BSNL Company ಟೆಲಿಕಾಂ ಕ್ಷೇತ್ರದ ದೈತ್ಯಗಳಲ್ಲಿ ಒಂದಾಗಿರುವ ಸರ್ಕಾರಿ ಸೌಮ್ಯದ ಬಿಎಸ್‌ಎನ್‌ಎಲ್ ಈಗ ಗ್ರಾಹಕರನ್ನು ತನ್ನತ್ತ ಸೆಳೆಯಲು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಆರಂಭದಲ್ಲಿ ಅಗ್ಗದ ರಿಚಾರ್ಜ್ ಪ್ಲ್ಯಾನ್ ನೀಡಿ ಬಳಕೆದಾರರನ್ನು ಸೆಳೆದ ಬಿಎಸ್‌ಎನ್‌ಎಲ್, ಈಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು, ಮತ್ತೊಂದು ವಲಯದಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಿಗಿ ಗೊಳಿಸಿಕೊಳ್ಳಲು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ.
ಜುಲೈನಲ್ಲಿ ಖಾಸಗಿ ಕಂಪನಿಗಳ ರಿಚಾರ್ಜ್ ದರಗಳಲ್ಲಿ ಏರಿಕೆ ಕಂಡಿದ್ದರಿಂದ ಬಳಕೆದಾರರ, ಬಿಎಸ್‌ಎನ್‌ಎಲ್‌ನತ್ತ ಮುಖ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ, ಬಿಎಸ್‌ಎನ್‌ಎಲ್ ಹಲವು ರಾಜ್ಯಗಳಲ್ಲಿ 4ಜಿ ಸೇವೆಯನ್ನು ಆರಂಭಿಸಿದ್ದು, ಮತ್ತೊಮ್ಮೆ ಈ ಕ್ಷೇತ್ರದಲ್ಲಿ ತನ್ನ ಹಿಡಿತವನ್ನು ಸಾಧಿಸಲು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ.
ಈ ಕಂಪನಿಯ ರಿಚಾರ್ಜ್ ಪ್ಲ್ಯಾನ್‌ಗಳು ಬೇರೆ ಕಂಪನಿಗಳ ಪ್ಲ್ಯಾನ್‌ಗಳಿಗಿಂತ ಅಗ್ಗವಾಗಿವೆ.
ಕೆಲವೇ ಕ್ಷಣಗಳಲ್ಲಿ ಈ ಜಿಲ್ಲೆಗಳಿಗೆ ಭಾರಿ ಭರ್ಜರಿ ಮುಂಗಾರು ಮಳೆ!
ಗ್ರಾಹಕರ ಮುಖದಲ್ಲಿ ಮಂದಹಾಸ
ಖಾಸಗಿ ಟೆಲಿಕಾಂ ಕಂಪನಿಗಳಿಗೆ ಪೈಪೋಟಿ ನೀಡಲು BSNL ಸಂಪೂರ್ಣ ತಯಾರಿ ನಡೆಸಿದೆ.
ಬಿಎಸ್‌ಎನ್‌ಎಲ್ ತನ್ನ ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಉಚಿತ ಕರೆ ಮತ್ತು ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ನೀಡುತ್ತಿದೆ. ಬಿಎಸ್‌ಎನ್‌ಎಲ್ ದೆಹಲಿ ಮತ್ತು ಮುಂಬೈ ಹೊರತುಪಡಿಸಿ ದೇಶದ ಮೂಲೆ ಮೂಲೆಗಳಲ್ಲಿ ತನ್ನ ವ್ಯಾಪ್ತಿಯನ್ನು ಪಸರಿಸಿದೆ.
BSNL Company ಕಂಪನಿಯು ದೇಶಾದ್ಯಂತ ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್ ಸೇವೆಗಳನ್ನು ನೀಡುತ್ತದೆ. ಖಾಸಗಿ ಟೆಲಿಕಾಂ ಕಂಪನಿಗಳ ದುಬಾರಿ ರೀಚಾರ್ಜ್ ಯೋಜನೆಗಳ ನಡುವೆ, BSNL ಅಂತಹ ಅನೇಕ ಯೋಜನೆಗಳನ್ನು ಹೊಂದಿದೆ, ಇದರಲ್ಲಿ ಬಳಕೆದಾರರಿಗೆ ಸೂಪರ್ಫಾಸ್ಟ್ ಇಂಟರ್ನೆಟ್ ಅನ್ನು ಸೌಲಭ್ಯವನ್ನು ಪಡೆಯಬಹುದು.
