Thursday, October 3, 2024
Thursday, October 3, 2024

Tumkur Police ತುಮಕೂರು ಜಿಲ್ಲೆಯಲ್ಲಿ ಮಗು ಕಳ್ಳಸಾಗಣೆ ಜಾಲ ಪತ್ತೆ.ಪೊಲೀಸರ ಶೋಧಕಾರ್ಯ

Date:

Tumkur Police ಊರೂರು ತಿರುಗಿ ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿದ್ದ ಅಲೆಮಾರಿ ಕುಟುಂಬದ ದಂಪತಿಯ 11 ತಿಂಗಳ ಮಗು ಕಳವು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು, ಇಡೀ ಜಿಲ್ಲೆಯಲ್ಲಿ ನಡೆಯುತ್ತಿದ್ದ ಮಕ್ಕಳ ಕಳ್ಳಸಾಗಾಣೆ ಜಾಲವನ್ನೆ ಪತ್ತೆ ಮಾಡಿದ್ದಾರೆ. ಈ ಪ್ರಕರಣದಿಂದ ತುಮಕೂರು ಜನತೆ ಬೆಚ್ಚಿಬಿದ್ದಿದ್ದು, ಈವರೆಗೆ ಐದು ಮಕ್ಕಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

ಅಲೆಮಾರಿ ಕುಟುಂಬದ ಮಗು ಕಳ್ಳತನ ಪ್ರಕರಣದ ತನಿಖೆಯು ತಿರುವು ಪಡೆದುಕೊಂಡಿದ್ದು, ಹಲವು ತಿಂಗಳುಗಳಿಂದ ಸಕ್ರಿಯವಾಗಿದ್ದ ಒಂದೇ ಗುಂಪು, ಬರೊಬ್ಬರಿ 9 ಮಕ್ಕಳನ್ನು ಕಿಡ್ನಾಪ್ ಮಾಡಿದ್ದಾರೆ. ಕದ್ದ ಮಕ್ಕಳನ್ನ 2 ರಿಂದ 3 ಲಕ್ಷ ರೂಪಾಯಿಗೆ ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಕಳುವಾಗಿದ್ದ 9 ಮಕ್ಕಳ ಪೈಕಿ 5 ಮಕ್ಕಳನ್ನ ಪೊಲೀಸರು ರಕ್ಷಿಸಿದ್ದು, ಅದರಲ್ಲಿ 1 ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಇನ್ನುಳಿದ 3 ಮಕ್ಕಳಿಗಾಗಿ ತನಿಖಾ ತಂಡ ಶೋಧಕಾರ್ಯ ಮುಂದುವರಿಸಿದೆ.

ಜಾಲ ಪತ್ತೆಯಾಗಿದ್ದು ಹೇಗೆ..?

ತುಮಕೂರು ಜಿಲ್ಲೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಜುಲೈ ಒಂಬತ್ತರಂದು ಮಗು ಕಳ್ಳತನ ಪ್ರಕರಣ ದಾಖಲಾಗಿತ್ತು. ತಾಲೂಕಿನ ಚೇಳೂರು ಮೂಲದ ಅಲೆಮಾರಿ ಕುಟುಂಬದ ದಂಪತಿಗಳು ಸುತ್ತಮುತ್ತಲಿನ ಹಳ್ಳಿಗಳಲ್ಲಿ ತಲೆಕೂದಲು ಸಂಗ್ರಹಿಸಿ, ಪಾತ್ರೆ-ಪಡಗ ವ್ಯಾಪಾರ ನಡೆಸುತ್ತಾ ಜೀವನ ಸಾಗಿಸುತ್ತಿದ್ರು. ಅದೇ ರೀತಿ ವ್ಯಾಪಾರ ಮುಗಿಸಿ ಇದೇ ಜೂನ್ 9 ರ ರಾತ್ರಿ ಗುಬ್ಬಿ ಪಟ್ಟಣದ ಚನ್ನಬಸವೇಶ್ವರ ದೇವಸ್ಥಾನದ ಬಳಿ ಮಲಗಿದ್ದಾಗ, ಬೆಳಗಾಗುವಷ್ಟರಲ್ಲಿ ದಂಪತಿಗಳ 11 ತಿಂಗಳ ರಾಕಿ ಎಂಬ ಮಗು ನಾಪತ್ತೆಯಾಗಿದ್ದ. ಈ ಘಟನೆ ಸಂಬಂಧ ಗುಬ್ಬಿ ಪೊಲೀಸ್ ಠಾಣೆಗೆ ಮಗುವಿನ ಪೋಷಕರು ದೂರು ನೀಡಿದ್ದರು.
ಮಕ್ಕಳಿಲ್ಲದ ದಂಪತಿಗಳನ್ನ ಟಾರ್ಗೆಟ್ ಮಾಡುತ್ತಿದ್ದ ಈ ಮಕ್ಕಳ ಕಳ್ಳರ ಗ್ಯಾಂಗ್, ಗರ್ಭ ಧರಿಸಿದ ಅವಿವಾಹಿತ ಯುವತಿಯರಿಂದ ಮಕ್ಕಳನ್ನ ಖರೀದಿ ಮಾಡುತ್ತಿದ್ದರು ಎನ್ನಲಾಗಿದೆ. ಜತೆಗೆ, ಮಕ್ಕಳ ಕಳ್ಳತನಕ್ಕೂ ಇಳಿದಿದ್ದರು. ಸದ್ಯ ಪ್ರಕರಣ ಸಂಬಂಧ 7 ಜನ ಆರೋಪಿಗಳ ಗುಬ್ಬಿ ಪೊಲೀಸರು ಬಂಧಿಸಿದ್ದಾರೆ. ಮಹೇಶ್ ಯು.ಡಿ, ಮಹಬೂಬ್ ಶರೀಫ್, ಕೆ.ಎನ್.ರಾಮಕೃಷ್ಣ, ಹನುನಂತರಾಜು, ಮುಬಾರಕ್ ಪಾಷಾ, ಪೂರ್ಣಿಮಾ ಎನ್. ಹಾಗೂ ಸೌಜನ್ಯ ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳು
ಮಕ್ಕಳಿಲ್ಲದ ದಂಪತಿಗಳನ್ನ ಟಾರ್ಗೆಟ್ ಮಾಡುತ್ತಿದ್ದ ಒಂದನೆ ಆರೋಪಿ ಮಹೇಶ್, ಈ ಹಿಂದೆ ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡಿದ್ದ ಎನ್ನಲಾಗಿದೆ. ಸದ್ಯ ತುಮಕೂರಿನ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದಾನೆ‌.
Tumkur Police ಗುಬ್ಬಿಯಲ್ಲಿ ಮಗುವನ್ನ ಕಳವು ಮಾಡಿದ್ದ ಮೂರನೇ ಆರೋಪಿ ರಾಮಕೃಷ್ಣ ಹಾಗೂ ನಾಲ್ಕನೇ ಆರೋಪಿ ಹನುಮಂತರಾಜು, ಮಹೇಶ್ ಮೂಲಕ ಮಂಡ್ಯ ಜಿಲ್ಲೆ ಬೆಳ್ಳೂರು ಕ್ರಾಸ್ ಮೂಲದ ದಂಪತಿಗೆ ಮಗು ಮಾರಾಟ ಮಾಡಿದ್ದ. ಕಿಡ್ನಾಪ್ ಆಗಿದ್ದ 11 ತಿಂಗಳ ರಾಕಿಯನ್ನ ಪೊಲೀಸರು ರಕ್ಷಿಸಿ, ಪೋಷಕರಿಗೆ ಒಪ್ಪಿಸಿದ್ದಾರೆ.
ಜಾತ್ರೆಗಳಲ್ಲಿ ಟ್ಯಾಟು ಹಾಕುವ ಕೆಲಸ ಮಾಡ್ತಿದ್ದ ರಾಮಕೃಷ್ಣ ಹಾಗೂ ಹನುಮಂತರಾಜು ಇಬ್ಬರನ್ನೂ ಹಿಡಿದು ತನಿಖೆ ನಡೆಸಿದಾಗ ಮಕ್ಕಳ ಮಾರಾಟ ಜಾಲ ಪ್ರಕರಣ ಬೆಳಕಿಗೆ ಬಂದಿದೆ. ಎರಡನೇ ಆರೋಪಿ ಮಹಬೂಬ್ ಶರೀಫ್ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನಲ್ಲಿ ತನ್ನ ಪತ್ನಿ ಹೆಸರಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ. ಜೊತೆಗೆ, ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ವಿತರಣಾ ವಿಭಾಗದಲ್ಲಿ ಕೆಲಸ ಮಾಡ್ತಿದ್ದ. ತಮ್ಮ ಕ್ಲಿನಿಕ್ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್ ಗಳ ಸಹಾಯದಿಂದ ಮಕ್ಕಳನ್ನ ಖರೀದಿ ಮಾಡುವ ಪೋಷಕರನ್ನು ಗರ್ಭಿಣಿಯರೆಂದು ದಾಖಲಿಸಿಕೊಂಡು, ಮಗು ಅವರಿಗೆ ಹುಟ್ಟಿದೆ ಎಂದು ನಕಲಿ ದಾಖಲೆಪತ್ರಗಳನ್ನು ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಸರ್ಕಾರಿ ಆಸ್ಪತ್ರೆ ಡಾಕ್ಟರ್, ನರ್ಸ್ ಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು ತನಿಖೆ ಚುರುಕುಗೊಳಿಸಲಾಗಿದೆ. ಬಂಧಿತ ಪೂರ್ಣಿಮಾ ಮಧುಗಿರಿ ತಾಲೂಕಿನ ದೊಡ್ಡೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಟಾಫ್ ನರ್ಸ್ ಆಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಮತ್ತೋರ್ವ ಆರೋಪಿ ಸೌಜನ್ಯ ಶಿರಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇವರ ಮೇಲೆ ಈ ಹಿಂದೆ ಭ್ರೂಣ ಹತ್ಯೆ ಕೇಸ್ ಕೂಡ ದಾಖಲಾಗಿತ್ತು.
ಬಂಧಿತ ಆರೋಪಿಗಳು
ಪೂರ್ಣಿಮಾ ಹಾಗೂ ಸೌಜನ್ಯ ಆಸ್ಪತ್ರೆಯಲ್ಲಿ ಗರ್ಭಧರಿಸಿದ ಅವಿವಾಹಿತ ಮಹಿಳೆಯರು, ಮಗು ಬೇಡ ಎನ್ನುತ್ತಿದ್ದ ವಿವಾಹಿತ ಮಹಿಳೆಯರ ಬಗ್ಗೆ ಪ್ರಕರಣದ ಪ್ರಮುಖ ಕಿಂಗ್‌ಪಿನ್ ಮಹೇಶ್ ಗೆ ಮಾಹಿತಿ ನೀಡುತ್ತಿದ್ದರು. ಅಂತವರನ್ನು ಸಂಪರ್ಕ ಮಾಡುತ್ತಿದ್ದ ಈ ತಂಡ, ಮಕ್ಕಳನ್ನ ಪಡೆದು ಮಾರಾಟ ಮಾಡ್ತಿದ್ದರು.
ಪ್ರಕರಣ ಸಂಬಂಧ 9 ಜನರ ವಿರುದ್ಧ ಕೇಸ್ ದಾಖಲಿಸಲಾಗಿದ್ದು, 7 ಜನರನ್ನು ಬಂಧಿಸಲಾಗಿದೆ. ಅವರಿಂದ ಮಾರುತಿ 800 ಕಾರು, 50 ಸಾವಿರ ನಗದು ಹಾಗೂ 4 ಮೊಬೈಲ್ ವಶಕ್ಕೆ ಪಡೆಯಲಾಗಿದ್ದು, ಗುಬ್ಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...