Kadamba Kannada Vedike ಮಹಾನಗರ ಪಾಲಿಕೆ ವ್ಯಾಪ್ತಿಯ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಬಿ ಬ್ಲಾಕ್‌ನಲ್ಲಿ ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ಹಲವೆಡೆಯ ಮುಖ್ಯ ಸಮಸ್ಯ್ಸೆಗಳ ಈಡೇರಿಕೆಗೆ ಆಗ್ರಹಿಸಿ ಕದಂಬ ಕನ್ನಡ ವೇದಿಕೆ ಪ್ರತಿಭಟಿಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಕದಂಬ ವೇದಿಕೆ ಮುಖಂಡರು, ಶಿವಮೊಗ್ಗ ನಗರ ಅಭಿವೃದ್ಧಿ ಹೊಂದಿದ ನಗರವೆಂದು ಘೋಷಿಸಿರುವುದು ಹಾಸ್ಯಾಸ್ಪದವಾಗಿದೆ. ಸ್ಮಾರ್ಟ್ ಸಿಟಿ, ಅಮೃತ್ ಯೋಜನೆ, ನಗರೋತ್ಪನ್ನ-,೯ ಹಣಕಾಸು ಯೋಜನೆ ಸೇರಿದಂತೆ ನಾನಾ ಕಡೆಯಿಂದ ಹಣ ಬಂದರೂ ಜನಪ್ರತಿನಿಧಿಗಳು ಬೇಜಾವಾಬ್ದಾರಿತನ ಮಾಡುತ್ತಿದ್ದಾರೆ ಎಂದರು.
ಅಧಿಕಾರಿಗಳ ತಾತ್ಸಾರದಿಂದ ವಾರ್ಡ್ ನಂಬರ್-1ರ ಬೊಮ್ಮನಕಟ್ಟೆ “ಬಿ” ಬ್ಲಾಕ್ ಮೈಲಮ್ಮ ದೇವಸ್ಥಾನದ ಎದುರು ರಸ್ತೆಗಳು, ತಿರುವುಗಳು ಇಂದಿಗೂ ಡ್ರೈನೇಜ್, ರಸ್ತೆಗಳಿಲ್ಲ. ಈ ಪ್ರದೇಶದಲ್ಲಿ ಮಾತ್ರವಲ್ಲ ನಗರದ ಅನೇಕ ಕಡೆ ಇದೇ ಪರಿಸ್ಥಿತಿ ಆಗಿರುವುದು ಪಾಲಿಕೆಯ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
Kadamba Kannada Vedike ಮೂಲ ಸೌಲಭ್ಯವಿಲ್ಲದೆ ಇಲ್ಲಿನ ನಾಗರೀಕರು, ವೃದ್ಧರು, ಶಾಲಾ ಮಕ್ಕಳಿಗೆ ಅನಾನುಕೂಲವಾಗಿದೆ. ವಾಸಿಗಳು ವಿಪರೀತ ಸೊಳ್ಳೆ ಕಾಟಗಳಿಂದ ಕಂಗಾಲಾಗಿ ಹೋಗಿದ್ದಾರೆ. ಆದ್ದರಿಂದ ಡೆಂಗ್ಯು ಜ್ವರಕ್ಕೆ ತುತ್ತಾಗುವ ಮುನ್ನ ನೂತನ ಪಾಲಿಕೆ ಆಯುಕ್ತರು ಪರಿಶೀಲಿಸಿ ಸೂಕ್ತ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಕನ್ನಡ ಕದಂಬ ವೇದಿಕೆ ರಾಜ್ಯ ಅಧ್ಯಕ್ಷ ವಿಶ್ವನಾಥ್ ಪಾಲಿಕೆಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಪ್ರಮುಖರು, ಬೊಮ್ಮನಕಟ್ಟೆ ಗ್ರಾಮಸ್ಥರು ಉಪಸ್ಥಿತರಿದ್ದರು.