International Yoga Day ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಬ್ಯಾಂಕ್ ಆಫ್ ಬರೋಡ ವತಿಯಿಂದ ಯೋಗ ದಿನವನ್ನು ಗೋಪಾಲಗೌಡ ಬಡಾವಣೆಯ ಬಿ ಬ್ಲಾಕ್‌ನಲ್ಲಿನ ಶ್ರೀ ಸಿದ್ಧಿ ಬುದ್ಧಿ ದೇವಸ್ಥಾನದ ಆವರಣದಲ್ಲಿ ಆಚರಿಸಲಾಯಿತು.
ಬ್ಯಾಂಕಿನ ಸಿಬ್ಬಂದಿ ವರ್ಗದವರಿಗೆ ಯೋಗ ಗುರುಗಳಾದ ಶ್ರೀನಿವಾಸ ಆಚಾರ್ಯರವರು ಪಾಲ್ಗೊಂಡು, ಯೋಗಾಸನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯೋಗ ನಮ್ಮ ಸನಾತನ ಸಂಸ್ಕೃತಿಯ ವಿಶಿಷ್ಟ ಕೊಡುಗೆ. ಮನಸ್ಸಿನ ಸ್ಥಿರತೆ, ದೈಹಿಕ ಆರೋಗ್ಯವನ್ನು ಸಮತೋಲನವಾಗಿ ಕಾಯ್ದುಕೊಳ್ಳಲು ಇದು ಸಹಕಾರಿ. ಇಂದು ನಮ್ಮ ಪ್ರಾಚೀನ ಕಾಲದ ಯೋಗವನ್ನು, ಧಾರ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ ಒಕ್ಕೊರಲ ಮನಸ್ಸಿನಿಂದ ಪ್ರಪಂಚವೇ ಒಪ್ಪಿ ಅಪ್ಪಿಕೊಂಡಿದ್ದು, ಇದು ಭಾರತ ದೇಶದ ಹಿರಿಮೆ ಗರಿಮೆಯನ್ನು ಹೆಚ್ಚಿಸಿದೆ ಎಂದರು.
International Yoga Day ಬ್ಯಾಂಕಿನ ಕ್ಷೇತ್ರೀಯ ಪ್ರಬಂಧಕರಾದ ಪಂಕಜ್ ಕುಮಾರ್ ಸುಮನ್, ಉಪ ಮಹಾ ಪ್ರಬಂಧಕ ಯೋಗೀಶ್, ಮುಖ್ಯ ಪ್ರಬಂಧಕರಾದ ನವೀನ್ ಚಂದ್ರ, ಪ್ರದೀಪ್ ಶೆಟ್ಟಿ, ರಾಜ್ ಸಿನ್ನ ಮತ್ತು ಸಿಬ್ಬಂದಿ ವರ್ಗದವರು, ಸಿದ್ಧಿ ಬುದ್ಧಿ ಮಹಾಗಣಪತಿ
ದೇವಸ್ಥಾನದ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಉಪಸ್ಥಿತರಿದ್ದು, ಯೋಗ ಗುರುಗಳಾದ ಶ್ರೀನಿವಾಸ ಆಚಾರ್ಯರನ್ನು ಸನ್ಮಾನಿನಿಸಿದರು.