Times Spirit International School ಭದ್ರಾವತಿ ನಗರದ ಹೊಸ ಸಿದ್ದಾಪುರ ಬೈಪಾಸ್ ಬಿ.ಹೆಚ್.ರಸ್ತೆಯಲ್ಲಿರುವ ಟೈಮ್ಸ್ ಸ್ಪೂರ್ತಿ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಪುಟ್ಟ ಕಂದಮ್ಮಗಳಿಗೆ ವಿದ್ಯಾರಂಭ ಕಾರ್ಯಕ್ರಮವನ್ನು ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಗಂಗಾಧರ್ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಕಂದಮ್ಮಗಳಿಗೆ ಕಲಿಕೆ, ಬುದ್ದಿ ಬೆಳವಣಿಗೆ, ಜ್ಞಾನೋದಯ ತುಂಬಿಸುವ ಹೊಸ ಶೈಕ್ಷಣಿಕಾರಂಭಕ್ಕೆ ಸ್ಪೂರ್ತಿಯಾಯಿತು. ಪುಟ್ಟ ಮಗು ಜಗತ್ತಿಗೆ ಕಣ್ಣು ಬಿಟ್ಟ ಕ್ಷಣದಿಂದಲೇ ಅದರ ಕಲಿಕೆ ಪ್ರಾರಂಭವಾಗುತ್ತದೆ. ನಗುವುದು, ಕೂರುವುದು, ನಿಲ್ಲುವುದು, ಚಪ್ಪಾಳೆ ತಟ್ಟುವುದು, ತೊದಲು ಮಾತು ಆರಂಭ ಎಲ್ಲವೂ ಮಗುವಿನ ಕಲಿಕೆಯೇ ಆಗಿರುತ್ತದೆ. ಇದರ ಜೊತೆಗೆ ದೊಡ್ಡವರನ್ನು ನೋಡಿ ಕಲಿಯುತ್ತಲೇ ಇರುತ್ತದೆ. ಇಷ್ಟೆಲ್ಲಾ ಆಗಿ ಮಗು ಶಾಲೆ ಎಂಬ ಜ್ಞಾನಾರ್ಜನೆಯ ಹಾದಿಗೆ ಹೆಜ್ಜೆ ಇಡುವ ಶುಭ ಗಳಿಗೆಯಲ್ಲಿ ಸರಸ್ವತಿ ದೇವಿಯ ಆರಾಧನೆ ಮತ್ತು ವಿಘ್ನೇಶ್ವರ ಸ್ವಾಮಿಯ ಪೂಜೆಯೊಂದಿಗೆ ವಿದ್ಯಾರಂಭ ಮಾಡುವುದು ನಮ್ಮೆಲ್ಲರ ಸಂಸ್ಕೃತಿಯಾಗಿದೆ ಎಂದು ಗಂಗಾಧರ್ ಹೇಳಿದರು.
Times Spirit International School ಪ್ರಾಂಶುಪಾಲ ಕೆ.ಚೇತನ್ ಸರಸ್ವತಿ ದೇವಿಯ ಆರಾಧನೆಯೊಂದಿಗೆ ಹಾಗೂ ಗುರುಗಳ ಮಾರ್ಗದರ್ಶನದೊಂದಿಗೆ ಪೋಷಕರು ತಮ್ಮ ಮಕ್ಕಳನ್ನು ಮಡಿಲಲ್ಲಿ ಕೂರಿಸಿಕೊಂಡು ಓಂ ನಮೋ ಎಂದು ಬರೆಸಲಾಯಿತು. ನಂತರ ಶಿಕ್ಷಕರು ಮಕ್ಕಳಿಗೆ ಕಂಕಣ ಕಟ್ಟುವ ಮೂಲಕ ಅವರ ಕಲಿಕೆಯ ಜವಾಬ್ದಾರಿ ವಹಿಸಿಕೊಂಡರು. ಗುರುಗಳು ಮಕ್ಕಳಿಗೆ ಕಲಿಕೆಯ ವಸ್ತುಗಳನ್ನು ನೀಡುವುದರ ಮೂಲಕ ಆಶೀರ್ವಧಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕಿ ಮಮತಾ ಸೇರಿದಂತೆ ಶಿಕ್ಷಕ ಶಿಕ್ಷಕಿಯರು ಸಿಬ್ಬಂದಿ ನೂರಾರು ಪೋಷಕರು ಭಾಗವಹಿಸಿದ್ದರು.
Times Spirit International School ವಿಘ್ನೇಶ್ವರ ಪೂಜೆಯೊಂದಿಗೆ ವಿದ್ಯಾರಂಭ ನಮ್ಮ ಸಂಸ್ಕೃತಿ- ಗಂಗಾಧರ್
Date: