Petrol and diesel prices ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ಏರಿಸಿದೆ. ಡೀಸೆಲ್ ಬೆಲೆ ಲೀಟರ್ ಗೆ ೩.೫೦ ರೂ, ಹೆಚ್ಚಾಗಿದೆ. ಇದು ಲಾರಿ ಮಾಲೀಕರ ಮೇಲೆ ಹೊರೆಯಾಗಿದೆ. ಈಗಾಗಲೇ ಲಾರಿ ಮಾಲೀಕರು ಟೋಲ್ ದರ ಏರಿಕೆ, ಟೈರ್ ಮತ್ತು ಬಿಡಿ ಭಾಗಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿದ್ದಾರೆ ಎಂದು ಲಾರಿ ಮಾಲೀಕರ ಒಕ್ಕೂಟದ ಜಿಲ್ಲಾಧ್ಯಕ್ಷ ತಲ್ಕಿನ್ ಅಹಮ್ಮದ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾರಿಯ ವಿ.ಎಲ್.ಟಿ. ಮತ್ತು ಪ್ಯಾನಿಕ್ ಬಟನ್ ಹೊರೆಯೂ ಕೂಡ ಹೆಚ್ಚಾಗಿದೆ. ಇದರಿಂದ ಸಾಗಣೆ ವೆಚ್ಚವೂ ಕೂಡ ಅಧಿಕವಾಗುತ್ತದೆ. ಸಾಗಣೆಗೆ ಪಡೆಯುವ ದರ ಹೆಚ್ಚಾಗಿಲ್ಲ. ಈ ಎಲ್ಲಾ ಕಾರಣಗಳಿಂದ ಲಾರಿ ಮಾಲೀಕರು ಅತ್ಯಂತ ಸಂಕಷ್ಟದಲ್ಲಿದ್ದಾರೆ ಎಂದು ದೂರಿದರು.
Petrol and diesel prices ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವುದನ್ನು ತಕ್ಷಣವೇ ಇಳಿಸಬೇಕು . ೨೪ -೨೫ರ ಬಜೆಟ್ ನಲ್ಲಿ ಈಗಾಗಲೇ ರಸ್ತೆ ತೆರಿಗೆ ಮೇಲೆ ಶೇ. ೩ರಷ್ಟು ಸೆಸ್ ಹೆಚ್ಚಿಗೆ ಮಾಡಲಾಗಿದೆ. ಈ ಎಲ್ಲಾ ಹೆಚ್ಚುವರಿಗಳನ್ನು ಬಾಡಿಗೆ ರೂಪದಲ್ಲಿ ವಾಪಸ್ ಪಡೆಯಲು ಈ ಉದ್ಯಮ ನಡೆಯುತ್ತಿರುವ ಡಿಮ್ಯಾಂಡ್ ಮತ್ತು ಸಪ್ಲೆನಲ್ಲಿ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೂಡಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಏರಿಸಿರುವ ದರ ಇಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ನೀಡುವ ನೆಪದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಬೆಲೆ ಏರಿಸಿರುವುದು ಸರಿಯಲ್ಲ. ನಮಗೆ ಖಂಡಿತ ಗ್ಯಾರಂಟಿಗಳು ಬೇಡ. ಅದರ ಬದಲು ಇಂಧನ ಬೆಲೆ ಏರಿಸದಿದ್ದರೆ ಸಾಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ನಾಸಿರ್ ಖಾನ್, ಭೋಜರಾಜ್, ಜಗನ್ನಾಥ್, ಬಾಬು, ಏಜಾಜ್ ಅಹಮ್ಮದ್, ರಫೀವುಲ್ಲಾ, ಅಜ್ಜ ಪಾಶಾ, ಮಹಮ್ಮದ್ ಗೌಸ್ ಇದ್ದರು.
Petrol and diesel prices ತೈಲ ಬೆಲೆ ಏರಿಕೆ: ಸಂಕಷ್ಟದಲ್ಲಿ ಲಾರಿ ಮಾಲೀಕರು-ತಲ್ಕಿನ್ ಅಹಮ್ಮದ್
Date: