Lok Sabha Election ಉತ್ತರಪ್ರದೇಶ ಯಾವಾಗಲೂ ಲೋಕಸಭಾ ಚುನಾವಣೆಯಲ್ಲಿ ಇತ್ತೀಚೆಗೆ ಬಿಜೆಪಿ ಪಕ್ಷಕ್ಕೆ
ಮಡಿಲು ತುಂಬಾ ಸದಸ್ಯರನ್ನ ತುಂಬಿ ಕೊಡುತ್ತಿದ್ದ ರಾಜ್ಯ
ಆದರೆ ಈಗ ಅದರ ಚಹರೆಯೇ ಬದಲಾಗಿದೆ.
ಉ.ಪ್ರ.ದ 80 ಕ್ಷೇತ್ರಗಳಲ್ಲಿ 43ರಲ್ಲಿ ಇಂಡಿ ಒಕ್ಕೂಟವು ಗೆಲುವು ಸಾಧಿಸಿದೆ. ಈಗ ಈ ಒಕ್ಕೂಟವು 6 ಸಂಸದರನ್ನು ಕಳೆದುಕೊಳ್ಳುವ ಸಂಕಷ್ಟ ಎದುರಾಗಲಿದೆ.
ಲೋಕಸಭೆಯಲ್ಲಿ ಇಂಡಿಒಕ್ಕೂಟವು 237 ಸಂಖ್ಯೆ ಹೊಂದಿದೆ.
ಎಸ್‌ಪಿಯ 5, ಕಾಂಗ್ರೆಸ್‌ನ ಒಬ್ಬ ಸಂಸದರ ವಿರುದ್ಧ ಕನಿಷ್ಠ 2 ವರ್ಷ ಜೈಲು ಶಿಕ್ಷೆ ವಿಧಿಸಬಹುದಾದ ಕೇಸುಗಳಿವೆ.
ಒಂದು ವೇಳೆ ಅವರ ವಿರುದ್ಧ ಆರೋಪಗಳು ಸಾಬೀತಾದಲ್ಲಿ 6 ಕ್ಷೇತ್ರಗಳಲ್ಲೂ ಲೋಕಸಭೆಗೆ ಉಪ-ಚುನಾವಣೆ ನಡೆಯುವ ಅನಿವಾರ್ಯತೆ ಬರಬಹುದು.
Lok Sabha Election ಘಾಜಿಪುರ ಸಂಸದ ಅಫjಲ್ ಅನ್ಸಾರಿ ವಿರುದ್ಧ ಈಗಾಗಲೇ ಗೂಂಡಾ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಅವರನ್ನ4 ವರ್ಷ ಜೈಲು ಶಿಕ್ಷೆಗೂ ಗುರಿಪಡಿಸಲಾಗಿದೆ.
ಅಲಹಾಬಾದ್ ಹೈಕೋರ್ಟ್ ಶಿಕ್ಷೆಗೆ ತಡೆಯಾಜ್ಞೆ ನೀಡಿತ್ತು. ಜುಲೈನಲ್ಲಿ ಇದೇ ಪ್ರಕರಣದ ವಿಚಾರಣೆ ನಡೆಯಲಿದೆ.
ಅಜಂಗಢದ ಸಂಸದ ಧಮೇಂದ್ರ ಯಾದವ್ ವಿರುದ್ಧವೂ 4 ಕ್ರಿಮಿನಲ್ ಕೇಸುಗಳಿವೆ.
ಜುನ್ಪುರ ಎಂಪಿ ಬಾಬು ಸಿಂಗ್ ಕುಶ್ವಾಹ ವಿರುದ್ಧ ಎನ್‌ಆರ್‌ಎಚ್‌ಎಂ ಹಗರಣ ಸಂಬಂಧಿಸಿದ 25 ಕೇಸುಗಳಿವೆ. ಸುಲ್ತಾನಪುರ ಸಂಸದ ರಾಂಭುವಲ್ ನಿಶಾದ್ ವಿರುದ್ಧ ಗುಂಡಾ ಕಾಯ್ದೆಯ 1 ಪ್ರಕರಣವೂ ಸೇರಿ ಒಟ್ಟು 8 ಕೇಸುಗಳಿವೆ. ಇನ್ನು ಚಂದೌಲಿ ಸಂಸದ ಬಿರೇಂದ್ರ ಸಿಂಗ್ ಹಾಗೂ ಸಹರನ್‌ಪುರ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರ ವಿರುದ್ಧವೂ ವಿವಿಧ ಪ್ರಕರಣಗಳು ದಾಖಲಾಗಿವೆ.
ಗೆದ್ದ 43 ಸ್ಥಾನಗಳಲ್ಲಿ ಒಂದು ಪಕ್ಷ 6. ಸ್ಥಾನಗಳಿಗೆ ಚುನಾವಣೆ ಘೋಷಿಸಿದರೆ ಇಂಡಿ ಒಕ್ಕೂಟಕ್ಕೆ 37 ಸ್ಥಾನಗಳು ಉಳಿದುಕೊಳ್ಳುತ್ತವೆ.
ಮುಂದಿನ ಬೆಳವಣಿಗೆಯನ್ನ ಕಾದು ನೋಡಬೇಕಿದೆ.