Youth Hostel of Association India ಚಾರಣ ಚಟುವಟಿಕೆಯಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. ಚಾರಣದಲ್ಲಿ ಪಾಲ್ಗೊಳ್ಳುವುದರಿಂದ ದೇಹ ಮನಸ್ಸು ಸದೃಢಗೊಳ್ಳುವುದರ ಜತೆಯಲ್ಲಿ ಸಂತೋಷ ನಮ್ಮದಾಗುತ್ತದೆ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಜಿ.ಸುನೀಲ್‌ಕುಮಾರ್ ಹೇಳಿದರು.
ಯೂತ್ ಹಾಸ್ಟೆಲ್ ಆಫ್ ಅಸೋಸಿಯೇಷನ್ ಇಂಡಿಯಾ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಮಳೆಗಾಲದ ಚಾರಣ.. ಬಂಡೆಕಲ್ ಗುಡ್ಡ ಹಾಗೂ ಉಕ್ಕಡ ಫಾಲ್ಸ್ ಗೆ ಚಿಕ್ಕಮಂಗಳೂರು ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಇವರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾದ ಚಾರಣಕ್ಕೆ ಚಾಲನೆ ನೀಡಿ ಮಾತನಾಡಿ, ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಚಾರಣಗಳನ್ನು ಪ್ರತಿ ವರ್ಷ ಜಿಲ್ಲಾ ಘಟಕದ ಆಯೋಜಿಸುತ್ತಿದ್ದು, ನೂರಾರು ಜನರು ಚಾರಣದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ ಎಂದು ತಿಳಿಸಿದರು.
ಚಾರಣ ಮಾಡುವುದರಿಂದ ಸಸ್ಯ ಸಂಕುಲ ಹಾಗೂ ಜೀವ ವೈವಿಧ್ಯತೆಯ ಪರಿಚಯ ಆಗುತ್ತದೆ. ಪರಿಸರದ ವಿಶೇಷತೆ ಬಗ್ಗೆ ತಿಳಿಯುತ್ತದೆ. ಉಕ್ಕಡ ಜಲಪಾತ ಹಾಗೂ ಬಂಡೆ ಕಲ್ ಬೆಟ್ಟಕ್ಕೆ ನೂರು ಜನ ಸದಸ್ಯರು ಪಾಲ್ಗೊಂಡಿರುವುದು ವಿಶೇಷ. ಮಹಿಳೆಯರು, ಮಕ್ಕಳು ಅತ್ಯಂತ ಖುಷಿಯಿಂದ ಪಾಲ್ಗೊಂಡಿರುವುದು ಸಂತಸದ ಸಂಗತಿ ಎಂದರು.
ಇದೇ ಸಂದರ್ಭದಲ್ಲಿ ಯೂತ್ ಹಾಸ್ಟೆಲ್ ಜಿಲ್ಲಾ ಚೇರ‍್ಮನ್ ಹರೀಶ್ ಪಂಡಿತ್ ಮಾತನಾಡಿ, ಚಾರಣದಿಂದ ಸಹ ಪ್ರವಾಸಿಗಳೊಂದಿಗೆ ಉತ್ತಮ ಸಂವಹನ ನಡೆಸುವ ಜತೆಯಲ್ಲಿ ಮಾಹಿತಿ ವಿನಿಮಯ ಆಗುತ್ತದೆ. ಮಾನಸಿಕ ದುಗುಡ ಕಡಿಮೆಯಾಗಿ ಉತ್ಸಾಹ ಹೆಚ್ಚುತ್ತದೆ. ದೇಹದ ಶಕ್ತಿ ಸಾಮಾರ್ಥ್ಯದ ಅರಿವಾಗುತ್ತದೆ ಎಂದು ಹೇಳಿದರು.
Youth Hostel of Association India ಯೂತ್ ಹಾಸ್ಟೆಲ್ ರಾಜ್ಯ ಸಂಘದ ಮಾಜಿ ಉಪಾಧ್ಯಕ್ಷ ಜಿ.ವಿಜಯ್‌ಕುಮಾರ್ ಮಾತನಾಡಿ, ತುಂಬಾ ಕಡಿಮೆ ಖರ್ಚಿನಲ್ಲಿ ಅತ್ಯಂತ ವ್ಯವಸ್ಥಿತವಾಗಿ ಚಾರಣಗಳನ್ನು ಯೂತ್ ಹಾಸ್ಟೆಲ್ ಆಯೋಜಿಸುತ್ತದೆ. ಹೆಚ್ಚು ಹೆಚ್ಚು ಜನರು ಯೂತ್ ಹಾಸ್ಟೆಲ್ ಸದಸ್ಯರಾಗಬೇಕು. ಮಳೆಯಲ್ಲಿ ನಡೆದ ಚಾರಣ ವಿಶೇಷ ಅನುಭವ ಎಂದು ತಿಳಿಸಿದರು.
ಚಾರಣದಲ್ಲಿ ಕಾರ್ಯದರ್ಶಿ ಪ್ರಶಾಂತ್, ಉಮೇಶ್ , ರಾಘವೇಂದ್ರ, , ಮನಮೋಹನ್ ಪವಾರ್. ನವೀನ್ ಪಂಡಿತ್. ಹೇಮಂತ್ ರಾಘವೇಂದ್ರ. ಈಶ್ವರಿ.. ಚಿಕ್ಕಮಂಗಳೂರು ಘಟಕದ. ಶಿವಾನಂದ್. ಮಧುಸೂದನ್ ಅಲ್ತಾಫ್ ಸುನೀಲ್, ಆನಂದ್ ಜಿಲ್ಲಾ ಘಟಕದ ನಿರ್ದೇಶಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.