Sunday, December 14, 2025
Sunday, December 14, 2025

Shivamogga Peace Organization 10-15 ವರ್ಷಗಳಿಂದ ತಳವೂರಿರುವ ಅಧಿಕಾರಿಗಳ ವರ್ಗಾವಣೆಗೆ ಒತ್ತಾಯ

Date:

Shivamogga Peace Organization ಸಾರ್ವಜನಿಕರ ಕೆಲಸ ಮಾಡದೆ 10-15 ವರ್ಷದಿಂದ ಇಲ್ಲೇ ತಳವೂರಿರುವ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಬೇಕೆಂದು ಶಿವಮೊಗ್ಗ ಪೀಸ್ ಆರ್ಗನೈಸೇಶನ್ ಆಗ್ರಹಿಸಿದೆ.
ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ ಸಂಘಟನೆಯ ಮುಖ್ಯಸ್ಥ ರಿಯಾಜ್ ಅಹಮದ್, ಸರ್ಕಾರಿ ಕೆಲಸ ಮಾಡದ ಈ ಎಲ್ಲ ಅಧಿಕಾರಿಗಳನ್ನು ಸಾಮೂಹಿಕ ವರ್ಗಾವಣೆ ಮಾಡುವಂತೆ ಆಗ್ರಹಿಸಿದರು.
ಕುಡಿಯುವ ನೀರು, ರಸ್ತೆ, ಚರಂಡಿ, ಒಳಚಂರಡಿ, ಬೀದಿ ದೀಪ, ಹಂದಿ, ನಾಯಿ ಕಾಟ, ಸಾಂಕ್ರ‍್ರಾಮಿಕ ರೋಗಗಳ ಬಗ್ಗೆ ಅಧಿಕಾರಿಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಭಿಕ್ಷೆ ಬೇಡುವವರ ರೀತಿ ಅವರಲ್ಲಿ ಬೇಡಬೇಕಿದೆ. ಇನ್ನೂ ಕೆಲವು ಅಧಿಕಾರಿಗಳಿಗೆ ಮನವಿ ಮೇಲೆ ಮನವಿ ಕೊಟ್ಟರೂ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ. ಪ್ರತಿಭಟನೆಯನ್ನೇ ನಡೆಸಬೇಕಾದ ಸಂದರ್ಭ ತಂದೊಡ್ಡಿದ್ದಾರೆ ಎಂದು ವಿವರಿಸಿದರು.
ಸಾರ್ವಜನಿಕ ದೂರುಗಳ ಬಗ್ಗೆ ಎಳ್ಳಷ್ಟೂ ಗಮನ ಹರಿಸದ ಅಧಿಕಾರಿಗಳ ಮನೋಭಾವ ಬದಲಾಗಬೇಕಿದೆ. ವಾರ್ಡುಗಳು ಇಂತಹವರಿದಾಗಿ ಸ್ಲಂಗಳು ಆಗುತ್ತಿವೆ. ೩೧ನೆಯ ವಾರ್ಡಿನ ಇಲಿಯಾಸ್ ನಗರದ ೧೦ನೆಯ ತಿರುವಿನಲ್ಲಿ ಕುಡಿಯುವ ನೀರಿಲ್ಲ. ಹಲವು ವರ್ಷಗಳ ಸಮಸ್ಯೆ ಇದು. ಮೇಲಿಂದ ಮೇಲೆ ಈ ಬಗ್ಗೆ ದೂರಿದ್ದರೂ ಕ್ರಮ ಜರುಗಿಸಿಲ್ಲ ಎಂದರು.
ಅಧಿಕಾರಿಗಳನ್ನು ಈ ಬಗ್ಗೆ ಕೇಳಲು ಹೋದರೆ ಸಿಗುತ್ತಿಲ್ಲ. ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತರ ವಾರ್ಡುಗಳನ್ನು ನಿರ್ಲಕ್ಷ್ಯಿಸುವ ಕೆಲಸ ನಡೆಯುತ್ತಿದೆ. ವಾರ್ಡಿನ ಸಿಬ್ಬಂದಿಗಳನ್ನು ಸಾಮೂಹಿಕವಾಗಿ ಪಾಲಿಕೆಯವರು ವರ್ಗಾವಣೆ ಮಾಡಬೇಕು. ಸಮಸ್ಯೆ ಬಗೆಹರಿಸಬೇಕೆಂದು ಕೋರಿದರು.
Shivamogga Peace Organization 10 ಬಾರಿ ಕರೆ ಮಾಡಿದ ಮೇಲೆ ಸ್ಥಳಕ್ಕೆ ಬರ್ತೀನಿ ಎನ್ನುತ್ತಾರೆ. ಆದರೆ ಬರೊಲ್ಲ. ಅಲ್ಪಸಂಖ್ಯಾತರ ವಾರ್ಡ್ಗೆ ಭೇಟಿ ನೀಡದೆ, ಜನ ಸಾಮಾನ್ಯರ ಸಮಸ್ಯೆ ಬಗೆಹರಿಸದ, ರಾಜಕಾರಣಿಗಳ ಮಾತನ್ನು ಮಾತ್ರ ಕೇಳುವ ಅಧಿಕಾರಿಗಳನ್ನು ಸಾಮೂಹಿಕ ವರ್ಗಾವಣೆ ಮಾಡುವಂತೆ ರಿಯಾಜ್ ಅಹ್ಮದ್ ಆಗ್ರಹಿಸಿದರು.
ಸಯ್ಯದ್ ಸೈಫುಲ್ಲಾ, ಮಕ್ಬ್ಬೂಲ್ ಅಹ್ಮದ್, ನಾಸಿರ್ ಅಹ್ಮದ್, ಇಜಾಜ್ ಅಹ್ಮದ್, ಮೊಹಮದ್ ಸೂಫಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...