಅವರು, ಟ್ರೇಡ್ ಲೈಸನ್ಸ್ ಮೇಳ, ಫುಡ್ ಲೈಸನ್ಸ್ ಮೇಳ, ಎಪಿಎಂಸಿ ಮಾದರಿ ನಮ್ಮ ಎಲ್ಲಾ ವಿತರಕರಿಗೂ ನಗರದಲ್ಲಿ ಒಂದೇ ಕಡೆ ವಿಶಾಲವಾದ ಜಾಗ ಪಡೆಯಲು ಪ್ರಯತ್ನಿಸಲಾಗುವುದು ಎಂದರು.
ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಹೊಸ ಆಡಳಿತ ಮಂಡಳಿಗೆ ಆಯ್ಕೆ ಆದ ನಿರ್ದೇಶಕರುಗಳು ಸಭೆ ಸೇರಿ, ಅಧ್ಯಕ್ಷ ಸ್ಥಾನವನ್ನು ದೇವರಾಜ್.ಎಂ.ಸಿ, ಉಪಾಧ್ಯಕ್ಷ ಸ್ಥಾನವನ್ನು ಬದರಿನಾಥ್.ಬಿ.ಆರ್,
ಕಾರ್ಯದರ್ಶಿ ಸ್ಥಾನವನ್ನು ಗಿರೀಶ್ ಒಡೆಯರ್, ಸಹಕಾರ್ಯದರ್ಶಿ ಸ್ಥಾನವನ್ನು ಅರವಿಂದ್ ರಾವ್.ಎಸ್.ವಿ, ಖಜಾಂಚಿ ಸ್ಥಾನವನ್ನು ಚಂದ್ರಶೇಖರ್.ಕೆ.ಕೆ, ನಿರ್ದೇಶಕರ ಸ್ಥಾನಗಳಿಗೆ ಮೋಹನ್ ಕುಮಾರ್, ಮೊಹಮ್ಮದ್ ಇಕ್ಬಾಲ್, ರಾಘವೇಂದ್ರ.ವೈ.ಎಂ, ಕುಮಾರ್.ಎ.ಎಂ, ಮಹಾರುದ್ರ.ಕೆ.ವಿ ಇವರು ಜವಾಬ್ದಾರಿಗಳನ್ನು ಹಂಚಿಕೊಂಡಿದ್ದಾರೆ.
ಇದೇ ವೇಳೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಜಿಲ್ಲಾ ವಿತರಕರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ದೇವರಾಜ್, ಕಾರ್ಯದರ್ಶಿ ಹಾಗೂ ನೂತನ ಕಾರ್ಯ ಮಾಡಲು ಅಭಿನಂದಿಸಲಾಯಿತು.
Chamber Of Commerce ಇದೇ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಶಿವರಾಜ್ ಉಡುಗಣಿ, ಮಾಜಿ ಕಾರ್ಯದರ್ಶಿ ಮೋಹನ್.ಕೆ.ಎಸ್, ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹಕಾರ್ಯದರ್ಶಿ ಜಿ.ವಿಜಯಕುಮಾರ್, ವಿತರಕರ ಸಂಘದ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು.