High Court of Gujarat ಗುಜರಾತ್‌ನ ಕಚ್ ಜಿಲ್ಲೆಯ ಮುಂದ್ರಾ ಗ್ರಾಮಸ್ಥರು 13 ವರ್ಷಗಳ ಕಾಲ ನಡೆಸಿದ ಕಾನೂನು ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಸರ್ಕಾರ 2005ರಲ್ಲಿ ಅದಾನಿ ಸಮೂಹಕ್ಕೆ ಮಂಜೂರು ಮಾಡಿದ್ದ 108 ಹೆಕ್ಟೇರ್ ಗೋಮಾಳದ ಜಾಗವನ್ನು ಮರಳಿ ಗ್ರಾಮಸ್ಥರಿಗೆ ನೀಡಲು ನಿರ್ಧಿರಿಸಿರುವುದಾಗಿ ಹೈಕೋರ್ಟ್‌ಗೆ ತಿಳಿಸಿದೆ.
ವಿಶೇಷ ಅರ್ಥಿಕ ವಲಯ (ಸೆಝ್) ಮತ್ತು ಅದಾನಿ ಬಂದರಿಗೆ 231 ಎಕರೆ ಗೋಮಾಳದ ಜಾಗವನ್ನು ಮಂಜೂರು ಮಾಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು.
ಸರ್ಕಾರ 2005ರಲ್ಲಿ ಜಮೀನು ಮಂಜೂರು ಮಾಡಿದ್ದರೂ ಈ ವಿಚಾರ ಗ್ರಾಮಸ್ಥರಿಗೆ ತಿಳಿದಿರಲಿಲ್ಲ. 2010ರಲ್ಲಿ ಅದಾನಿ ಬಂದರು ಮತ್ತು ಸೆಝ್ ಜಂಟಿಯಾಗಿ ತಮಗೆ ಮಂಜೂರಾದ ಜಮೀನಿಗೆ ಬೇಲಿ ಹಾಕಲು ಮುಂದಾಗಿತ್ತು. ಈ ವೇಳೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಕಾನೂನು ಹೋರಾಟಕ್ಕೆ ಧುಮುಕಿದ್ದರು.
ಗ್ರಾಮಸ್ಥರ ಪ್ರಕಾರ, 279 ಎಕರೆ ಗೋಮಾಳದ ಜಾಗದಲ್ಲಿ 45 ಎಕರೆ ಬಿಟ್ಟು ಉಳಿದ 231 ಎಕರೆಯನ್ನು ಕಾರ್ಪೋರೇಟ್ ವಲಯಕ್ಕೆ ಮಂಜೂರು ಮಾಡಲಾಗಿತ್ತು. ಗೋಮಾಳದ ಕೊರತೆ ಎದುರಿಸುತ್ತಿದ್ದ ಗ್ರಾಮಸ್ಥರಿಗೆ ಇದರಿಂದ ಇನ್ನಷ್ಟು ಸಮಸ್ಯೆ ಆಗಿತ್ತು. ಗೋಮಾಳದ ಜಾಗ ಸಮುದಾಯದ ಸಂಪನ್ಮೂಲ ಎಂದು ಅವರು ಪ್ರತಿಪಾದಿಸಿದ್ದರು.
High Court of Gujarat 2014ರಲ್ಲಿ ಹೆಚ್ಚುವರಿ 387 ಎಕರೆ ಸರ್ಕಾರಿ ಭೂಮಿಯನ್ನು ಗೋಮಾಳಕ್ಕಾಗಿ ಮಂಜೂರು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ ಎಂದು ರಾಜ್ಯ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದ್ದ ಹಿನ್ನೆಲೆ ಹೈಕೋರ್ಟ್ ಪಿಐಎಲ್ ಇತ್ಯರ್ಥಪಡಿಸಿತ್ತು.
High Court ಆದರೆ, ಅದು ಸಾಧ್ಯವಾಗದಿದ್ದಾಗ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. 2015 ರಲ್ಲಿ, ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿ ಪಂಚಾಯಿತಿಗೆ ಹಂಚಿಕೆ ಮಾಡಲು ಲಭ್ಯವಿರುವ ಭೂಮಿ ಕೇವಲ 17 ಹೆಕ್ಟೇರ್ ಎಂದು ತಿಳಿಸಿತ್ತು.