Forest Department ಎಂಪಿಎಂಗೆ ನೀಡಿದ್ದ 20 ಸಾವಿರ ಹೆಕ್ಟೇರ್ ಅಕೇಶಿಯ ಭೂಮಿಯನ್ನು ವಾಪಾಸ್ ಅರಣ್ಯ ಇಲಾಖೆಗೆ ನೀಡುವಂತೆ ನಮ್ಮೂರಿಗೆ ಅಕೇಶಿಯ ಮರ ಬೇಡ ಎಂಬ ಸಂಘಟನೆ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡ ಕೆ ಪಿ, ಶ್ರೀಪಾಲ್, ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ 20,0000.5 ಹೆಕ್ಟೇರ್ ಭೂಮಿಯನ್ನು ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಯಲ್ಲಿ ನೀಡಲಾಗಿತ್ತು.
ಇದನ್ನು 40 ವರ್ಷದ ಅವಧಿಗೆ ಲೀಸ್ ನೀಡಲಾಗಿತ್ತು. ಆದರೆ ನವೆಂಬರ್ 2020ರಲ್ಲಿ ಲೀಸ್ ಅಗ್ರಿಮೆಂಟ್ ಮಾಡಿಕೊಂಡು ಲೀಜ್ ನೀಡುವಂತೆ ಕೇಂದ್ರಕ್ಕೆ ಮುಂದುವರೆಸಲು ಕೇಳಿಕೊಂಡಿದೆ.
ಆದರೆ ಕೇಂದ್ರ ನೀಡಿಲ್ಲ. ಜಿಲ್ಲಾಧಿಕಾರಿ ಸೆಲ್ವಮಣಿ ಅವರು ಅಕೇಶಿಯ ಬೆಳೆಯಲು ಬಿಟ್ಟಿರಲಿಲ್ಲ ಎಂದರು.
20 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಅಕೇಶಿಯ ಮರವನ್ನು ಎಂಪಿಎಂಗೆ ನೀಡಿ ಈ ಜಾಗದಲ್ಲಿ ಸ್ವಾಭಾವಿಕವಾಗಿ ಮರ ಬೆಳೆಸಲು ಕೋರಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಬಗ್ಗೆ ಮನವಿ ನೀಡಲಾಗಿದೆ.
ಆದರೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮತ್ತು ಅವರ ಪುತ್ರ ಸಂಸದರಾಗಿ ಆಯ್ಕೆಯಾಗಿರುವ ಸೂರಜ್ ಖಂಡ್ರ‍್ರೆ ಮತ್ತೆ ಕೇಂದ್ರ ಸರ್ಕಾರದ ಸಚಿವರಿಗೆ 20 ಸಾವಿರ ಹೆಕ್ಟೇರ್ ಎಂಪಿಎಂಗೆ ಮುಂದುವರೆಸಿ ಎಂದು ಕೇಳಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಈ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು.
ಮೈಸೂರಿನ ಕಾರ್ಖಾನೆ ಮುಚ್ಚಲಾಗಿದೆ. ಅಜೇಶಿಯ ಭೂಮಿ ಅರಣ್ಯಕ್ಕೆ ಬರಬೇಕು. ಆಗುಂಬೆಯಲ್ಲೂ ಅಕೇಶಿಯ ಮರಗಳು ಇವೆ. ಒಂದು ಇಂಚು ಭೂಮಿಯನ್ನು ಕಾರ್ಖಾನೆಗೆ ನೀಡಲು ನಮ್ಮೂರಿಗೆ ಅಕೇಶಿಯ ಬೇಡ ಎಂದು ಆಗ್ರಹಿಸಲಿದೆ. ಕಾರ್ಖಾನೆ ಹೆಸರಿನಲ್ಲಿರುವ ಭೂಮಿ ಫಲವತ್ತತೆ ಕಳೆದುಕೊಂಡಿವೆ. ಅವರಿಗೆ ಯಾವ ಕಾರಣಕ್ಕೂ ಜಾಗ ನೀಡಬಾರದು ಎಂದರು.
Forest Department ಐಟಿಸಿಗೆ ಜಾಗ ನೀಡಲು ಯೋಚಿಸಲಾಗಿತ್ತು. ಐಟಿಸಿ ಕಂಪನಿ ಸಿಗರೇಟ್ ಬಿಟ್ಟರೆ ಬೇರೆ ಯೋಜನೆಗಳಿಲ್ಲ. ಬಿಎಸ್ ವೈ 380 ಕೋಟಿ ರೂ. ಕೊಟ್ಟು ಕಾರ್ಖಾನೆ ಪುನಶ್ಚೇತನಕ್ಕೆ ಮುಂದಾದರೂ ಯಾವುದೇ ಲಾಭಬಾರದೆ ಕಾರ್ಖಾನೆ ನಷ್ಟಕ್ಕೆ ಜಾರಿತು. ಈಗ ಅದರ ಜಾಗದ ಮೇಲೆ ಸರ್ಕಾರವೇ ಕಣ್ಣು ಹಾಕಿರುವುದು ದುರಂತ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಪ್ರೊ.ರಾಜೇಂದ್ರ ಚಿನ್ನಿ, ಡಿಎಸ್‌ಎಸ್ ಗುರುಮೂರ್ತಿ, ಸುರೇಶ್ ಅರಸಾಳು, ಹರಿಗೆ ರವಿ ಮೊದಲಾದವರು ಉಪಸ್ಥಿತರಿದ್ದರು.