T.20 World Cup Cricket ಮೊದಲಬಾರಿಗೆ ಅಮೆರಿದಲ್ಲಿ ಆಯೋಜಿಸಿರುವ ವಿಶ್ವಕಪ್ ಟಿ- 20 ಕ್ರಿಕೆಟ್
ಪಂದ್ಯಾವಳಿ ಕುತೂಹಲ ಹುಟ್ಟಿಸಿದೆ.
ಯುಎಸ್ಎ ತಂಡ ಆರಂಭದಿಂದಲೂ ಜಯಗಳಿಸಿ ಗೂಳಿಯಂತೆ ಮುನ್ನುಗ್ಗುತ್ತಿದೆ.
ಬಲಶಾಲಿ ಪಾಕಿಸ್ತಾನ್ ತಂಡವನ್ನೂ ಬಗ್ಗು ಬಡಿದಿದೆ.
ಭಾರತ ಐರ್ಲೆಂಡ್ ವಿರುದ್ಧ ಸುಲಭ ಜಯಗಳಿಸಿದೆ. ಈಗ ಪಾಕಿಸ್ತಾನ್ ತಂಡವನ್ನ ರೋಚಕವಾಗಿ ಮಣ್ಣುಮುಕ್ಕುವಂತೆ ಮಾಡಿದೆ.
ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಿತು.
T.20 World Cup Cricket 119 ರನ್‌ಗಳ ಗುರಿಯನ್ನು ಬೆನ್ನುಹತ್ತಿದ ಪಾಕಿಸ್ತಾನ ಪಾಂಡ್ಯ, ಬುಮ್ರಾ ಮಾರಕ ಬೌಲಿಂಗ್ ದಾಳಿಗೆ ನಲುಗಿತು.
20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 113 ರನ್ ಗಳಿಸುವ ಮೂಲಕ 6 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಈಗಾಗಲೇ ಭಾರತ ಎರಡು ವಿಜಯಗಳಿಂದ ನಾಲ್ಕು ಅಂಕ ಪಡೆದು ಎ ಗುಂಪಿನ ಟೇಬಲ್ ನಲ್ಲಿ ಮೊದಲ ಸ್ಥಾನದಲ್ಲಿದೆ.
ಪಾಕ್ ಎರಡು ಸೋಲುಗಳನ್ನಂಡು ಪಾಯಿಂಟ್ ಗಳಿಸಬೇಕಿದೆ. ಪಾಕ್ ತಂಡ ಕೆನಡಾ ಮತ್ತು ಐರ್ಲೆಂಡ್ ವಿರುದ್ಧ ಆಡಬೇಕು.ಆ ಎರಡೂ ಪಂದ್ಯ ಗೆಲ್ಲಬೇಕಿದೆ.
ಯುಎಸ್ಎ ನಾಲ್ಕು ಪಾಯಿಂಟ್ ಪಡೆದಿದೆ.
ಭಾರತ ಮತ್ತು ಯುಎಸ್ ಎ ಪಂದ್ಯ ನಡೆಯಬೇಕಿದೆ.