Ganapati Urban Co-operative Bank ಸಾಗರದ ಹೆಸರಾಂತ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಇಂದಿನ ಗ್ರಾಹಕರ ಅಗತ್ಯತೆ ಅರಿತು ಅದಕ್ಕೆ ತಕ್ಕಂತೆ ಬೆರಳ ತುದಿಯಲ್ಲಿ ಬ್ಯಾಂಕಿಂಗ್ ಸೇವೆ ಎನ್ನುವ ಮಾತಿನಂತೆ ಯುಪಿಐ ಸೇವೆಯನ್ನು ಒದಗಿಸುತ್ತಿದ್ದೇವೆ ಹಾಗೂ ಈ ಸೇವೆಯನ್ನು ನಮ್ಮ ಎಲ್ಲಾ ಗ್ರಾಹಕರಿಗೆ ಷೇರುದಾರರಿಗೆ ನೀಡುತ್ತಿರುವುದು ನಮ್ಮ ಬ್ಯಾಂಕಿಗೆ ಹಮ್ಮೆಯ ಸಂಗತಿಯಾಗಿದೆ. ಎಂದು ಶ್ರೀ ಗಣಪತಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಣಾಧಿಕಾರಿ ಲಲಿತಾಂಬಿಕೆ ಹೇಳಿದರು.
ಪಟ್ಟಣದಲ್ಲಿರುವ ಬ್ಯಾಂಕ್‌ನ ಮುಖ್ಯ ಕಚೇರಿಯಲ್ಲಿ ಶುಕ್ರವಾರ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ UPI (ಜಿಪೆ, ಫೋನ್ ಪೆ, ಪೇಟಿಎಂ, ವಾಟ್ಸ್ಆ್ಯಪ್ ಪೆ) ಸೌಲಭ್ಯ ಲೋಕಾರ್ಪಣೆ ಮಾಡಿದ ಬ್ಯಾಂಕ್ ನ ಅಧ್ಯಕ್ಷರಾದ ನಾರಾಯಣ್ ಮಾತನಾಡಿದರು.
ಶತಮಾನಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಗಣಪತಿ ಅರ್ಬನ್ ಬ್ಯಾಂಕ್ ಯಾವತ್ತಿಗೂ ಗ್ರಾಹಕರ ಅಗತ್ಯತೆಯನ್ನು ಅರಿತು ಕೆಲಸ ಮಾಡುತ್ತದೆ. ನಮ್ಮಲ್ಲಿರುವ ಹಲವು ಸೇವೆಗಳನ್ನು ಉಪಯೋಗಿಸಿಕೊಳ್ಳುತ್ತಿರುವ ಗ್ರಾಹಕರಿಗೆ ಸದಾ ಹೆಚ್ಚಿನ ಸೇವೆ ಕಲ್ಪಿಸಿಕೊಡಬೇಕೆನ್ನುವುದು ಆಡಳಿತ ಮಂಡಳಿ ಹಾಗೂ ಎಲ್ಲ ಸಿಬ್ಬಂದಿಗಳ ಅಭಿಲಾಷೆಯಾಗಿದೆ. ಅದಕ್ಕೆ ಪೂರಕವಾಗಿ ಪ್ರಸ್ತುತದಲ್ಲಿ ಲಭ್ಯವಿರುವ ಅತ್ಯುನ್ನತ ತಂತ್ರಜ್ಞಾನ ಅಳವಡಿಸಿಕೊಂಡು ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸೇವೆ ಕೊಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಅದಕ್ಕೆ ತಕ್ಕಂತೆ ಬ್ಯಾಂಕಿನ ಹಿತ ಕಾಪಾಡುವ ಮತ್ತು ಅಭಿವೃದ್ಧಿಯತ್ತ ಮುನ್ನಡೆಸುವ ನಿರ್ದೇಶಕರು ಅಂದು, ಇಂದೂ ನಮ್ಮೊಂದಿಗಿದ್ದಾರೆ ಎಂದರು, ಸಹಕಾರಿ ಕ್ಷೇತ್ರದಲ್ಲಿರುವ ನಮ್ಮ ಬ್ಯಾಂಕ್ ಕೇವಲ ಹಣಕಾಸಿನ ವ್ಯವಹಾರಕ್ಕಷ್ಟೇ ಸೀಮಿತವಾಗಿಲ್ಲ. ಜತೆಯಲ್ಲಿ ಹಲವು ಸಾಮಾಜಿಕ ಕಳಕಳಿಯ ಕೆಲಸಗಳಲ್ಲೂ ಸಕ್ರಿಯವಾಗಿ ಸಾಮಾಜಿಕ . ಶೈಕ್ಷಣಿಕ.ಆರೋಗ್ಯಕ್ಕೆ ಹೆಚ್ಚು ಸೇವೆಯನ್ನು ಮಾಡುವುದರಲ್ಲಿ ತೊಡಗಿಸಿಕೊಂಡಿದೆ. ಜತೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿರುವ ಅತ್ಯುತ್ತಮ ಗುಣಮಟ್ಟದ ಸೇವೆಗಳನ್ನು ನಮ್ಮ ಗ್ರಾಹಕರಿಗೆ ಒದಗಿಸಲು ಉತ್ಸುಕವಾಗಿದೆ. ಅಂತೆಯೇ ಪ್ರಸ್ತುತ ಗ್ರಾಹಕರು ಬಯಸುವ ಯುಪಿಐ ಸೇವೆಯನ್ನು ಲೋಕಾರ್ಪಣೆ ಮಾಡಿದ್ದೇವೆ ಎಂದರು.
Ganapati Urban Co-operative Bank ಉಪಾಧ್ಯಕ್ಷ ರಮೇಶ್ ಚಂದ್ರಗುತ್ತಿ ಮಾತನಾಡಿದರು. ತೇಜಸ್ವಿಯವರು ಯುಪಿಐ ಸೇವೆಯ ಬಗ್ಗೆ ಮಾಹಿತಿ ನೀಡಿದರು. ಸಾಗರ ಶಾಖೆಯ ವ್ಯವಸ್ಥಾಪಕಿ ಸುಧಾರವರು ಪ್ರಾರ್ಥಿಸಿದರು. ವಿ. ಶಂಕರ್ ನಿರೂಪಿಸಿದರು.
ನಿರ್ದೇಶಕರಾದ ಗಜಾನನ ಜೋಯಿಸ್, ಡಿಶ್ ಗುರು, ಶ್ರೀನಿವಾಸ ಮೇಸ್ತ್ರಿ, ದೇವೇಂದ್ರಪ್ಪ, ಕೃಷ್ಣಮೂರ್ತಿ ಭಂಡಾರಿ, ವಿನಾಯಕ ರಾಮ್ ಗೌಡ್ರು, ಶೋಭಾ ಲಂಬೋದರ, ಸರಸ್ವತಿ ನಾಗರಾಜ್, ಹೆರಾಲ್ಡ್ ರೋಡ್ರಿಗಸ್, ಹಾಗೂ ಪ್ರಮುಖರಾದ ಮೇಜರ್ ನಾಗರಾಜ್, ಬ್ಯಾಂಕ್‌ನ ಎಲ್ಲ ಸಿಬ್ಬಂದಿಗಳು ಹಾಜರಿದ್ದರು.