B.Y. Vijayendra ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಕುಟುಂಬಕ್ಕೆ ಮುಡಾದಿಂದ 48 ಸೈಟ್ ಹಂಚಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ಕೊಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಿವಾಸಕ್ಕೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿದ್ದು, ಆದರೆ ರಸ್ತೆಯಲ್ಲೇ ತಡೆದ ಪೊಲೀಸರು ವಾಪಸ್ ಕಳಿಸಿದ್ದಾರೆ. 48 ಸೈಟ್ ಹಂಚಿಕೆ ಆರೋಪ್ ಕೇಸ್ ಬಗ್ಗೆ ತನಿಖೆಗೆ ಕೋರಿ 2011ರಲ್ಲಿ ಸಭಾಪತಿಗೆ ಬಿಎಸ್ ಯಡಿಯೂರಪ್ಪ ದಾಖಲೆ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ಮುಖಂಡರು ಇದರ ಚರ್ಚೆಯನ್ನು ಮುಂದಿವರೆಸಲು ವಿಜಯೇಂದ್ರಗೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಆರೋಪಕ್ಕೆ ಸಂಬಂಧಿಸಿದ ದಾಖಲೆ ಕೊಡಲು ವಿಜಯೇಂದ್ರ ನಿವಾಸಕ್ಕೆ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಮತ್ತು ಯುವ ಕಾಂಗ್ರೆಸ್ ಮುಖಂಡ ಮನೋಹರ್ ಆಗಮಿಸಿದ್ದರು. ಆದರೆ ನಿವಾಸದ ಬಳಿ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ತಡೆದಿದ್ದಾರೆ.
ಬಿಜೆಪಿಗೆ ರಮೇಶ್ ಬಾಬು ಪ್ರಶ್ನೆ
B.Y. Vijayendra ಸುದ್ದಿಗೋಷ್ಠಿ ಮಾಡಿದ್ದ ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಮುಡಾ ಸೈಟ್ ಹಂಚಿಕೆಯಲ್ಲಿ, ಮಾಜಿ ಪ್ರಧಾನಿ ಹೆಚ್ಡೆ ದೇವೆಗೌಡರು ತಮ್ಮ ಕುಟುಂಬ ಸದಸ್ಯರಿಗೆ 48 ನಿವೇಶನಗಳನ್ನು ಹಂಚಿಕೆ ಆರೋಪ ಮಾಡಿದ್ದು, ಬಿಜೆಪಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಬಿಎಸ್ ಯಡಿಯೂರಪ್ಪ 2011ರಲ್ಲಿ ಸಭಾಪತಿಗೆ ಸಲ್ಲಿಸದ ದಾಖಲೆಗಳ ಪ್ರಕಾರ ಹೆಚ್ಡಿ ಕುಮಾರಸ್ವಾಮಿ ಅವರಿಗೆ 300\200 ಹಂಚಿಕೆ ಬಗ್ಗೆ ತಿಳಿಸಿದ್ದಾರೆ. ಇದನ್ನು ಪರಿಷತ್ತಿನ ಕಲಾಪದಲ್ಲಿ ಕೂಡ ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ಬಿಜೆಪಿ ಅವರ ನಿಲುವೇನು ಎಂದು ಪ್ರಶ್ನಿಸಿದ್ದಾರೆ.
ಮುಡಾ ಹಗರಣದಲ್ಲಿ ಯಾರೆಲ್ಲಾ ಬಿಜೆಪಿ ನಾಯಕರು ಎಷ್ಟು ನಿವೇಶಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಲಿ. ಏಕೆಂದರೆ ಬಿಜೆಪಿ ಅಧಿಕಾರಿದಲ್ಲಿ ಇದ್ದಾಗಲೇ ಮೈಸೂರಿನ ಮುಡಾದಲ್ಲಿ ಹೆಚ್ಚು ಹೆಚ್ಚು ಹಗರಣಗಳು ನಡೆದಿವೆ ಎಂದು ಆರೋಪಿಸಿದ್ದಾರೆ.
B.Y. Vijayendra ಮೂಡಾಹಗರಣ ದಾಖಲೆಗೆ ಒತ್ತಾಯಿಸಿ ಬಿ.ವೈ. ವಿಜಯೇಂದ್ರ ನಿವಾಸಕ್ಕೆ ಕಾಂಗ್ರೆಸ್ ಘೇರಾವ್ ಯತ್ನ,ತಡೆದ ಪೊಲೀಸ್
Date: