ಶಿವಮೊಗ್ಗ : ಡೆಲ್ಲಿ ವರ್ಡ್ ಶಾಲೆಯಲ್ಲಿ ಹೊಸದಾಗಿ ಆಯ್ಕೆಯಾದ ವಿದ್ಯಾರ್ಥಿನಾಯಕರುಗಳಿಗೆ ಪದಗ್ರಹಣಸಮಾರಂಭವನ್ನುಹಮ್ಮಿಕೊಳ್ಳಲಾಗಿತ್ತು. ಪೋಲಿಸ್ ಇನ್ಸ್‌ಪೆಕ್ಟರ್ ಚಂದ್ರಕಲಾ, ಮಕ್ಕಳ ಕಲ್ಯಾಣಾಧಿಕಾರಿ ಗಾಯತ್ರಿ ಅವರು ಮಾತನಾಡಿ, ನಾಯಕತ್ವ ಗುಣಗಳನ್ನು ಬಾಲ್ಯದಿಂದಲೇ ಮಕ್ಕಳು ಅಳವಡಿಸಿಕೊಳ್ಳಬೇಕೆಂದರು. ಪ್ರಾಚಾರ್ಯೆ ದಿವ್ಯ ಶೆಟ್ಟಿಯವರು ಮಾತನಾಡಿ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಯುವಜನತೆ ಪಾತ್ರ ಬಹುಮುಖ್ಯ ಅಂತಹ ಆಸಕ್ತಿಯನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕು ಮಕ್ಕಳಲ್ಲಿ ಇಂತಹ ಆಸಕ್ತಿಯನ್ನು ಬೆಳೆಸಲು ಶಾಲೆ ಹಾಗೂ ಶಿಕ್ಷಕರ ಪಾತ್ರ ಬಹು ಮುಖ್ಯ ಎಂದರು . ಈ ಕಾರ್ಯಕ್ರಮದಲ್ಲಿ ಶಿಕ್ಷ ಕರು, ಮಕ್ಕಳು ಉಪಸ್ಥಿತರಿದ್ದು, ಸುಪ್ರೀತಾ ಸ್ವಾಗತಿಸಿ, ಜಾವಿದ್ ವಂದಿಸಿದರೆ, ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು.
Shivamogga Newsಮಕ್ಕಳಲ್ಲಿ ನಾಯಕತ್ವ ಗುಣ ಬೇಕು
Date: