Bharat Scouts and Guides ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆ ಹಾಗೂ ಜಿಲ್ಲಾ ಆಯುಷ ಇಲಾಖೆ, ಶಿವಮೊಗ್ಗರವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಸ್ಕೌಟ್ ಭವನದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿ ಯೋಗೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಶಿವಮೊಗ್ಗದ ನಗರ ಶಾಲೆ ಕಾಲೇಜುಗಳ ಒಟ್ಟು ,500 ಸ್ಕೌಟ್, ಗೈಡ್,ರೋವರ್, ರೇಂಜರ್, ಸ್ಕೌಟ್ ಮಾಸ್ಟರ್ ಮತ್ತು ಗೈಡ್ ಕ್ಯಾಪ್ಟನ್ ಗಳು ಹಾಜರಿದ್ದರು. ಬೆಳ್ಳಿಗ್ಗೆ 08-00 ಗಂಟೆಗೆ ಖ್ಯಾತ ಮಕ್ಕಳ ತಜ್ನರು, ಶಾಸಕರು ವಿಧಾನ ಪರಿಷತ್‌ನ ಡಾ|| ಧನಂಜಯ ಸರ್ಜಿ ರವರು ಹೂಕುಂಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟನೆ ಮಾಡಿ ಭಾರತೀಯ ಇತಿಹಾಸದಲಿ ಯೋಗಕ್ಕೆ ಆರು ಸಾವಿರ ವರ್ಷಗಳ ಇತಿಹಾಸ ಇದೆ. ಹಿಂದೆ ಋಷಿ ಮುನಿಗಳು ಹಾಗೂ ತಪಸ್ವಿಗಳು ಯಾವುದೇ ಕಾಯಿಲೆ ಇಲ್ಲದೇ ಯೋಗದ ಮುಖಾಂತರ ಮಾತ್ರ ಗುಣಮಾಡಿಕೊಂಡು ನೂರಾರು ವರ್ಷಗಳ ಕಾಲ ಬದುಕುತ್ತಿದ್ದರು ಎಂದರು. ಯೋಗಾಸನ ಬುದ್ದಿ, ಮನಸ್ಸು ಹಾಗೂ ಶರೀರವನ್ನು ಸಮತೋಲನದಲ್ಲಿ ಇಡಲು ಒಂದು ದಿವ್ಯ ಶಕ್ತಿಯನ್ನು ಹೊಂದಿದೆ ಔಷಧಿಗಳು ಕೇವಲ ಶೇ. 20ರಷ್ಟು ದೇಹದಲ್ಲಿ ಕೆಲಸ ಮಾಡಿದರೆ ಯೋಗವು ಶೇ 100 ರಷ್ಟು ಕಾಯಿಲೆಯನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಅಲ್ಲದೆ ಯೋಗದಿಂದ ಸುಪ್ತ ಮನಸ್ಸು ಮತ್ತು ಜಾಗೃತ ಮನಸ್ಸು ಹೆಚ್ಚು ಕ್ರಿಯಾಶೀಲವಾಗುತ್ತದೆ ಎಂದು ತಿಳಿಸಿದರು.
Bharat Scouts and Guides ಜಿಲ್ಲಾ ಆಯುಷ ಅಧಿಕಾರಿಯವರಾದ ಡಾ|| ಲಿಂಗರಾಜ್ ರವರು ಮಾತನಾಡುತ್ತಾ ಜೂನ 10 ರಿಂದ 20ನೇ ತಾರಿಕಿನ ವರೆಗೆ ಪೂರ್ವಭಾವಿ ಕಾರ್ಯಕ್ರಮ ಯೋಗೋತ್ಸವವನ್ನು ಇಂದು ಆಚರಿಸುತ್ತಿದ್ದು ಈ ವಷದ ಧ್ಯೇಯವಾಕ್ಯ ‘ಮಹಿಳಾ ಸಬಲೀಕರಣಕ್ಕಾಗಿ ಯೋಗ’ ಎಂಬುದಾಗಿದ್ದು ಮಾಹಿಳಾ ಕಾಲೇಜು ಹಾಸ್ಟೇಲ್‌ಗಳಲ್ಲಿ ಯೋಗಾಭ್ಯಾಸವನ್ನು ಆಯುಷ ಇಲಾಖೆರವರಿಂದ ಮಾಡಿಸುತ್ತಿದ್ದು ಮುಂದೆನು ಇದನ್ನು ರೋಡಿಸಿಕೊಳ್ಳಬೇಕೆಂದು ತಿಳಿಸಿದರು.
ಆಯುಷ ಇಲಾಖೆಯ ಶ್ರೀ ಮಹೇಂದ್ರ ಬಿ.ಆರ್ ಮತ್ತು ಕು|| ಮೋನಿಕಾ ಸಿ.ಎಸ್. ರವರು ಕೆಲವು ಆಸನಗಳನ್ನು ಮಾಡಿ ತೋರಿಸಿ ಮಕ್ಕಳಿಂದ ಮಾಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲೆಯ ಮುಖ್ಯ ಆಯುಕ್ತರಾದ ಶ್ರೀ. ಕೆ.ಪಿ.ಬಿಂದುಕುಮಾರರವರು ಮಾತನಾಡಿ ನಿವೆಲ್ಲರೂ ದಿನಾಲೂ ಯೋಗ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಕರೆ ನೀಡಿದರು. ಜಿಲ್ಲಾ ಗೈಡ್ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್ ರವರು ಸ್ವಾಗತಿಸಿದರು. ಡಾ|| ಅನಿಲ್ ಕುಮಾರ ರವರು ವಂದಿಸಿದರು. ಸಭಾ ಕಾರ್ಯಕ್ರಮವನ್ನು ಶ್ರೀಮತಿ ಭಾರತಿ ಡಾಯಸ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ರವರು ನಿರ್ವಹಿಸಿದರು. ಜಿಲ್ಲಾ ಖಜಾಂಚಿ ಚೂಡಾಮಣಿ ಪವಾರ ಜಂಟಿ ಕಾರ್ಯದರ್ಶಿ ವೈ.ಆರ್.ವಿರೇಶಪ್ಪ, ಡಾ|| ಸುರೇಂದ್ರ ಆಯುಷ್ ಇಲಾಖೆಯ ಶಿಬ್ಬಂದಿ ವರ್ಗದವರು, ವಿಜಯಕುಮಾರ, ಹೆಚ್.ಶಿವಶಂಕರ, ಗೀತಾಚಿಕ್ಕಮಠ, ರಾಜೇಶ ಅವಲಕ್ಕಿ, ಕೃಷ್ಣಸ್ವಾಮಿ, ಮಲ್ಲಿಕಾರ್ಜುನ ಹಿರಿಯ ಸ್ಕೌಟರ್ ಗೈರ‍್ಸ್ಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು.
ಕಾರ್ಯಕ್ರಮದ ನಂತರ ಪ್ರಮುಖ ಬಿದಿಗಳಲ್ಲಿ ಯೋಗ ಜಾಗ್ರತಿ ಜಾಥಾವನ್ನು ಕೈಗೊಳ್ಳಲಾಯಿತು.