Police Department ಶಿವಮೊಗ್ಗ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ರೂ.80 ಕೋಟಿ ವೆಚ್ಚದಲ್ಲಿ ಗುಣಮಟ್ಟದಿಂದ ಕೂಡಿದ ಸುಸಜ್ಜಿತ ವಸತಿಗೃಹಗಳನ್ನು ಲೋಕಾರ್ಪಣೆ ಮಾಡುತ್ತಿರುವುದು ಸಂತಸದ ವಿಷಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ನುಡಿದರು.
ಸೊರಬದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪೊಲೀಸ್ ವಸತಿಗೃಹ ಸಮುಚ್ಚಯ ಉದ್ಘಾಟಿಸಿ ಮಾತನಾಡಿದರು.
ಗೃಹ ಸಚಿವರೇ ಇಂದು ವಸತಿಗೃಹ ಸಮುಚ್ಚಯವನ್ನು ಉದ್ಘಾಟಿಸಬೇಕತ್ತು. ಕಾರಣಾಂತರದಿಂದ ಬರಲಯ ಆಗಲಿಲ್ಲ. ಸೊರಬಕ್ಕೆ ರೂ.೮ ಕೋಟಿ ಸೇರಿದಂತೆ ಜಿಲ್ಲೆಯ ಲ್ಲಿ ರೂ. ೮೦ ಕೋಟಿ ವೆಚ್ಚದ ವಸತಿಗೃಹ ಲೋಕಾರ್ಪಣೆ ಆಗುತ್ತಿರುವುದು ಸಂತೋಷದ ವಿಷಯ. ವಸತಿಗೃಹಗಳು ಗುಣಮಟ್ಟ ದಿಂದ, ಆಶುನಿಕತೆಯಿಂದ ಕೂಡಿದ್ದು ನಿವಾಸಿಗಳು ಚೆನ್ನಾಗಿ ನೋಡಿಕೊಳ್ಳಬೇಕಯ ಎಂದರು. ಜಿಲ್ಲೆಯಲ್ಲಿ ಗಾಂಜಾ ಸೇರಿದಂತೆ ಇತರೆ ಕಾನೂನು ಬಾಹಿರ ವ್ಯವಹಾರಕ್ಕೆ ಪೋಲೀಸ್ ಇಲಾಖೆ ಕಡಿವಾಣ ಹಾಕಬೇಕು. ಹಾಗೂ ಸಾರ್ವಜನಿಕರು ಕೂಡ ಗಾಂಜಾ ಬೆಳೆಸಬೇಡಿ ಎಂದು ಮನವಿ ಮಾಡಿದರು.
ವರದ ನದಿಗೆ ೫ ಬ್ಯಾರೇಜ್ ನಿರ್ಮಾಣಕ್ಕೆಮಂಜೂರಾತಿ ದೊರೆತಿದೆ. ರೂ. ೫೦ ಕೋಟಿ ವೆಚ್ಚದಲ್ಲಿ ಕೆಲಸ ಆರಂಭಿಸಲಾಗುವುದು.
ಶರಾವತಿ ನದಿಯಿಂದ ಸೊರಬ, ಆನವಟ್ಟಿ ಶಿರಾಳಕೊಪ್ಪ ಹಾಗೂ 356 ಹಳ್ಳಿಗಳಿಗೆ
ರೂ.೫೮೬ ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ನೀಡುವ ಯೋಜನೆಗೆ ಮಂಜೂರಾತಿ ದೊರೆತಿದೆ. ಜಿಲ್ಲೆಯಲ್ಲಿಮುಂದಿನ ದಿನಗಳಲ್ಲಿ ಪ್ರತಿ ಮನೆ ಮನೆಗೆ ಕುಡಿಯುವ ನೀರು ನೀಡಲಾಗುವುದು. ಸೊರಬ ತಾಲ್ಲೂಕಿಲ್ಲಿ ೧೩೮೩ ಕೆರೆ ಇದ್ದರೂ ರಬೇಸಿಗೆಯಲ್ಲಿ ನೀರಿಗೆ ತುಂಬಾ ಕಷ್ಟ ಆಗುತ್ತದೆ ಆದ್ದರಿಂದ ಮುಳಗಡೆ ಇಲ್ಲದೆ ದಂಡಾವತಿ ಯೋಜನೆಯಿಂದ ೭೦-೮೦ ಕೆರೆ ತುಂಬಿಸುವ ಯೋಜನೆ ಮೂರು ನಾಲ್ಕು ತಿಂಗಳಲ್ಲಿ ಜಾರಿಗೆ ತರಲಾಗುವುದು.
ದರಕಾಸ್ತು ಭೂಮಿ ಸಮಸ್ಯೆಗಳಿಗೆ ಇತಿಶ್ರೀ ಹಾಡಲು ಸಮಿತಿ ರಚನೆ ಮಾಡಲಾಗುವುದು. ಅರಣ್ಯ ಭೂಮಿಯಲ್ಲಿ ಸಾಗುಔಳಿ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸಬಾರದು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ ಹೊಸದಾಗಿ ಸಾಗುವಳಿ ಮಾಡಬಾರದು ಎಂದರು.
Police Department ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗುವುದು.
ಮುಂದಿನ ವರ್ಷದಿಂದ ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಮೊದಲ ಹಂತದಲ್ಲಿ 20 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ನೀಟ್ ಕೋಚಿಂಗ್ ನೀಡಲಾಗುವುದು. ಹಾಗೂ ವಾರದ6 ದಿನ ೧೦ ನೇ ತರಗತಿವರೆಗಿನ ಮಕ್ಕಳಿಗೆ ಮೊಟ್ಟೆ ಎಂದರು ನೀಡಲಾಗುವುದು
ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಸ್ವಾಗತಿಸಿದರು. ಡಿಜಿಪಿ ಡಾ.ಕೆ.ರಾಮಚಂದ್ರರಾವ್ ಪ್ರಾಸ್ತಾವಿಕ ವಾಗಿ ಮಾತನಾಡಿ, ನಾಲ್ಕು ತಾಲೂಕುಗಳಲ್ಲಿ ಒಟ್ಟು ೧೩೨ ಗುಣಮಟ್ಟದ ವಸತಿಗೃಹ ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ 1.10 ಕೋಟಿ ಪೋಲಿಸರಿದ್ದು,
೨೪ ಗಂಟೆ ಕೆಲಸ ಮಾಡುವ ಇವರಿಗೆ ಅನುಕೂವಾಗಲೆಂದು ವಸತಿಗೃಹ ನಿರ್ಮಾಣ ಕಾರ್ಯ ನಡೆಯುತ್ತಿದೆ. ಪ್ರಸ್ತುತ ೧೦ ಸಾವಿರ ಗೃಹ ನಿರ್ಮಾಣಕ್ಕೆ ಮಂಜೂರು ದೊರೆತಿದ್ದು ಕಾಮಗಾರಿ ಶುರು ಆಗಿದೆ ಎಂದರು.
ಪುರಸಭೆ ಚುನಾಯಿತ ಸದಸ್ಯರು,
ಪೂರ್ವ ವಲಯದ ಉಪ ಪೋಲೀಸ್ ಮಹಾನಿರೀಕ್ಷಕರಾದ ಬಿ.ರಮೇಶ್, ಮುಖ್ಯ ಅಭಿಯಂತರ ಬಿ.ಹೆಚ್ ಮಂಜುನಾಥ್, ಇತರರು ಹಾಜರಿದ್ದರು
Police Department ಕಾನೂನು ಬಾಹಿರ ವ್ಯವಹಾರಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು- ಸಚಿವ ಮಧು ಬಂಗಾರಪ್ಪ
Date: