Shubhamangala Shivamogga ಶುಭ ಮಂಗಳ ಸಮಯದಾಯ ಭವನದಲ್ಲಿ ಶಿವಮೊಗ್ಗ ನಗರದ ವಿವಿಧ ಯೋಗ ಸಂಸ್ಥೆಗಳ ಆಶ್ರಯದಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21ರಂದು ಹಮ್ಮಿಕೊಳ್ಳಲಾಗಿದೆ.
ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆ ನೀಡಿದ ಅವರು,
ನಮ್ಮ ದೇಹ ಮತ್ತು ಮನಸ್ಸನ್ನು ಪುನರ್ಜೀವನ ಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ದಿನ ಯೋಗ ಮಾಡುವುದರಿಂದ ಉದ್ವೇಗಗಳ ಮೇಲೆ ಕೆಲಸ ಮಾಡಲು ಸಹಾಯವಾಗುತ್ತದೆ. ನಮ್ಮ ಚೈತನ್ಯವು ಹೆಚ್ಚುವುದು ಮತ್ತು ಮನಸ್ಸು ಸಂಪೂರ್ಣ ವಿಶ್ರಾಂತಿಯನ್ನು ಪಡೆಯಲು ಸಹಾಯ ಮಾಡುತ್ತದೆ. ಮನುಷ್ಯ ಅನಗತ್ಯ ಪ್ರತಿವರ್ಷ ಜೂನ್ 21ರಂದು ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜನರು ತಮ್ಮ ಮಾನಸಿಕ ಒತ್ತಡ, ದೈಹಿಕ ಆರೋಗ್ಯಕ್ಕಾಗಿ ಭಾರತೀಯ ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆಯಾಗಿದ್ದು, ಭಾರತೀಯ ಯೋಗ ಪರಂಪರೆ ಜಗತ್ತಿಗೆ ಒಂದು ದೊಡ್ಡ ಕೊಡುಗೆಯಾಗಿದೆ ಎಂದರು.
ದಿ ಆರ್ಟ್ ಆಫ್ ಲಿವಿಂಗ್, ಸುಮೇರು ಯೋಗ ಕೇಂದ್ರ, ಅಮೃತ ಯೋಗ ಕೇಂದ್ರಕಣಾದ ಯೋಗ ಮತ್ತು ರಿಸರ್ಚ್
, ಎಸ್.ಪಿ.ವೈ.ಎಸ್.ಎಸ್. (ರಿ.), ಕರ್ನಾಟಕ, ಫೌಂಡೇಷನ್, ನಿಹಾರಿಕಾ ಯೋಗ ಕೇಂದ್ರ, ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಇವರುಗಳ ಸಂಯುಕ್ತಾಶ್ರಯದಲ್ಲಿ ಈ ವರ್ಷದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಈ ಬಾರಿಯ ಧ್ಯೇಯ ವಾಕ್ಯ ” ಮಹಿಳಾ ಸಬಲೀಕರಣಕ್ಕಾಗಿ ಯೋಗ” ಎನ್ನುವುದಾಗಿದೆ. 21 ರ ಶುಕ್ರವಾರ ಬೆಳಿಗ್ಗೆ 5.30 ರಿಂದ 8.30ರವರೆಗೆ ವಿನೋಬನಗರ, ಶುಭಮಂಗಳ ಸಮುದಾಯ ಧ್ಯಾನ ನಂತರ ಉಪನ್ಯಾಸ ಗುರುವಂದನಾ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಸಾಮೂಹಿಕ ಯೋಗಾಭ್ಯಾಸ, ಸೂರ್ಯನಮಸ್ಕಾರ, ಆಸನ, ಪ್ರಾಣಾಯಾಮ ನಡೆಯಲಿದೆ ಎಂದರು.
Shubhamangala Shivamogga ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ವೈದ್ಯ ಡಾ!!.
ಪ್ರೀತಮ್ ಬಿ. ಆಗಮಿಸಿ ಡಯಾಬಿಟಿಸ್ ರಿವರ್ಸಲ್ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಶನೇಶ್ವರ
ದೇವಸ್ಥಾನ ಸಮಿತಿ ಟ್ರಸ್ಟ್, ಭಜನಾ ಪರಿಷತ್ (ಶಿವಮೊಗ್ಗ ನಗರದ ಭಜನಾ ಒಕ್ಕೂಟ), ಸಂಸ್ಕಾರ ಪ್ರತಿಷ್ಠಾನ ಹಾಗೂ ಧರ್ಮವರ್ಧಿನಿ (ರಿ.), ಇವರುಗಳ ವಿಶೇಷ ಸಹಕಾರವಿದೆ ಎಂದರು.
ಹೆಚ್ಚಿನ ಮಾಹಿತಿಗೆ
ಸಂಪರ್ಕಿಸಿ: 9964072793 (ಶ್ರೀ ಶಬರೀಶ್ ಕಣ್ಣನ್), 9481505853 (ಶ್ರೀ ಶಶಿಭೂಷಣ್ ಶಾಸ್ತ್ರಿ) 9972368587 (ಶ್ರೀ ಕೃಷ್ಣ 9886674375 (ಶ್ರೀ ಅನಿಲ್ ಕುಮಾರ್ ಹೆಚ್. ಶೆಟ್ಟರ್) 9741103173 (ಶ್ರೀಮತಿ ಸುಧಾ ಮಂಜುನಾಥ್), 9945150204 (ಶ್ರೀಮತಿ ಶಾಂತ ಎಸ್. ಶೆಟ್ಟಿ) 9379097360 (ಶ್ರೀಮತಿ ಮಧುಸುರೇಶ್), 9481500419 (ಶ್ರೀಮತಿ ಮಮತಾ 9480457274 (ಶ್ರೀ ಬೆಲಗೂರು ಮಂಜುನಾಥ್), 9901824699 – (ಶ್ರೀ ರಾಜಶೇಖರ್).