Shivamogga Police ಮನೆಯೊಂದರ ಮುಂಭಾಗ ನಿಲ್ಲಿಸಿದ್ದ ಬೈಕ್ ವೊಂದನ್ನು ಕಳ್ಳನೋರ್ವ ನಕಲಿ ಕೀ ಬಳಸಿ ಕೊಂಡೊಯ್ದ ಘಟನೆ ಶಿವಮೊಗ್ಗ ನಗರದ ಬಸ್ ನಿಲ್ದಾಣ ಸಮೀಪದ ಪಿಡಬ್ಲ್ಯೂಡಿ ಕ್ವಾಟರ್ಸ್ ನಲ್ಲಿ ನಡೆದಿದೆ.
ಕಳುವಾದ ಬೈಕ್ ಕುಮಾರಸ್ವಾಮಿ ರಾಮಚಂದ್ರ ಎಂಬುವರಿಗೆ ಸೇರಿದ್ದಾಗಿದೆ. ಸದರಿ ಕಳ್ಳತನ ಕೃತ್ಯವು ಮನೆಯ ಮುಂಭಾಗ ಅಳವಡಿಸಿರುವ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
ಸುಮಾರು 60 ಸಾವಿರ ರೂಪಾಯಿ ಮೌಲ್ಯದ ಸ್ಪ್ಲೆಂಡರ್ ಪ್ಲಸ್ ಬೈಕ್ ನ್ನು ಕಳವು ಮಾಡಲಾಗಿದೆ.
ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆನೆ ಎಂದು ಕುಮಾರಸ್ವಾಮಿ ರಾಮಚಂದ್ರ ಅವರು ತಿಳಿಸಿದ್ದಾರೆ.
ಮುಂಜಾನೆ ಸರಿಸಮಾರು 4 ಗಂಟೆ ವೇಳೆಗೆ ಕುಮಾರಸ್ವಾಮಿ ರಾಮಚಂದ್ರ ಅವರ ಮನೆ ಬಳಿ ಜೀನ್ಸ್ ಪ್ಯಾಂಟ್ ಹಾಗೂ ಟೀ ಶರ್ಟ್ ಧರಿಸಿದ್ದ ಕಳ್ಳ ಆಗಮಿಸಿದ್ದು, ಕ್ಷಣ ಮಾತ್ರದಲ್ಲಿಯೇ ನಕಲಿ ಕೀ ಬಳಸಿ ಬೈಕ್ ನ ಹ್ಯಾಂಡ್ ಲಾಕ್ ತೆರೆದಿದ್ದಾನೆ. ನಂತರ ಶಬ್ದವಾಗದಂತೆ ಸ್ವಲ್ಪ ದೂರದವರೆಗೆ ಬೈಕ್ ತಳ್ಳಿಕೊಂಡು ಹೋಗಿದ ಕಳ್ಳ, ನಂತರ ಬೈಕ್ ಆನ್ ಮಾಡಿಕೊಂಡು ಪರಾರಿಯಾಗಿದ್ದಾನೆ.
Shivamogga Police ಕುಮಾರಸ್ವಾಮಿ ರಾಮಚಂದ್ರ ಅವರು ಬೆಳಿಗ್ಗೆ ಎದ್ದು ಮನೆ ಹೊರಭಾಗ ಆಗಮಿಸಿದಾಗ ಬೈಕ್ ಇಲ್ಲದಿರುವುದು ಗೊತ್ತಾಗಿದೆ. ನಂತರ ಮನೆಯ ಸಿಸಿ ಕ್ಯಾಮರಾ ದೃಶ್ಯಾವಳಿ ವೀಕ್ಷಿಸಿದಾಗ ಬೈಕ್ ಕಳುವಾಗಿರುವುದು ಬೆಳಕಿಗೆ ಬಂದಿದೆ.