Acharya Tulsi National College ಪಠ್ಯಕ್ಕೆ ಪೂರಕವಾದ ಪ್ರಾಯೋಗಿಕ ಜ್ಞಾನವು ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಸ್ವಯಂ ಮನದಟ್ಟಾಗುತ್ತದೆ ಎಂದು ಬಾಪೂಜಿ ಮ್ಯಾನೇಜ್ಮೆಂಟ್ ಕಾಲೇಜಿನ ನಿರ್ದೇಶಕ ಡಾ.ಸ್ವಾಮಿ ತ್ರಿಭುವನಾನಂದ ಹೇಳಿದರು.
ಅವರು ಕಾಲೇಜಿನ ವತಿಯಿಂದ ಏರ್ಪಾಡಾಗಿದ್ದ ಮ್ಯಾನೇಜ್ಮೆಂಟ್ ವಿಷಯಕ್ಕೆ ಸಂಬಂಧಪಟ್ಟ ರಾಜ್ಯಮಟ್ಟದ ಯುವೋತ್ಸವ ‘ಆಕ್ಟಾಗನ್ 2024’ರ ಸಮಾರೋಪ ಹಾಗೂ ಪ್ರಾಯೋಜಕರ ಉಪಸ್ಥಿತಿಯಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸ್ಪರ್ಧೆಯಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಿಕೊಳ್ಳುವ ವಿದ್ಯಾರ್ಥಿಗಳು ವಸ್ತುಸ್ಥಿತಿ ಹಾಗೂ ಅದರಲ್ಲಿ ತಾವು ವ್ಯವಹರಿಸಬೇಕಾದ ಚಾಕಚಕ್ಯತೆಯನ್ನು ಅನುಭವವಾಗಿ ಪಡೆಯುತ್ತಾರೆ ಎಂದರು.
ಶಿವಮೊಗ್ಗದ ಆಚಾರ್ಯ ತುಳಸಿ ನ್ಯಾಷನಲ್ ಕಾಲೇಜು ತಂಡ ಚಾಂಪಿಯನ್ಶಿಪ್ ಪಾರಿಶೋತ್ಸವವನ್ನು, ಶಿವಮೊಗ್ಗೆಯ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ತಂಡವು ರನ್ನರ್ಸ್ ಪಾರಿತೋಷಿಕವನ್ನು ಪಡೆದುಕೊಂಡರು.
Acharya Tulsi National College ವಿಭಾಗ ಮುಖ್ಯಸ್ಥ ಡಾ.ಎಸ್.ಹೆಚ್.ಸುಜಿತ್ ಕುಮಾರ್, ಡಾ. ಶ್ರುತಿ ಮಾಕನೂರು, ಸರೋಜಾ ಮುಂತಾದವರು ಉಪಸ್ಥಿತರಿದ್ದು ದಿವ್ಯ ಮತ್ತು ಪರಶುರಾಮ್ ಕಾರ್ಯಕ್ರಮ ನಿರೂಪಿಸಿದರು. ಡಾ. ಪ್ರಕಾಶ್ ಅಳಲಗೇರಿ ವಂದನೆ ಸಲ್ಲಿಸಿದರು. ಚಿತ್ರ ಹಾಗೂ ವರದಿ: ಡಾ.ಎಚ್.ಬಿ.ಮಂಜುನಾಥ-