Vriddhi Charitable Trust ಶಿವಮೊಗ್ಗ ಜಿಲ್ಲಾ ಮೂಕರ ಮತ್ತು ಶ್ರವಣಮಾಂದ್ಯರ ಸಂಘ (ರಿ) ವೃದ್ಧಿ ಚಾರಿಟೇಬಲ್ ಟ್ರಸ್ಟ್ (ರಿ) ಇವರ ಸಹಯೋಗದೊಂದಿಗೆ
ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯಮಟ್ಟದ ಕಿವುಡರ 19ನೇ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್ ಸ್ಪರ್ದೆಯನ್ನು ಮೊದಲ ಸ್ಥಾನವನ್ನು ಮೈಸೂರು ತಂಡ, ಎರಡನೇ ಸ್ಥಾನ, ಬೆಳಗಾವಿ ತಂಡ ಮತ್ತು ಮೂರನೇ ಸ್ಥಾನವನ್ನು ಗದಗ ತಂಡ ಗಳಿಸಿರುತ್ತಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ನವ ದೆಹಲಿಯ ಅಖಿಲ ಭಾರತ ಕಿವುಡರ ಸಂಘದ ಅಧ್ಯಕ್ಷರಾದ ಮಾನ್ಯ ಶ್ರೀ ವಿ.ಕುಮಾರ್‌ರವರು ಈ ಚೆಸ್ ಕ್ರೀಡೆಯು ಮನುಷ್ಯನ ಮೆದುಳು ಮತ್ತು ಕಣ್ಣಿನ ಹಾಗೂ ವಿವಿಧ ಭಾಗಗಳಿಗೆ ಜ್ಞಾನ ಸಂಪತ್ತು, ಬುದ್ಧಿವಂತಿಕೆ ಆಟವಾಗಿರುತ್ತದೆ. ಎಲ್ಲಾ ಕ್ರೀಡೆಗಳಿಗಿಂತಲು ಚೆಸ್ ಆಟವಾಡುವುದು ಮೆದುಳಿನ ಬುದ್ದಿ ಮತ್ತು ಜ್ಞಾನ ತೋರಿಸುವ ಆಟವಾಗಿರುತ್ತದೆ ಎಂದು ಹೇಳಿದರು.
Vriddhi Charitable Trust ಗೌರವಾಧ್ಯಕ್ಷರಾದ ಮಾನ್ಯ ಶ್ರೀ ಕೆ.ಹೆಚ್.ಶಂಕರ್‌ರವರು ಮಾತನಾಡಿ ನಮ್ಮ ದ್ವನಿಗೆ ಬಹಳಷ್ಟು ಸಮಯದಿಂದ ವಿಶೇಷ ಚೇತನರ ಪರ ಏನೇ ಹೋರಾಟ ಮಾಡಿದರೂ ನಮ್ಮ ದ್ವನಿಗೆ ಕಿವುಡರ ಮತ್ತು ಮೂಕರ ಆಹವಾಲುಗಳಿಗೆ ಸ್ಪಂದಿಸುತ್ತಿಲ್ಲ .ಯಾವ ಸಚಿವರಾಗಲಿ, ಶಾಸಕರಾಗಲಿ, ಮಂತ್ರಿಗಳಾಗಲೀ ಸ್ಪಂದಿಸಬೇಕು. ಈಗಾಗಲೇ ಬಹಳಷ್ಟು ಹೋರಾಟಗಳನ್ನು ಮಾಡಿದರು. ಬೆಂಗಳೂರು ವಿಧಾನಸೌದದ ಮುಂದೆ ಹೋರಾಟ ಮಾಡಿದರೂ ಫಲಕಾರಿಯಾಗಿರುವುದಿಲ್ಲ. ಈ ಕೂಡಲೇ ಮುಂದಿನ ಆಹವಾಲುಗಳಿಗೆ ಈಗಿನ ಸರ್ಕಾರ ಸ್ಪಂದಿಸಬೇಕೆಂದು ತಮ್ಮ ಭಾಷಣದಲ್ಲಿ ತಿಳಿಸಿದರು. ಮುಂದಿನ ದಿನಗಳಲ್ಲಿ ಅತೀ ಘೋರವಾದ ಹೋರಾಟ ಮಾಡಲಿದ್ದೇವೆ ಎಂದು ನುಡಿದರು. ಶಿವಮೊಗ್ಗದ ತರಂಗಶಾಲೆ ವೆಂಕಟೇಶ್‌ರವರು ಮಾತನಾಡಿ ಈ ಕೆಲಸ ಮತ್ತು ಕಾರ್ಯಕ್ರಮ ನೇರವೇರುವುದು ಶ್ಲಾಘನೀಯ ಎಂದರು. ಎಸ್.ದೇವರಾಜ್ ಚಿಕ್ಕಮಗಳೂರು ಈ ಕಾರ್ಯಕ್ರಮ ಇನ್ನು ಮುಂದೆ ಯಾವಾಗಲು ನಡೆಯಬೇಕು ಎಂದರು.
ಗೌರವಾಧ್ಯಕ್ಷರಾದ ಓಂಗಣೇಶ ಶೇಟ್‌ರವರು
ಈ ಎಲ್ಲಾ ಕಾರ್ಯಕ್ರಮಗಳನ್ನು ಒಳ್ಳೆಯ ರೀತಿಯಲ್ಲಿ ಬಂದಿರುವಂತಹ ಎಲ್ಲಾ ರಾಜ್ಯದ ಮೂಲೆ ಮೂಲೆಗಳಿಂದ ಎಲ್ಲಾ ಸ್ಪರ್ಧಾಗಳುಗಳಿಗೂ ಹಾಗೂ ಪೋಷಕರಿಗೂ, ಕುಟುಂಬದವರಿಗೂ ಒಳ್ಳೆಯ ಸ್ಪಂದನೆ ನೀಡಿರುತ್ತಾರೆ ಎಂದು ಹೇಳಿದರು. ಅಧ್ಯಕ್ಷರಾದ ಗಿರೀಶ್, ಪ್ರಧಾನಕಾರ್ಯದರ್ಶಿಯಾದ ಅಶ್ವಿನ್‌ಕುಮಾರ್ ವೈ.ಎ., ಇನ್ನತರೆ ಪದಾಧಿಕಾರಿಗಳು ಕಿರಣ್ ಕುಮಾರ್, ಅರುಣ್ ಕುಮಾರ್ ವಿಕ್ರಂ ಎಸ್., ಅರುಣದಾಸ್, ಜೆ.ಮಂಜುಳಾ, ಜಯಮಣ ಜೆ., ಪ್ರದೀಪ್ ಕೆ., ಸಂದೇಶ್ ಎಸ್.ಎನ್, ಭರತ್, ಇನ್ನಿತರರು ಭಾಗವಹಿಸಿದ್ದರು. ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂರುದಿನಗಳ ಕಾಲ ನೆರವೇರಿತು.