Tuesday, February 3, 2026
Tuesday, February 3, 2026

Shivamogga Police ಶಿವಮೊಗ್ಗದಿಂದ ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ!

Date:

Shivamogga Police ವಿಜಯಪುರಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆಯಾಗಿದ್ದು, ಆಕೆಯನ್ನಯ ಕೊಲೆ ಮಾಡಲಾಗಿದೆ.

ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರ 4ನೇ ಕ್ರಾಸ್ ವಾಸಿ ಟೈಲರ್ ಕೆಲಸ ಮಾಡಿಕೊಂಡಿದ್ದ ಮಮತಾ ಶ್ರೀಧರ್ ಎಂಬ 48 ವರ್ಷದ ಮಹಿಳೆ ಜೂ.02 ರಿಂದ ಕಾಣೆಯಾಗಿದ್ದರು.

ತನ್ನ ಮನೆಯಿಂದ ಜೂನ್ 02 ರಂದು ವಿಜಯಪುರಕ್ಕೆ ಹೋಗುತ್ತಿರುವುದಾಗಿ ತಂಗಿಯೊಂದಿಗೆ ಹೇಳಿ ಹೋದವರು ಮಮತಾ ವಾಪಾಸ್ ಆಗಿರಲಿಲ್ಲ. ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು.‌

ಈಕೆಯ ಫೋನ್ ಸ್ವಿಚ್‍ಆಪ್ ಆಗಿತ್ತು. ಈ ಪ್ರಕರಣವನ್ನು ಬೇಧಿಸಿದ ಕೋಟೆ ಪೊಲೀಸರಿಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ.
ನಾಪತ್ತೆಯಾಗಿದ್ದ ಮಹಿಳೆ ಪತ್ತೆಗೆ ಕೋಟೆ ಪಿಐ ಗುರುಬಸಪ್ಪ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಈ ತಂಡ ಮಹಿಳೆಯ ಫೋನ್ ಲೊಕೇಷನ್ನನ್ನು ಟ್ರ್ಯಾಕ್ ಮಾಡಿತ್ತು.

ಲೋಕೇಷನ್ ವಿಜಯಪುರ ಜಿಲ್ಲೆ ಬೀಳಗಿ ತಾಲೂಕನ್ನು ಕೊನೆಯದಾಗಿ ತೋರಿಸಿದೆ. ಫೋನ್ ಟ್ರ್ಯಾಕ್ ಮಾಡಿದಾಗ ರೇವಣ ಸಿದ್ದಯ್ಯ (27) ಪತ್ತೆಯಾಗಿದ್ದಾನೆ . ಆಕೆಯ ಕೊನೆಯ ಫೋನ್ ಕಾಲು ಈತನಿಗೆ ಇದ್ದುದರಿಂದ ಪೊಲೀಸರು ಬೀಳಗಿಯಲ್ಲಿ ಈತನನ್ನು ಬಂಧಿಸಿ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

ರೇವಣ ಸಿದ್ದಯ್ಯ ಕೋಟೆ ಪೊಲೀಸರ ಖಡಕ್ ವಿಚಾರಣೆಯಲ್ಲಿ ಕೊಲೆ ವಿಷಯ ಬಾಯಿ ಬಿಟ್ಟಿದ್ದಾನೆ. ಬೀಳಗಿಯಲ್ಲಿ ಕೊಲೆ ಮಾಡಿ ಕೃಷ್ಣ ನದಿಗೆ ಬಿಸಾಕಿರುವುದಾಗಿ ಮಾಹಿತಿ ಕೊಟ್ಟಿದ್ದಾನೆ.
ಫೋನ್ ಸಂಪರ್ಕಕ್ಕೆ ಬಂದಿದ್ದ ರೇವಣ ಸಿದ್ದಯ್ಯನಿಗೆ ಮಮತಾ ಆನ್ ಲೈನ್ ನಲ್ಲಿ ಹಣ ವರ್ಗಾವಣೆ ಮಾಡಿದ್ದಳು. ಹಣ ವಾಪಾಸ್ ಪಡೆಯಲು ಕೇಳಿದಾಗ ವಿಜಯಪುರಕ್ಕೆ ಬರುವಂತೆ ಆತ ಹೇಳಿದ್ದ ಎನ್ನಲಾಗಿದೆ. ವಿಜಯಪುರಕ್ಕೆ ಜೂ.02 ರಂದು ಬಂದಿದ್ದಳು.

Shivamogga Police ಜೂನ್ 04 ರಂದು ಆಕೆಯನ್ನು ಕೊಲೆ ಮಾಡಿ ಕೃಷ್ಣಾ ನದಿಗೆ ಬಿಸಾಕಿದ್ದಾನೆ. ಬೀಳಗಿ ಪೊಲೀಸರಿಗೆ ಈ ಮೃತದೇಹ ಪತ್ತೆಯಾದರೂ ಗುರುತು ಸಿಗದ ಕಾರಣ ಅಪರಿಚಿತ ಶವ ಪತ್ತೆ ಎಂದು ದೂರು ದಾಖಲಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...