Dr. Kamala Hampana ಕನ್ನಡದ ಖ್ಯಾತ ಸಾಹಿತಿ, ನಾಡೋಜಾ ಡಾ. ಕಮಲ ಹಂಪನಾ ಅವರು ಶನಿವಾರ (ಜೂನ್ 22) ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರಿಗೆ 89 ವರ್ಷ ವಯಸ್ಸಾಗಿತ್ತು. ಕಮಲ ಹಂಪನಾ ಅವರು ಪತಿ, ಖ್ಯಾತ ಸಾಹಿತಿ ಹಂಪ ನಾಗರಾಜಯ್ಯ, ಮೂವರು ಮಕ್ಕಳು ಹಾಗೂ ಅಪಾರ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ.
ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿ ಇರುವ ತಮ್ಮ ಮಗಳು ಆರತಿ ಮನೆಯಲ್ಲಿ ವಾಸವಿದ್ದರು.
ಶುಕ್ರವಾರ ರಾತ್ರಿ 10 ಗಂಟೆ ವೇಳೆಗೆ ಅವರಿಗೆ ಹೃದಯಾಘಾತವಾಗಿತ್ತು. ರಾಜಾಜಿನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕಮಲಾ ಹಂಪನಾ ಅವರು ತಮ್ಮ ದೇಹವನ್ನು ರಾಮಯ್ಯ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಕಮಲಾ ಹಂಪನಾ ಅವರ ನಿಧನಕ್ಕೆ ವಿವಿಧ ಕ್ಷೇತ್ರದ ಗಣ್ಯರು ಸೇರಿ ಹಲವರು ನುಡಿ ನಮನ ಸಲ್ಲಿಸಿದ್ದಾರೆ.
Dr. Kamala Hampana ಕಮಲಾ ಹಂಪನಾ ಅವರು 1948ರ ಸುಮಾರಿನಲ್ಲಿ ಭದ್ರಾವತಿಯಲ್ಲಿ ಉಕ್ಕಿನ ಕಾರ್ಖಾನೆ ಕಾರ್ಮಿಕರ ಕಲ್ಯಾಣ ಶಾಲೆಯ ಎಂಟನೆ ತರಗತಿಯ ವಿದ್ಯಾರ್ಥಿ.ಆದು ಈಗ ಭದ್ರಾವತಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆ. ಅಲ್ಲಿ ನಾನು 1982 ರಲ್ಲಿ ಮುಖ್ಯ ಉಪಾಧ್ಯಾಯನಾಗಿ ಕೆಲಸ ನಿರ್ವಸಿದ್ದೆ. ಶಾಲೆಗೆ 75 ವಷ೯
ತುಂಬಿದ್ದರ ಸ್ಮರಣೆಗಾಗಿ ಹೊರ ತರಲು ಯೋಜನೆ ಹಾಕಿಕೊಂಡು ಹೋದ ವರುಷ ಸಂದೇಶ ಕೋರಲು ಅವರು ಮನೆಗೆ ನನ್ನಾಕೆಯೊಡನೆ ಹೋಗಿದ್ದೆ.
ಹಂಪನಾ ದಂಪತಿ ಅವರು ಮಗಳು ಮನೆಗೆ ಬಂದಿದ್ದರು.
ನಮ್ಮನ್ನು ಕಂಡು ಅವರಿಗಾದ ಸಂತಸ ಅಪಾರ. ಭದ್ರಾವತಿಯಲ್ಲಿನ ಶಾಲೆ ನನ್ನ ಶಾಲೆ.ಆದು “ನನ್ನ ಭಾಗ್ಯದ ಬಾಗಿಲು” ತೆರೆದ ಶಾಲೆ ಎಂದು ಭಾವಪೂರ್ಣವಾಗಿ ಉದ್ಗರಿಸಿದರು.
ನಾನು ಅವರಿಗೆ ಹಾಕಲು ಹಾರ ತೆಗೆದುಕೊಂಡು ಹೋಗಿದ್ದೆ.
ನಮ್ಮನ್ನೇ ಅವರು ಸೋಫಾದಲ್ಲಿ
ಕೂಡಿಸಿ ಹಂಪನಾ ದಂಪತಿ ನನಗೆ ಶಾಲು ಹೊದಿಸಿ- ನನ್ನ ಪತ್ನಿಗೆ ಸೀರೆ- ನೀಡಿ ಸನ್ಮಾನಿಸಿದರು.
ಕಮಲಾ ಹಂಪನಾ ಅವರು ಕನಾ೯ಟಕದ ಪುಣ್ಯ.
ಶ್ರದ್ಧಾಂಜಲಿ
ಸ್ಮರಣೆ:
ಸಿ.ವಿ.ತಿರುಮಲರಾವ್
ನಿವೃತ್ತ ಜಂಟಿ ನಿರ್ದೇಶಕರು. ಶಿಕ್ಷಣ ಇಲಾಖೆ.