Dharmasthala Rural Development Project ಮಕ್ಕಳು ನೋಡಿ ಕಲಿಯುವುದೆ ಹೆಚ್ಚು ಮಕ್ಕಳು ದುರಬ್ಯಾಸಕ್ಕೆ ಒಳಗಾಗಬಾರದು ಎಂದರೆ ಮೊದಲು ಪೋಷಕರು ಒಳ್ಳೆಯ ಅಭ್ಯಾಸ ಅಳವಡಿಸಿಕೊಳ್ಳಬೇಕು ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಆರ್.ಆರ್.ಪಾಟೀಲ್ ಹೇಳಿದರು.
ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್‍ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳು ದೇಶದ ಆಸ್ತಿ ಅವರಿಗೆ ನಮ್ಮ ದೇಶ ನಮ್ಮ ಹೆಮ್ಮೆ ಎನ್ನುವ ಮನೋಭಾವ ವಿದ್ಯಾರ್ಥಿ ದೆಸೆಯಿಂದಲೆ ಬೆಳೆಸಬೇಕು. ಮಕ್ಕಳು ದುಶ್ಚಟಕ್ಕೆ ಬಲಿಯಾಗದಂತೆ ಪೋಷಕರು, ಶಿಕ್ಷಕರು, ಸಮಾಜದ ಪ್ರತಿಯೊಬ್ಬರೂ ಎಚ್ಚರಿಕೆವಹಿಸಬೇಕು. ಮೊಬೈಲ್ ಬಳಕೆ ಮಿತಿಮೀರುತ್ತಿರುವುದು ಆತಂಕಕಾರಿ ಅದರಲ್ಲಿ ಸಿಗುವ ಒಳ್ಳೆಯ ವಿಷಯ ನೋಡುವುದಕ್ಕೆ ಪ್ರೇರೇಪಿಸಬೇಕು ಮಕ್ಕಳೆದುರು ದೊಡ್ಡವರೆ ರೀಲ್ಸ್ ನೋಡುತ್ತಾ ಕೂತರೆ ಸಮಸ್ಯೆ ಇನ್ನಷ್ಟು ಹೆಚ್ಚುತ್ತದೆ ಪ್ರತಿಯೊಬ್ಬ ವಿದ್ಯಾರ್ಥಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ ನಿತ್ಯ ಶಾಲೆಯಲ್ಲಿ ಮಾಡಿದ ಪಾಠ ಅಂದೆ ಮನೆಯಲ್ಲಿ ಮನನ ಮಾಡಿಕೊಳ್ಳಬೇಕು ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಬೇಕು ಆಗ ಜೀವನಕ್ಕೊಂದು ಸಾರ್ಥಕತೆ ಸಿಗುತ್ತದೆ ಎಂದರು.
Dharmasthala Rural Development Project ಈಸೂರು ವಲಯಾಧ್ಯಕ್ಷ ಬೇಗೂರು ಶಿವಪ್ಪ ಮಾತನಾಡಿ ದುಶ್ಚಟ ಮನುಷ್ಯನ ಅವನತಿಗೆ ಹೇಗೆ ಕಾರಣವಾಗುತ್ತದೆ, ಒಳ್ಳೆಯ ಗುಣ ಹೇಗೆ ಜೀವನದಲ್ಲಿ ಮೇಲೇರುವುದಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ ಎನ್ನುವುದು ಮಕ್ಕಳಿಗೆ ತಿಳಿಸುವುದಕ್ಕಾಗಿ ಗ್ರಾಮದಲ್ಲಿ ಕಾರ್‍ಯಕ್ರಮ ನಡೆಸಿರುವುದು ಒಳ್ಳೆಯ ಬೆಳೆವಣಿಗೆ ಇಲ್ಲಿ ಕೇಳಿದ ಎಲ್ಲ ವಿಷಯ ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಂಶುಪಾಲೆ ಭಾರತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಷಣ್ಮುಖಪ್ಪ ಎಲ್ಲ ಸದಸ್ಯರು, ವಲಯ ಮೇಲ್ವಿಚಾರಕಿ ಶ್ವೇತಾ, ಪ್ರತಿನಿಧಿ ಗೀತಾ, ಪೂರ್ಣಿಮಾ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
Dharmasthala Rural Development Project ಮಕ್ಕಳು ದೇಶದ ಆಸ್ತಿ, ದೇಶಪ್ರೇಮವನ್ನ ಅವರಲ್ಲಿ ಬೆಳೆಸಬೇಕು- ಆರ್.ಆರ್.ಪಾಟೀಲ್
Date: