Sahyadri Arts College ಇಂದು ಜನಸಂಖ್ಯೆಯು ಎಂಟು ಬಿಲಿಯನ್ ದಾಟಿದೆ. ಸ್ಫೋಟ ಎನ್ನುವ ವಿಚಾರವು 70ರ ದಶಕಕ್ಕೆ ಸೇರಿದ್ದು. ಇಂದು ಜನಸಂಖ್ಯೆಯನ್ನು ಬಂಡವಾಳವಾಗಿ, ಮಾನವ ಸಂಪನ್ಮೂಲವಾಗಿ ನೋಡಲಾಗುತ್ತಿದೆ. ದುಡಿಯುವ ಆಶಾಭಾವನೆಯೊಂದಿಗೆ ಮಾನವ ಸಂಪನ್ಮೂಲ ಮುನ್ನುಗ್ಗುತ್ತಿದೆ.
ದುಡಿಯುವ ಕೈಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಜನಸಂಖ್ಯಾ ಸ್ಫೋಟ ವಿಚಾರ ಗೌಣವಾಗಲಿದೆ ಎಂದು ಅರ್ಥಶಾಸ್ತ್ರಜ್ಞರಾದ ಡಾ ಜಿ. ನಾರಾಯಣರಾವ್ ಹೇಳಿದರು.
ಅವರು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಐಕ್ಯೂಎಸಿ, ಸಮಾಜಶಾಸ್ತ್ರ, ಅರ್ಥಶಾಸ್ತ್ರ ವಿಭಾಗಗಳ ವತಿಯಿಂದ ಏರ್ಪಡಿಸಿದ್ದ ಅಂತರಾಷ್ಟ್ರೀಯ ಜನಸಂಖ್ಯಾ ದಿನಾಚರಣೆಯ ಅಂಗವಾಗಿ ಜನಸಂಖ್ಯಾ ಸ್ಫೋಟ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
Sahyadri Arts College ನಿವೃತ್ತ ಪ್ರಾಚಾರ್ಯ ಧನಂಜಯ ಕೆ.ಬಿ. ಉದ್ಘಾಟನೆ ನೆರವೆರಿಸಿ ಮಾತನಾಡಿ, ಮೂಲಸಂಪನ್ಮೂಲವು ಆರ್ಥಿಕತೆಯಿಂದಾಗಿ ಇಂದು ಜನರಿಂದಲೇ ಉತ್ಪಾದನೆಯಾಗಿ ಜನರನ್ನೇ ತಲುಪುತ್ತಿದೆ ಎಂದು ಅಭಿಪ್ರಾಯಪಟ್ಟರು.
ಧಾರವಾಡದ ಚಾಣಕ್ಯ ಅಕಾಡೆಮಿ ನಿರ್ದೇಶಕ ಪ್ರದೀಪ್ ಗುಡ್ಡದ , ಜನಸಂಖ್ಯೆಗೆ ಸಂಬಂಧಿಸಿದ ವಿಷಯಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತುಂಬಾ ಅತ್ಯಗತ್ಯ ಎಂದು ನುಡಿದರು.
ಪ್ರಾಚಾರ್ಯ ಸೈಯದ್ ಸನಾವುಲ್ಲ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರೊ. ಪೂರ್ವಾಚಾರ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಪ್ರೊ. ಮುದುಕಪ್ಪ ಸ್ವಾಗತಿಸಿದರು.
ಪ್ರೊ. ಹೆಚ್ ವಿ ನಾಗರಾಜ್ ನಿರೂಪಿಸಿ, ವಂದಿಸಿದರು. ಪ್ರಾಧ್ಯಾಪಕರಾದ ಕೃಪಾಲಿನಿ ಎಚ್. ಎಸ್., ಹಾಲಸ್ವಾಮಿ, ರಾಧಾ, ಆಶಾ, ಲಕ್ಷ್ಮಿಪುತ್ರ ಮತ್ತು ಅರ್ಥಶಾಸ್ತ್ರ ಹಾಗೂ ಸಮಾಜಶಾಸ್ತ್ರ ವಿದ್ಯಾರ್ಥಿಗಳು ಹಾಜರಿದ್ದರು.