Flipkart Company ಶಿವಮೊಗ್ಗದ ತಾವರೆಚಟ್ನಹಳ್ಳಿಯಲ್ಲಿರುವ ಇನ್‌ಸ್ಕಾರ್ಟ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಡೆಲಿವರಿ ಟೀಮ್ ನ ಲೀಡರ್ ಆಗಿದ್ದ ಯುವಕನಿಂದ ವಂಚನೆ ಆಗಿದೆ ಎಂದು ಆರೋಪಿಸಿ ಸಂಸ್ಥೆಯ ವ್ಯವಸ್ಥಾಪಕರು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಸಂಸ್ಥೆಯು ಆನ್‌ಲೈನ್‌ನ ಫ್ಲಿಫ್‌ಕಾರ್ಟ್ ಸಂಸ್ಥೆಯಿಂದ ಗ್ರಾಹರ ಆರ್ಡರ್‌ನ್ನು ಡೆಲಿವರಿ ಮಾಡುವ ಸಂಸ್ಥೆಯಾಗಿದ್ದು, ಈ ಸಂಸ್ಥೆಗೆ ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ ರಾಕೇಶ್ ಎಂಬ ಟೀಮ್ ಲೀಡರ್ ಸಂಸ್ಥೆಗೆ 08,81097 ರೂ. ಹಣ ವಂಚಿಸಿರುವ ಬಗ್ಗೆ ವ್ಯವಸ್ಥಾಪಕರು ಠಾಣೆಗೆ ದೂರು ನೀಡಿದ್ದಾರೆ.
Flipkart Company ರಾಕೇಶ್ ಸಂಸ್ಥೆಯ ವೇರ್ ಹೌಸ್ ನಲ್ಲಿದ್ದು ನಂತರ ಟೀಮ್ ಲೀಡರ್ ಆಗಿದ್ದ. ಈತನ ಕೈ ಅಡಿ ೯ ಜನ ಡೆಲಿವರಿ ಬಾಯ್ ಇದ್ದರು. ಮೇ ೩ ರಿಂದ ಮೇ ೩೦ ರವರೆಗೆ ನಿಯತ್ತಾಗಿ ಹಣ ಕಟ್ಟಿಕೊಂಡು ಬರುತ್ತಿದ್ದ ರಾಕೇಶ್ ನಂತರದ ದಿನಗಳಲ್ಲಿ ಡೆಲಿವರಿಯಿಂದ ಸಂಗ್ರಹವಾಗುತ್ತಿದ್ದ ಹಣವನ್ನ ಬ್ಯಾಂಕ್ ಗೆ ಕಟ್ಟದೆ ಇರುವಾಗ ಸಂಸ್ಥೆಯ ವ್ಯವಸ್ಥಾಪಕರಿಗೆ ಅನುಮಾನ ಬಂದಿದೆ. ನಂತರ ಬ್ಯಾಂಜ್ ನ ಬ್ಯಾಲೆನ್ಸ್ ಶೀಟ್ ನೋಡಿದಾಗ ರಾಕೇಶ್ ಸರಿಯಾಗಿ ಹಣಕಟ್ಟದೆ 0,81,097ರೂ ವಂಚಿಸಿರುವ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ.