Linganamakki Dam ಶಿವಮೊಗ್ಗ ಜಿಲ್ಲೆಯಲ್ಲಿ ಆರಿದ್ರಾ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕಳೆದ ನಾಲ್ಕೈದು ದಿನಗಳಿಂದ ವರುಣ ಆರ್ಭಟಿಸುತ್ತಿರುವದರಿಂದ ಕೆರೆ-ಕಟ್ಟೆಗಳು ತುಂಬಿವೆ. ಬಿಡುವು ಮಾಡಿ ಕೊಟ್ಟು ಮಳೆ ಬರುತ್ತಿರುವುದರಿಂದ ಬೇಸಾಯಕ್ಕೆ ಅನುಕೂಲಕರವಾಗುತ್ತಿದೆ. ಇದರಿಂದ ಭತ್ತದ ಬಿತ್ತನೆ, ನಾಟಿ ಕಾರ್ಯ ಜೋರಾಗಿದೆ.
ಧಾರಾಕಾರ ಮಳೆ ಸುರಿಯುತ್ತಿದ್ದು ಕೆರೆ-ಕಟ್ಟೆ, ಡ್ಯಾಂಗಳು ಭರ್ತಿಯಾಗುತ್ತಿವೆ. ಜೋಗ ಜಲಪಾತಕ್ಕೂ ಮತ್ತೆ ಜೀವಕಳೆ ಬಂದಿದೆ.ಲಿAಗನಮಕ್ಕಿ ಜಲನಯನ ಭಾಗದಲ್ಲಿ ಉತ್ತಮವಾದ ಮಳೆಯಾಗುತ್ತಿರುವುದರಿಂದ ಜೋಗ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದೆ. ಇದರಿಂದ ರಾಜ, ರಾಣಿ, ರೋರರ್ ಲೇಡಿಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಇದರಿಂದ ಪ್ರವಾಸಿಗರ ಕಣ್ಣಿಗೆ ಹಬ್ಬದಂತಾಗಿದೆ.
ಅಣೆಕಟ್ಟೆಗಳಿಗೆ ಹೆಚ್ಚಿನ ಒಳ ಹರಿವು: ಮಳೆಯಿಂದ ಜಿಲ್ಲೆಯ ಎಲ್ಲಾ ಅಣೆಕಟ್ಟೆಗಳಲ್ಲಿನ ಒಳ ಹರಿವು ಹೆಚ್ವಾಗಿದೆ. ತುಂಗಾ ಅಣೆಕಟ್ಟೆಗೆ ೪೦ ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅದೇ ರೀತಿ ೧೫ ಕ್ರಸ್ಟ್ ಗೇಟ್ ಮೂಲಕ ನದಿಗೆ ೪೦ ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ. ಭದ್ರಾ ಅಣೆಕಟ್ಟೆಗೆ ೪.೦೯೮ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ೩೪೮ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ದಿನ ೬೦.೨೩೮ ಕ್ಯೂಸಕ್ ನೀರು ಹರಿದು ಬಂದಿದೆ. ನದಿ ಸೇರಿದಂತೆ ವಿದ್ಯುತ್?ಗೆ ೫೮೬ .೨೪ ಕ್ಯೂಸೆಕ್ ನೀರು ಅಣೆಕಟ್ಟೆಯಿಂದ ಹೊರಕ್ಕೆ ಹೋಗುತ್ತಿದೆ. ವರಾಹಿ ಮಾಣಿ ಅಣೆಕಟ್ಟೆಗೆ ೮.೩೨೪ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕೆರೆ-ಕಟ್ಟೆಗಳು ನಳನಳಿಸುತ್ತಿವೆ.
Linganamakki Dam ನೀರಿನ ಮಟ್ಟದ ವಿವರ:
ಲಿಂಗನಮಕ್ಕಿ ಅಣೆಕಟ್ಟೆ:
ಒಟ್ಟು ಎತ್ತರ – ೧೮೧೯
ಇಂದಿನ ನೀರಿನ ಮಟ್ಟ – ೧೭೬೩.೪೦ ಅಡಿ
ಒಳ ಹರಿವು – ೪೪.೦೨೪ ಕ್ಯೂಸೆಕ್
ಹೊರ ಹರಿವು – ೧೪೪೦.೮೪ ಕ್ಯೂಸೆಕ್
ಕಳೆದ ವರ್ಷ – ೧೭೪೨.೬೫ ಅಡಿ