Tuesday, February 3, 2026
Tuesday, February 3, 2026

Bhadravati TAPCMS ಭದ್ರಾವತಿ ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಬಿ.ಟಿ.ನಾಗರಾಜ್ ಅವಿರೋಧ ಆಯ್ಕೆ

Date:

Bhadravati TAPCMS ಅನುಭವಿ ರಾಜಕಾರಣಿ ಕಾಂಗ್ರೇಸ್ ಮುಖಂಡ ಮಾಜಿ ನಗರಸಭೆ ಆಧ್ಯಕ್ಷರಾಗಿ ಹಾಲಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಬಿ.ಟಿ.ನಾಗರಾಜ್ ಅವರು ಮತ್ತೊಂದು ಮೆಟ್ಟಿಲೇರಿ ರೈತರ ಕೃಷಿಕರ ಸೇವೆ ಮಾಡಲು ನೂತನ ಅಧ್ಯಕ್ಷರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್‌ಬಾನು ಹೇಳಿದರು.

ಭದ್ರಾವತಿ ನಗರದ ಟಿಎಪಿಸಿಎಂಎಸ್ ನೂತನ ಅಧ್ಯಕ್ಷರಾಗಿ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದ ನಂತರ ಅವರನ್ನು ಅಭಿನಂದಿಸಿ ಮಾತನಾಡಿ ಆಡು ಮುಟ್ಟದ ಸೊಪ್ಪಿಲ್ಲವೆಂಬಂತೆ ನಾಗರಾಜ್ ಅವರು ಸಹಕಾರಿ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿರುವುದು ಸಂತಸ ತಂದಿದೆ. ಕೃಷಿ ಮತ್ತು ರೈತರಿಗಿರುವ ಕೆಲವು ಸಮಸ್ಯೆಗಳನ್ನು ನಿವಾರಿಸಿ ಈ ಕ್ಷೇತ್ರಕ್ಕೆ ಹೆಸರಾಗಲಿ ಎಂದರು.

ನೂತನ ಅಧ್ಯಕ್ಷ ಬಿ.ಟಿ.ನಾಗರಾಜ್ ಮಾತನಾಡಿ ನಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೂ ಸಹಕರಿಸಿದ ಪಕ್ಷದ ಮುಖಂಡರಿಗೂ ಹಾಗೂ ಅಭಿಮಾನಿ ಬಳಗಕ್ಕೂ ಕೃತಜ್ಞತೆ ಸಲ್ಲಿಸಿ ನಮ್ಮ ಅವಧಿಯಲ್ಲಿ ಕೃಷಿಕರ ರೈತರಿಗೆ ಪ್ರಾಮಾಣಿಕ ಸೇವೆ ನೀಡುವುದಾಗಿ ಹೇಳಿದರು.

Bhadravati TAPCMS ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಗ್ರಾಮಾಂತರ ಅಧ್ಯಕ್ಷ ಹೆಚ್.ಎಲ್.ಷಡಾಕ್ಷರಿ, ಮುಖಂಡರಾದ ಬಿ.ಕೆ.ಶಿವಕುಮಾರ್, ಬಸವರಾಜಪ್ಪ, ಹನುಮಂತಪ್ಪ, ನಂಜಪ್ಪ, ಪ್ರಕಾಶ್‌ರಾವ್, ಬಸಂತಪ್ಪ, ಗಿರಿನಾಯ್ಡು, ಜಹೀರ್‌ಜಾನ್, ಸುರೇಶ್, ಆಬಿದಲಿ, ಲಕ್ಷ್ಮೀದೇವಿ, ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್, ಬಿಜೆಪಿ ಅಧ್ಯಕ್ಷ ಧರ್ಮಪ್ರಸಾದ್ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...