Lok Sabha Election ಜೆಡಿ(ಎಸ್) ರಾಷ್ಟ್ರೀಯ ನಾಯಕರು ಬಿಜೆಪಿ ಜೊತೆ ಕೈ ಜೋಡಿಸಿರುವ ಹಿನ್ನೆಲೆ, ಪಕ್ಷದ ಕೇರಳ ರಾಜ್ಯ ಘಟಕದ ನಾಯಕರು ಹೊಸ ಪಕ್ಷ ಸ್ಥಾಪನೆಗೆ ನಿರ್ಧರಿಸಿದ್ದಾರೆ.
ಮಂಗಳವಾರ ತಿರುವನಂತಪುರದ ಪಕ್ಷದ ರಾಜ್ಯ ಕಚೇರಿಯಲ್ಲಿ ಸಭೆ ಸೇರಿದ ಕೇರಳ ಜೆಡಿಎಸ್ ನಾಯಕರು, ಹೊಸ ಹೆಸರು, ಚಿಹ್ನೆಯೊಂದಿಗೆ ಹೊಸ ಪಕ್ಷ ಕಟ್ಟುವ ನಿರ್ಧಾರ ಕೈಗೊಂಡಿದ್ದಾರೆ.
ಲೋಕಸಭೆ ಚುನಾವಣೆಗೂ ಮುನ್ನ ಜೆಡಿ (ಎಸ್) ನಾಯಕರು ಏಕಾಏಕಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಘೋಷಣೆ ಮಾಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪಕ್ಷದ ಕೇರಳ ಘಟಕ, “ನಾವು ಕೇರಳದಲ್ಲಿ ಆಡಳಿತರೂಢ ಎಡರಂಗದ ಜೊತೆಯೇ ಇರುತ್ತೇವೆ” ಎಂದು ಹೇಳಿದ್ದರು.
Lok Sabha Election ಆರಂಭದಲ್ಲಿ ಕೇರಳದ ಜೆಡಿಎಸ್ ನಾಯಕರ ಮನವೊಲಿಸುವ ಪ್ರಯತ್ನ ನಡೆಸಿದ್ದ ದೇವೇಗೌಡರು ಮತ್ತು ಕುಮಾರಸ್ವಾಮಿ, ಅವರು ಒಪ್ಪದಿದ್ದಾಗ “ಕೇರಳ ಜೆಡಿಎಸ್ ಎಡರಂಗದ ಜೊತೆಯೇ ಮುಂದುವರಿಯಲಿದೆ” ಎಂದಿದ್ದರು. ಆದರೂ, ಕೇರಳದ ನಾಯಕರಿಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದು ಸಮಾಧಾನ ನೀಡಿರಲಿಲ್ಲ.
ಲೋಕಸಭೆಯ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿರುವ ಕುಮಾರಸ್ವಾಮಿ, ಪ್ರಸ್ತುತ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಬೆಳವಣಿಗೆ ಕೇರಳ ಜೆಡಿಎಸ್ ನಾಯಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
Lok Sabha Election ಕೇರಳದಲ್ಲಿ ಜೆಡಿಎಸ್ ಪಕ್ಷವು ಎಡರಂಗದ ಜೊತೆ ಇರುವ ನಿರ್ಧಾರ
Date: