Udda Langada College Dinagalu ಪ್ರತಿಯೊಬ್ಬರ ಬದುಕಲ್ಲೂ ಬಾಲ್ಯದ ನೆನಪುಗಳ ಆಪ್ತತೆ ನಮ್ಮನ್ನು ಕಾಡುತ್ತದೆ, ಬಾಲ್ಯದ ದಿನಗಳ ಕಳಕಳಿ ಅಂದಿನ ಜೀವನ ಮೌಲ್ಯಗಳಿಂದು ಮರೆಯಾಗುತ್ತಿದೆ. ಕಾಲಘಟ್ಟಕ್ಕೆ ತಕ್ಕಂತೆ ಮನಸ್ಥಿತಿ ಬದಲಾಗುತ್ತಿದೆ ಎಂದು ಬೆಂಗಳೂರಿನ ಸಾಹಿತ್ಯ ಸಂಸ್ಕೃತಿ ಚಿಂತಕಿ ಅಶ್ವಿನಿ ಹೊದಲ ಹೇಳಿದರು.
ತೀರ್ಥಹಳ್ಳಿ ತಾಲೂಕಿನ ಹೊದಲದ ಅಂಬಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಟಿ.ಜಿ.ಹರೀಶ್ ಒಡ್ಡಿನಬಯಲು ರವರ “ಉದ್ದ ಲಂಗದ ಕಾಲೇಜು ದಿನಗಳು” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕದ ಕುರಿತು ಮಾತನಾಡಿದರು.
ಈ ಕೃತಿಯಲ್ಲಿ ಎಂಬತ್ತು- ತೊಂಭತ್ತರ ದಶಕದ ಮಲೆನಾಡ ಬದುಕಿನ ಚಿತ್ರಣದ ವಿಶಿಷ್ಠ ಪ್ರಬಂಧಗಳ ಸಂಕಲನವಾಗಿದೆ. ಹಳೆಯ ನೆನಪುಗಳನು ಹೊಸತನದಲ್ಲಿ ಅಕ್ಷರಗಳ ಮೂಲಕ ಚಿತ್ರಿಸಿದ್ದಾರೆ. ನೆನಪುಗಳು ನಮಗೆ ಖುಷಿಕೊಡುತ್ತದೆ,ನೆನಪುಗಳು ಸಂಪನ್ನವಾದರೆ ಸದಾ ಯೋಚಿಸುತ್ತೇವೆ. ಬಾಲ್ಯದ ದಿನಗಳ ಮಲೆನಾಡ ಮಳೆ,ಹಬ್ಬಹರಿದಿನ,ಗದ್ದೆ ಕೊಯ್ಲು,ಅಡಿಕೆ ಕೊಯ್ಲು,ಶಾಲೆಯ ಆಟಗಳು ಮುಂತಾದ ಬದುಕಿನ ಪಾತ್ರಗಳು ಓದುಗರನ್ನು ಕಾಡುವ ಕೃತಿಯಿದು.
ಇಂದಿನ ಮಕ್ಕಳು,ಯುವಪೀಳಿಗೆ ಪುಸ್ತಕ ಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದರು.
ಕೃತಿಕಾರ ಟಿ.ಜಿ.ಹರೀಶ್ ಒಡ್ಡಿನಬಯಲು ಮಾತನಾಡಿ, ಕಲೆ,ಸಂಸ್ಕೃತಿಯ ಮರೆವು ಇಂದಿನ ಯುವ ಪೀಳಿಗೆಗೆ ಕಾಡುತಿದೆ,ಇಂದಿನ ಮಕ್ಕಳಿಗೆ ಜೀವನ ಅನುಭವಗಳು ಬೇಡವಾಗಿದೆ ಎಂದು ವಿಷಾದಿಸಿದರು.
ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಸಂಸ್ಕೃತಿ ಚಿಂತಕ ಸದ್ಯೋಜಾತ ಭಟ್ ಮಾತನಾಡಿದರು. ವಿಶೇಷ ಆಹ್ವಾನಿತರಾಗಿ ತುಂಗಾ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ನಟರಾಜ್ ಅರಳಸುರಳಿ , ಬಾಳೆಹೊನ್ನೂರಿನ ಬಿ.ಜಿ.ಎಸ್.ಪ.ಪೂ ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ್ ವೈ.ಎ, ಹಾಗೂ ಹೊದಲ ಬಸವರಾಜ್ ಮಾತನಾಡಿದರು. ಅಧ್ಯಕ್ಷತೆಯನ್ನು ಎ.ಆರ್.ಶ್ರೀಧರ್ ಅರಳಾಪುರ ವಹಿಸಿದ್ದರು.
Udda Langada College Dinagalu ವೇದಿಕೆಯಲ್ಲಿ ಹಿರಿಯ ರಂಗಕಲಾವಿದ ಟಿ.ಪಿ.ಸೀತಾರಾಮಯ್ಯ, ಟಿ.ಜಿ.ಜಗದೀಶ್ ಉಪಸ್ಥಿತರಿದ್ದರು. ಹೆಚ್.ಆರ್.ಭಾಸ್ಕರ್ ಶೆಟ್ಟಿ ಸ್ವಾಗತಿಸಿ,ವಿಶ್ವನಾಥ್ ಪ್ರಭು ಪ್ರಾಸ್ತಾವಿಸಿ,ಶ್ರೀ ಹರ್ಷ ಅರಳಾಪುರ ವಂದಿಸಿ,ಹೆಚ್.ಜಿ.ಪ್ರಕಾಶ್ ನಿರೂಪಿಸಿದರು.