Dengue ಡೆಂಗ್ಯೂ ಪ್ರಕರಣಗಳು ಪ್ರತಿನಿತ್ಯ ಉಲ್ಬಣಗೊಳ್ಳುತ್ತಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿ, ನಿಯಂತ್ರಿಸಲು ಅಧಿಕಾರಿಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಎಸ್ ಎನ್ ಚನ್ನಬಸಪ್ಪ ಅವರು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.
ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಬುಧವಾರ ನಡೆದ ಡೆಂಗ್ಯೂ ನಿಯಂತ್ರಣದ ಕುರಿತಾದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿವಮೊಗ್ಗ ನಗರ ಜಿಲ್ಲೆಯ ಮುಖ್ಯಕೇಂದ್ರವಾಗಿದ್ದು ನಗರದಲ್ಲಿ ಡೆಂಗ್ಯೂ ಪ್ರರಕಣಗಳು ಹೆಚ್ಚಾಗದಂತೆ ಕಟೆಚ್ಚರ ವಹಿಸಿ ನಿಯಂತ್ರಣಕ್ಕೆ ಬೇಕಾದ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.
ಈ ವೇಳೆ ಡಿಹೆಚ್‍ಓ ಡಾ.ನಟರಾಜ್ ಅವರು ಮಾತನಾಡಿ ಶಿವಮೊಗ್ಗ ನಗರ ಪ್ರದೇಶದಲ್ಲಿ 471 ಜನರಿಗೆ ಡೆಂಗ್ಯೂ ಪರೀಕ್ಷೆ ಮಾಡಲಾಗಿದ್ದು 54 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಪ್ರತಿ ವಾರ್ಡ್ ಗಳಲ್ಲಿ ಲಾರ್ವ ಸಮೀಕ್ಷೆ ನಡೆಸಲಾಗುತ್ತಿದ್ದು ಪ್ರತಿ ಶುಕ್ರವಾರ ಡ್ರೈಡೇ ಆಚರಿಸಲಾಗುತ್ತಿದೆ. ಆಶಾ ಕಾರ್ಯಕರ್ತೆರು, ಸ್ಥಳೀಯರು, ವೈದ್ಯಕೀಯ ವಿದ್ಯಾರ್ಥಿಗಳನ್ನು ಬಳಸಿಕೊಂಡು ಸರ್ವೆ ಕಾರ್ಯ ಮಾಡಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಈ ಕಾರ್ಯದಲ್ಲಿ ಎಲ್ಲಾ ಇಲಾಖೆಗಳನ್ನು ಬಳಸಿಕೊಳ್ಳಲಾಗಿದೆ. ಗಪ್ಪಿಮೀನು , ಪಾಸಿಟಿವ್ ಕೇಸ್ ಇರವ ಕಡೆಗಳಲ್ಲಿ ಸೊಳ್ಳೆಯನ್ನು ನಿಯಂತ್ರಿಸುವ ಹೊಗೆಗಳ ಸಿಂಪಣೆ ಮಾಡಲಾಗುತ್ತಿದ್ದು ಡೆಂಗ್ಯೂ ನಿಯಂತ್ರಣದಲ್ಲಿ ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ. ಪ್ರತಿಯೊಬ್ಬರು ಕಾಯಿಲೆಯ ಕುರಿತು ಎಚ್ಚರಿಕೆ ವಹಿಸಬೇಕಾಗಿದೆ ಎಂದರು.
ಶಾಸಕರು ಪ್ರತಿಕ್ರಿಯಿಸಿ, ನÀಗರದ ಜನತೆಯ ಆರೋಗ್ಯ ಮತ್ತು ಜೀವವನ್ನು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬ ಅಧಿಕಾರಿಯೂ ಡೆಂಗ್ಯೂ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು. ಕೋವಿಡ್ ಸಂದರ್ಭದಲ್ಲಿ ಹೇಗೆ ಸಂಘಟಿತವಾಗಿ ಕೆಲಸ ಮಾಡಿಲಾಯಿತೊ ಅದೇ ರೀತಿಯಲ್ಲಿ ಡೆಂಗ್ಯೂ ನಿಯಂತ್ರಿಸುವಲ್ಲಿ ನಿಮ್ಮೆಲರ ಸೇವೆ, ಸಹಕಾರ ಅಗತ್ಯವಾಗಿದೆ.
Dengue ನಗರದ 35 ವಾರ್ಡ್‍ಗಳಲ್ಲಿ ಸೊಳ್ಳೆಯನ್ನು ನಿಯಂತ್ರಿಸುವ ಔಷಧಯುಕ್ತ ಹೊಗೆ ಸಿಂಪಣೆ ಮಾಡುತ್ತಿದ್ದು ಅತೀ ವೇಗವಾಗಿ ಈ ಕಾರ್ಯ ಪೂರ್ಣಗೊಳ್ಳಬೇಕಿದೆ. ಮಹಾನಗರ ಪಾಲಿಕೆ ಆಯುಕ್ತರು ಈ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕು. ಆರೋಗ್ಯದ ವಿಷಯದಲ್ಲಿ ಖರ್ಚು ಮಾಡಲು ಹಿಂದೇಟು ಹಾಕಬಾರದು, ಸಾವು ನೋವುಗಳು ಆಗುತ್ತಿರುವ ಸಂದರ್ಭದಲ್ಲಿ ಕಾರ್ಯಪ್ರವೃತ್ತರಾಗಿ ಎಚ್ಚರಿಕೆಯಿಂದ ಕೆಲಸ ಮಾಡಿದರೆ ಮಾತ್ರ ಕಾಯಿಲೆ ನಿಯಂತ್ರಿಸಲು ಸಾಧ್ಯ ಎಲ್ಲಾ ಇಲಾಖೆಗಳ ಸಹಕಾರ ತೆಗೆದುಕೊಳ್ಳಿ ಎಂದು ಸೂಚಿಸಿದರು.
ಮನೆಮನೆಗಳಿಗೆ ತೆರಳಿ ಲಾರ್ವಾ ಸರ್ವೆ ಮಾಡಲು ಸ್ವಯಂ ಸೇವಕರು, ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಸರ್ವೆ ಕಾರ್ಯ ನಡೆಸಲು ಆರೋಗ್ಯ ಇಲಾಖೆ ಚಿಂತನೆ ಮಾಡಿದ್ದು ಈ ಕಾರ್ಯಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುವುದು. ಮಹಿಳಾ ಸಂಘ, ಕನ್ನಡ ಯುವಕ ಸಂಘ, ಗಣಪತಿ ಸಂಘಟನೆಗಳು, ಸಂಘಸಂಸ್ಥೆಗಳ ಸಭೆ ಕರೆದು ಸಹಕಾರ ಕೋರಿ ಈ ಡೆಂಗ್ಯೂ ನಿಯಂತ್ರಣಕ್ಕೆ ಮುಂದಾಗಬೇಕು. ಅಧಿಕಾರಿಗಳು ಪ್ರತಿ ವಾರ್ಡ್‍ಗಳಲ್ಲಿಯೂ ಸರಿಯಾದ ಪ್ರವಾಸ ಮಾಡಿ ಗಂಭೀರವಾಗಿ ತೆಗೆದುಕೊಂಡು ವ್ಯವಸ್ಥಿತವಾಗಿ ಕಾರ್ಯ ಮಾಡಿದ್ದಾರೆ ಡೆಂಗ್ಯೂ ತೊಲಗಿಸಲು ಸಾಧ್ಯ ಎಂದರು.
ಈ ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತರಾದ ಡಾ.ಕವಿತ ಯೋಗಪ್ಪನವರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ ಸಿದ್ದನ ಗೌಡ ಪಾಟಿಲ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ, ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್,ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.
Dengue ಡೆಂಗ್ಯು ನಿಯಂತ್ರಣ ಪರಿಣಾಮಕಾರಿಯಾಗಿ ಆಗಬೇಕು- ಶಾಸಕ ಚನ್ನಬಸಪ್ಪ
Date: