Multi Purpose Social Service Society ಉತ್ತಮ ತರಬೇತಿಯಿಂದ ಕೌಶಲ್ಯ ವೃದ್ಧಿಗೆ ಸಹಕಾರಿ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಆರ್ ಕೆ ಸಿದ್ಧರಾಮಣ್ಣ ಅಭಿಪ್ರಾಯಪಟ್ಟರು.
ಅವರ ಶಿವಮೊಗ್ಗ ನಗರದ ಚೈತನ್ಯ ಸಭಾಂಗಣದಲ್ಲಿ ದಿ ಶಿವಮೊಗ್ಗ ಮಲ್ಟಿ ಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ ಹಮ್ಮಿಕೊಂಡಿದ್ದ ಸ್ವಸಹಾಯ ಸಂಘಗಳ ಮಹಿಳಾ ನಾಯಕಿಯರಿಗೆ ಹಮ್ಮಿಕೊಂಡಿದ್ದ ಒಕ್ಕೂಟ ಬಲ ವರ್ಧನೆಯ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಬದಲಾಗುವ ತಂತ್ರಜ್ಞಾನ ಮತ್ತು ಕೌಶಲ್ಯ ಕಲಿಕೆಗೆ ತರಬೇತಿ ಅತ್ಯಾವಶ್ಯಕ, ಪ್ರತಿ ತರಬೇತಿಯು ಮಹಿಳೆಯರಲ್ಲಿ ನಾಯಕತ್ವ ಗುಣವನ್ನು ಇಮ್ಮಡಿಗೊಳಿಸುತ್ತದೆ ಎಂದರು.
Multi Purpose Social Service Society ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಿ ಎಸ್ ಐ ಶಿವಮೊಗ್ಗ ಸಿರಿ ಲಿಜನ್ ಅಧ್ಯಕ್ಷ ಉಷಾ ಉತ್ತಪ್ಪ ಮಾತನಾಡಿ ಮಹಿಳೆಯರು ಅವಲಂಬಿಗಳಾಗಬೇಕು, ಹೊಸ ಹೊಸ ಕಲಿಕೆಯ ಮೂಲಕ ತನ್ನ ನೆರೆಹೊರೆಯ ಮಹಿಳೆಯರಿಗೆ ಮಾರ್ಗದರ್ಶನ ಮಾಡಬೇಕು, ಸ್ನೇಹ ತಾಳ್ಮೆಯಿಂದ ಒಕ್ಕೂಟದ ಬಲವರ್ಧನೆ ಮಾಡಬೇಕು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ . ಫಾದರ್ ಪಿಯೂಷ್ ಡಿಸೋಜಾ ಮಾತನಾಡಿ, ಮಹಿಳೆಯರು ಕುಟುಂಬದ ನಿರ್ವಹಣೆಯ ಜೊತೆಗೆ ಮಕ್ಕಳ ನಿಜವಾದ ಗುರುಗಳಾಗಿ ಸಂಸ್ಕಾರ ಮತ್ತು ಸನ್ನಡತೆ ಕಲಿಸುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ, ಅದೇ ರೀತಿ ಮಕ್ಕಳಲ್ಲಿ ನಿಜವಾದ ಜ್ಞಾನವನ್ನು ವೃದ್ಧಿಸಿಕೊಳ್ಳುವ , ತಪ್ಪು, ಸರಿಗಳ ಕುರಿತು ನೈಜ ಜ್ಞಾನವನ್ನು ಪಡೆಯಲು ಪ್ರೇರಣೆ ನೀಡುವ ಕೆಲಸ ಮುಖ್ಯವಾಗಿ ಆಗಬೇಕು ಎಂದರು.
ತಾಲೂಕು ಒಕ್ಕೂಟದ ಅಧ್ಯಕ್ಷೆ ಚಂದ್ರಮ್ಮ ಉಪಸ್ಥಿತರಿದ್ದರು, ಜಗದೀಶ್ ಸ್ವಾಗತಿಸಿದರು.