Natyatharanga Trust ಸಾಗರದ ಶ್ರೀನಗರ ನಾಟ್ಯತರಂಗ ಟ್ರಸ್ಟ್ ವತಿಯಿಂದ ನೃತ್ಯ ಭಾಸ್ಕರ ಸಭಾಂಗಣದಲ್ಲಿ ಜುಲೈ 15 ರಿಂದ ಸಂಗೀತ ಪ್ರದರ್ಶನ ಕಲೆಗಳ ಸರ್ಟಿಫಿಕೇಟ್ ಮತ್ತು ಡಿಪ್ಲೋಮಾ ಕೋರ್ಸ್‌ನ್ನು ಆರಂಭಿಸಲಾಗುವುದು ಎಂದು ನಾಟ್ಯತರಂಗ ಟ್ರಸ್ಟ್ ಸಂಚಾಲಕ ವಿದ್ವಾನ್ ಜಿ.ಬಿ.ಜನಾರ್ದನ್ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಮೈಸೂರಿನಲ್ಲಿರುವ ಗಂಗೂಬಾಯಿ ಹಾನಗಲ್ ಸಂಗೀತ ಪ್ರದರ್ಶನಗಳ ಕಲೆಗಳ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆಯಾಗಿದೆ. ಸಂಗೀತ ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಇರುವುದು ಭಾರತದಲ್ಲಿ ಎರಡು ಕಡೆ ಮಾತ್ರ. ಗುಜರಾತಿನಲ್ಲಿ ಹಾಗೂ ಕರ್ನಾಟಕದ ಮೈಸೂರಿನಲ್ಲಿ ಎಂದರು.
ನಮ್ಮ ಸಂಸ್ಥೆಯಿಂದ ಕಳೆದ ೩೦ ವರ್ಷಗಳಿಂದ ನೃತ್ಯ ತರಬೇತಿ, ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಇವುಗಳ ಅವಧಿ ಮೂರು ವರ್ಷ ಅವಧಿಯದ್ದಾಗಿದೆ. ಜ್ಯೂನಿಯರ್ ಮತ್ತು ಸೀನಿಯರ್ ಹಾಗೂ ವಿದ್ವತ್ ಪರೀಕ್ಷೆಯನ್ನು ನಡೆಸುತ್ತಿದ್ದು, ಇವುಗಳ ಅವಧಿ ಪ್ರತಿ ಕೋರ್ಸ್‌ಗೂ ಮೂರು ವರ್ಷದಂತೆ ದೀರ್ಘ ಕಾಲ ಅಭ್ಯಾಸ ಮಾಡಬೇಕಾಗುತ್ತದೆ. ಆದರೆ ವಿಶ್ವವಿದ್ಯಾಲಯದಿಂದ ನೃತ್ಯ, ಸಂಗೀತದ ಸರ್ಟಿಫಿಕೇಟ್ ಕೋರ್ಸ್ ಆರು ತಿಂಗಳು ಹಾಗೂ ಡಿಪ್ಲೋಮಾ ಕೋರ್ಸ್ ಒಂದು ವರ್ಷ ಅಭ್ಯಾಸ ಮಾಡಿ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು.
Natyatharanga Trust ಪರೀಕ್ಷೆಯನ್ನೂ ಇಲ್ಲೇ ನಡೆಸಲಾಗುತ್ತದೆ ಎಂದರು.
ನಾಟ್ಯತರಂಗ ಟ್ರಸ್ಟ್‌ನ ವರದಾಂಬಿಕಾ ಜನಾರ್ದನ್ ಹಾಜರಿದ್ದರು.
ಸಂಗೀತ, ನೃತ್ಯಾಸಕ್ತರು ವಿದ್ವಾನ್ ಜಿ.ಬಿ.ಜನಾರ್ದನ್ ಮೊ. 9449808181 ನ್ನು ಸಂಪರ್ಕಿಸಬಹುದು.