Bharat Scouts and Guides ಮಕ್ಕಳಲ್ಲಿ ಪರಿಸರ ಜ್ಞಾನದ ಜತೆಗೆ ಸ್ಕೌಟಿಂಗ್ ಹೊರಾಂಗಣ ಚಟುವಟಿಕೆಗಳು ಮುಖ್ಯ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರೋವರ್ ವಿಭಾಗದ ಜಿಲ್ಲಾ ಕೇಂದ್ರ ಸ್ಥಾನಿಕ ಆಯುಕ್ತ ಕೆ.ರವಿ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಮಕ್ಕಳಿಗೆ ಏರ್ಪಡಿಸಿದ್ದ ಪರಿಸರ ಜಾಗೃತಿ ಮತ್ತು ಸೈಕ್ಲಿಂಗ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಇಂದು ಮಕ್ಕಳ ವಿದ್ಯಾಭ್ಯಾಸದ ಜತೆಗೆ ಕ್ರೀಡೆ, ಸೈಕ್ಲಿಂಗ್ ಹಾಗೂ ವ್ಯಾಯಾಮಗಳ ಕಡೆ, ಯೋಗಾಸನ ಕಡೆಗೆ ಗಮನ ಹರಿಸಬೇಕು. ದೈಹಿಕವಾಗಿ ನಾವು ಸದೃಢರಾಗಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್ ಮಾತನಾಡಿ, ಸೈಕಲ್ ತುಳಿಯುವುದರಿಂದ ದೇಹ ಮನಸ್ಸು ಸದೃಢವಾಗುವುದರ ಜತೆಗೆ ದೇಹದ ಪ್ರತಿಯೊಂದು ಅಂಗಾಂಗದಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುವುದರಿಂದ ಉತ್ತಮ ಆರೋಗ್ಯ ಪಡೆಯಬಹುದು. ಬಾಲ್ಯದಿಂದಲೇ ಸೈಕಲ್ ಹೊಡೆಯಬೇಕು. ಮುಂದೆ ಎಲ್ಲ ವಾಹನಗಳನ್ನು ಓಡಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
Bharat Scouts and Guides ಮಲ್ನಾಡ್ ಓಪನ್ ಗ್ರೂಪ್ ಸ್ಥಳೀಯ ಕಾರ್ಯದರ್ಶಿ ರಾಜೇಶ್ ಅವಲಕ್ಕಿ ಸೈಕಲ್ ಜಾಗೃತಿ ಜಾಥಾದ ಸಾರಥ್ಯ ವಹಿಸಿ ಮಾತನಾಡಿ, ಮಕ್ಕಳಲ್ಲಿ ಲವಲವಿಕೆ ಹಾಗೂ ಬುದ್ಧಿಶಕ್ತಿ ಚುರುಕುಗೊಳಿಸಲು ಸೈಕ್ಲಿಂಗ್ ತುಂಬಾ ಪರಿಣಾಮಕಾರಿ. ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ತೊಡಗಿಸಿಕೊಳ್ಳುವುದರಿಂದ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪರಿಸರ ಜಾಗೃತಿ ಮೂಡಿಸಿ ಪುರದಾಳ್ ವರೆಗೆ ಸೈಕಲ್ ಜಾಥಾ ನಡೆಸಲಾಯಿತು. ನ್ಯಾಷನಲ್ ಪಬ್ಲಿಕ್ ಶಾಲೆಯ ಸ್ಕೌಟ್ಸ್ ಮಾಸ್ಟರ್ ಸೋಮಲಿಂಗಯ್ಯ, ಶಿಕ್ಷಕ ಸಾಹಿತಿ ಸಂತೋಷ್ ಬಿದರಗಡ್ಡೆ, ರೋವರ್ ವಿಭಾಗದ ಚೇತನ್, ರೇಂಜರ್ ವಿಭಾಗದ ಶ್ರೇಯಾ, ವರುಣ್ ಕುಮಾರ್, ಪಾಲಕರು, ಸ್ಕೌಟ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Bharat Scouts and Guides ಮಕ್ಕಳು ವಿದ್ಯಾಭ್ಯಾಸದ ಜೊತೆ ಸೈಕ್ಲಿಂಗ್,ಪರಿಸರ,ಯೋಗ ಬಗ್ಗೆ ಆಸಕ್ತಿ ಹೊಂದಿರಬೇಕು-ಕೆ.ರವಿ.
Date: