Actor Aniruddha ನಾವೆಲ್ಲ ಸೇರಿ ತುಂಗಾ ನದಿ ಉಳಿಸಬೇಕಿದೆ. ಈ ಬಾರಿ ತುಂಗಾ ಆರತಿ ನಡೆಸಲಾಗುವುದು.. ಪ್ರತಿದಿನ ಸಂಜೆ ತುಂಗಾ ಆರತಿ ನಡೆಯಲಿ. ಇದು ಪ್ರವಾಸಿಗರನ್ನು ಸೆಳೆಯಬಹುದು. ಸ್ವಚ್ಛತೆ ಬಗ್ಗೆ ಪಟ್ಟಿಯನ್ನೇ ಮಾಡಿ ಚರ್ಚಿಸಲಾಗಿದೆ. ಮುಂದಿನ ಪೀಳಿಗೆಗೆ ಅನುಕೂಲವಾಗುವ ಕೆಲಸಗಳನ್ನು ಮಾಡಬೇಕೆಂದು ತುಂಗಾ ನದಿ ಸ್ಚಚ್ಛತೆಗೆ ಪಣ ತೊಟ್ಟಿರುವ ಚಿತ್ರ ನಟ ಅನಿರುದ್ಧ ಹೇಳಿದರು.
ತುಂಗಾ ನದಿ ಮಲೀನತೆ ನಿವಾರಿಸುವ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಅವರು ಮಾತನಾಡಿದರು.
ಈ ವೇಳೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ iತನಾಡಿ, ಮನೆಗಳ ಒಳಚರಂಡಿ ನೀರು ನದಿ ಸೇರದಂತೆ ಪಾಲಿಕೆ ತಡೆಯಬೇಕಿದೆ ಎಂದರು.
ಪಾಲಿಕೆ ಆಯುಕ್ತೆ ಡಾ|| ಕವಿತಾ ಯೋಗಪ್ಪನವರ್ ಮಾತನಾಡಿ, 36 ವಾರ್ಡ್ ನಲ್ಲಿ 6 ವಾರ್ಡ್ ಸ್ಮಾರ್ಟ್ ಸಿಟಿ ವಾರ್ಡ್ ಬರುತ್ತದೆ. ರಿವರ್ ಫ್ರಂಟ್ ನಿರ್ಮಿಸಲಾಗಿದೆ ಇದು ಪಾಲಿಕೆಗೆ ಹ್ಯಾಂಡ್ ಓವರ್ ಆಗುವ ಹಂತದಲ್ಲಿದೆ ಎಂದರು.
ಐಎನ್ ಡಿ (ಇಂಟರ್ ವೆನ್ಷನ್ ಅಙಡ್ ಡೈವರ್ಷನ್)ಯುಜಿಡಿ 7 ರನ್ನಿಂಗ್ ನಲ್ಲಿದೆ. ಯುಜಿಡಿ ಪೈಪ್‌ಲೈನ್ ನೀರು ನದಿ ಸೇರುತ್ತಿದೆ. ಟಾಯ್ಲೆಟ್, ಕಿಚನ್ ಮತ್ತು ಬಾತ್ ರೂಮ್‌ನ ನೀರು ನೇರವಾಗಿ ನದಿ ಸೇರುತ್ತಿದೆ.
ಹೊಸಮನೆ ಕಟಟುವವರಲ್ಲಿ ಬಲವಂತವಾಗಿ ಯುಜಿಡಿ ಸಂಪರ್ಕ ಪಡೆಯಲು ಒತ್ತಾಯಿಸಲಾಗುತ್ತಿದೆ. ಕೆಲವು ಹಳೆಯ ಮನೆಯಲ್ಲಿ ಯುಜಿಡಿ ಸಂಪರ್ಕವಿಲ್ಲ ಎಂದರು.
13 ಪೈಪ್ ಲೈನ್ ಮೂಲಕ ನದಿಗೆ ಮಲೀನತೆ ನೀರು ಫಿಲ್ಟರ್ ಆಗಿ ಸೇರಲಿದೆ. ಎರಡು ಯುಜಿಡಿಯಿಂದ 32 ಎಂಎಲ್‌ಡಿ ಮಲೀನತೆ ನದಿಗೆ ಸೇರುವುದನ್ನು ತಡೆಯಲಿದೆ.
Actor Aniruddha ಇದನ್ನು ಶುದ್ಧಿಕರಿಸಬೇಕಿದೆ. ಗ್ರೇ ವಾಟರ್ ಸಮಸ್ಯೆ ಇದೆ. ಟಾಯ್ಲೆಟ್‌ಗೆ ಯುಜಿಡಿ ಸಂಪರ್ಕ ಪಡೆದರೆ ಕಿಚನ್ ಮತ್ತು ಬಾತ್ ರೂಂನ ಸಂಪರ್ಕದ ನೀರು ನೇರವಾಗಿ ನದಿಗೆ ಸೇರಲಿದೆ. ಮುಂದಿನ ದಿನಗಳಲ್ಲಿ ನದಿ ಮಲೀನತೆ ತಡೆಯಲು ಹಲವು ಕ್ರಮ ಜರುಗಿಸುವುದಾಗಿ ಪಾಲಿಕೆ ಇಂಜಿನಿಯರ್ ತಿಳಿಸಿದರು.
ನದಿಗೆ ನೇರವಾಗಿ ಸೇರದಿರುವಂತೆ ಮತ್ತೊಂದು ಸರ್ವೆ ನಡೆಸಲು ಡಿಸಿ ಗುರುದತ್ ಹೆಗಡೆ ಸೂಚಿಸಿದರು. ಎಲ್ಲೆಲ್ಲಿ ನದಿಗೆ ಕೊಳಚೆ ಸೇರಲಿದೆ ಎನ್ನುವುದನ್ನು ಗುರುತಿಸಿ ಮತ್ತೆ ವರದಿ ನೀಡುವಂತೆ ಮಾಲಿನ್ಯ ನಿಯಂತ್ರಣಾಧಿಕಾರಿಗೆ ಸೂಚಿಸಲಾಯಿತು.