Saturday, December 6, 2025
Saturday, December 6, 2025

Chikkamagaluru Police ಬೈಕ್ ಬಿಡಿಭಾಗ ಕದ್ದು ಮಾರುತ್ತಿದ್ದ ಖದೀಮರ ಸೆರೆ

Date:

Chikkamagaluru Police ಚಿಕ್ಕಮಗಳೂರು ಜಿಲ್ಲೆಯ ಬಸವನಹಳ್ಳಿ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಮೂವರು ಅಂತರ್ ಜಿಲ್ಲಾ ಕಳ್ಳರನ್ನು ಹಿಡಿದಿದ್ದು ಅವರಿಂದ ಮೂರು ಜಿಲ್ಲೆಗಳಲ್ಲಿ ಕಳ್ಳತನವಾಗಿದ್ದ ಒಟ್ಟು 17 ಬೈಕ್’ಗಳನ್ನು ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ದಾಖಲಾದ ಬೈಕ್‌ ಕಳ್ಳತನ ಪ್ರಕರಣ ಸಂಬಂಧ ವಿಶೇಷ ತಂಡ ರಚನೆ ಮಾಡಲಾಗಿತ್ತು.

ಬಸವನಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಕಲೈಮಾರ್ ಮತ್ತು ಪಿಎಸ್ಐ ಬಾಬುದ್ದೀನ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಲಿಂಗಮೂರ್ತಿ, ಮಧಸೂಧನ್, ನಂಜಪ್ಪ, ಮಧುಕುಮಾರ್, ಪ್ರದೀಪ ಮತ್ತು ನವೀನ ಅವರ ತಂಡ ಇದೀಗ ಕಳ್ಳರ ಗ್ಯಾಂಗ್‌ನ್ನು ಹಿಡಿದಿದ್ದಾರೆ.
Chikkamagaluru Police ಈ ಸಂಬಂಧ ಮೂವರನ್ನ ಬಂಧಿಸಿರುವ ಪೊಲೀಸರು ರೂ. 8.5 ಲಕ್ಷ ಬೆಲೆಯ 17 ಬೈಕ್ ಗಳು, ರೂ. 2.15 ನಗದು ಮತ್ತು ರೂ. 50 ಸಾವಿರ ಮೌಲ್ಯದ ಬೈಕ್ ಬಿಡಿಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಶೇಷ ಅಂದರೆ ಆರೋಪಿಗಳು ಬೈಕ್‌ಗಳನ್ನು ಕದ್ದು ಅದನ್ನ ಗುಜರಿಗೆ ಹಾಕುತ್ತಿದ್ದರು. ವಾಹನಗಳ ಬಿಡಿಭಾಗಗಳನ್ನ ವಿಂಗಡಿಸಿ ಅವುಗಳನ್ನ ಮಾರಲಾಗುತ್ತಿತ್ತು.
ಆರೋಪಿಗಳು ಚಿಕ್ಕಮಗಳೂರು ನಗರದಲ್ಲಿ 22, ಕಡೂರು ಪಟ್ಟಣದಲ್ಲಿ 1, ತರೀಕೆರೆ ಪಟ್ಟಣದಲ್ಲಿ 1, ಶಿವಮೊಗ್ಗ ನಗರದಲ್ಲಿ 2, ಭದ್ರಾವತಿಯಲ್ಲಿ 2 ಹಾಗೂ ದಾವಣಗೆರೆಯಲ್ಲಿ 2 ಬೈಕ್’ಳನ್ನು ಕಳವು ಮಾಡಿದ್ದಾರೆ. ಅವುಗಳಲ್ಲಿ 17 ಬೈಕ್ ಸುಸ್ಥಿತಿಯಲ್ಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...