Puttahalli Hitturu ಶಿವಮೊಗ್ಗ ತಾಲೂಕಿನ ಪುಟ್ಟಹಳ್ಳಿ ಹಿಟ್ಟೂರು ಗ್ರಾಮದಲ್ಲಿ 1 ರಿಂದ 7ನೇ ತರಗತಿಯವರೆಗೆ ಯಶಸ್ವಿಯಾಗಿ ಶಾಲೆ ನಡೆಯುತ್ತಿತ್ತು. ಆದರೆ ಇತ್ತೀಚಿನ ಖಾಸಗಿ ಶಾಲೆಗಳ ಹಾವಳಿಯಿಂದ ಗ್ರಾಮದ ಮಕ್ಕಳನ್ನು ಪೋಷಕರು ಖಾಸಗಿ ಶಾಲೆಗೆ ಸೇರಿಸಲು ಮುಂದಾದರು.
ಇದರಿಂದ ಶಾಲೆಯ ದಾಖಲಾತಿ ಕೇವಲ 12ಕ್ಕೆ ಇಳಿಯಿತು. ಕಾರಣ ಸದರಿ ಶಾಲೆಯನ್ನು ಪಕ್ಕದ ಗ್ರಾಮದ ಶಾಲೆಯಲ್ಲಿ ವಿಲೀನಗೊಳಿಸಲು ತೀರ್ಮಾನಿಸಿ ಕ್ರಮ ಆರಂಭವಾಗಿತ್ತು.
ಗ್ರಾಮದಲ್ಲಿ ಶಾಲೆ ಇಲ್ಲದಂತಾದ ಸಂದರ್ಭದಲ್ಲಿ ಶಾಲೆಯ ಉಸ್ತುವಾರಿ ಸಮಿತಿ ಗ್ರಾಮದ ಪೋಷಕರ ಮನವೊಲಿಸಿ ಖಾಸಗಿ ಶಾಲೆಗೆ ಹೋಗುವ ಮಕ್ಕಳನ್ನು ಮರಳಿ ನಮ್ಮೂರ ಶಾಲೆಗೆ ಸೇರಿಸಲು ಯಶಸ್ವಿಯಾಗಿದ್ದಾರೆ.
ಪೋಷಕರ ಮನವೊಲಿಸಿ ಶಾಲೆಯನ್ನು ಉಳಿಸಿಕೊಳ್ಳವಲ್ಲಿ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಿಟ್ಟೂರು ರಾಜು
ಹರಸಾಹಸವನ್ನೆ ಪಟ್ಟಿದ್ದಾರೆ.
ಒಂದು ಮಗುವಿಗೆ 40 ಸಾವಿರ ಖರ್ಚು ಮಾಡುತ್ತಿದ್ದ ಪೋಷಕರೆಲ್ಲ ಸೇರಿ ಶಾಲೆಗೆ ಒಬ್ಬ ಸ್ಪೋಕನ್ ಇಂಗ್ಲೀಷ್ ಟೀಚರ್‌ನ್ನು ನೇಮಿಸಿಕೊಂಡಿದ್ದಾರೆ.
Puttahalli Hitturu ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸಹ ಇನ್ನೊಬ್ಬ ಶಿಕ್ಷಕರನ್ನು ನಿಯೋಜಿಸಿದ್ದಾರೆ. ಈಗ ಒಟ್ಟು ೪ ಜನ ಶಿಕ್ಷಕರು ೨೫ ಮಕ್ಕಳಿಗೆ ಇಂಗ್ಲೀಷ್ ಕಲಿಕೆಯೊಂದಿಗೆ ಉತ್ತಮ ಶಿಕ್ಷಣವನ್ನು ನೀಡುತ್ತಿದ್ದಾರೆ. ಮತ್ತು ಉಚಿತ ಸಮವಸ್ತ್ರ, ಊಟ ಸೌಲಭ್ಯದೊಂದಿಗೆ ಮಕ್ಕಳ ಶಿಕ್ಷಣ ಉತ್ತಮವಾಗಿ ಸಾಗುತ್ತಿದೆ. ಇಂತಹ ಮಹತ್ಕಾರ್ಯವನ್ನು ಮಾಡಿದ ಶಾಲಾ ಉಸ್ತುವಾರಿ ಸಮಿತಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.