1000GB ಡೇಟಾ
ಸರ್ಕಾರಿ ಟೆಲಿಕಾಂ ಕಂಪನಿಯ ಭಾರತ್ ಫೈಬರ್‌ಗಾಗಿ, ಕಂಪನಿಯು ಅಂತಹ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬಳಕೆದಾರರಿಗೆ ಸೂಪರ್‌ಫಾಸ್ಟ್ ವೇಗದಲ್ಲಿ 1000GB ಡೇಟಾವನ್ನು ಬಳಸಬಹುದಾಗಿದೆ.
BSNL ನ ರೂ 329 ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ, ಬಳಕೆದಾರರಿಗೆ 25Mbps ವೇಗದಲ್ಲಿ 1000GB ಡೇಟಾವನ್ನು ನೀಡಲಾಗುತ್ತಿದೆ. ಈ ಯೋಜನೆಯ ವ್ಯಾಲಿಡಿಟಿ ಒಂದು ತಿಂಗಳದ್ದಾಗಿದೆ.
ಖಾಸಗಿ ಕಂಪನಿಗಳ ರಿಚಾರ್ಜ್ ಪ್ಲ್ಯಾನ್ ದುಬಾರಿ: BSNLನತ್ತ ಮುಖ ಮಾಡಿರು ಗ್ರಾಹಕ
ಕಂಪನಿಯ 399 ರೂ. ಭಾರತ್ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ 30Mbps ವೇಗದಲ್ಲಿ 1400GB ಡೇಟಾವನ್ನು ನೀಡಲು ಮುಂದಾಗಿದೆ. ಈ ಎರಡೂ ಬ್ರಾಡ್‌ಬ್ಯಾಂಡ್ ಯೋಜನೆಗಳು ವಿಶೇಷವಾಗಿ ಗ್ರಾಮೀಣ ಪ್ರದೇಶದ ಬಳಕೆದಾರರಿಗೆ ತುಂಬ ಅನುಕೂಲವಾಗುತ್ತವೆ.
ಹಳೆಯ ಗ್ರಾಹಕರಿಗೂ ಭರ್ಜರಿ ಯೋಜನೆ
ಬಿಎಸ್‌ಎನ್‌ಎಲ್ ತನ್ನ ಹಳೆಯ ಗ್ರಾಹಕರ ಮುಖದಲ್ಲೂ ಮಂದಹಾಸ ಮೂಡಿಸಿದೆ. ಹಳೆಯ ಕಸ್ಟಮರ್‌ಗೆ ಎರಡು ಯೋಜನೆಗಳನ್ನು ಪರಿಚಯಿಸಿದೆ, ಇದು ರೂ 249 ಮತ್ತು ರೂ 299 ನಲ್ಲಿ ಬರುತ್ತದೆ. ರೂ 249 ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ, ಬಳಕೆದಾರರಿಗೆ 25Mbps ವೇಗದಲ್ಲಿ 10GB ಡೇಟಾವನ್ನು ನೀಡಲಾಗುತ್ತದೆ. ಇದರ ನಂತರ, ಬಳಕೆದಾರರಿಗೆ 2Mbps ವೇಗದಲ್ಲಿ ಅನಿಯಮಿತ ಇಂಟರ್ನೆಟ್ ಅನ್ನು ಬಳಸಬಹುದಾಗಿದೆ. ಅದೇ ಸಮಯದಲ್ಲಿ, 299 ರೂಗಳ ಯೋಜನೆಯಲ್ಲಿ, 20GB ಡೇಟಾವನ್ನು 25Mbps ವೇಗದಲ್ಲಿ ನೀಡಲಾಗುತ್ತದೆ.
ಇದರ ಜೊತೆಗೆ ಈ ಎಲ್ಲ ಪ್ಲ್ಯಾನ್‌ಗಳ ಉಚಿತ ಕರೆಗಳನ್ನು ಸಹ ನೀಡಲು ಬಿಎಸ್‌ಎನ್‌ಎಲ್ ತೀರ್ಮಾನಿಸಿದೆ.