Achievers organization ಅಚೀವರ್ ಟ್ರಸ್ಟ್ ಶಿವಮೊಗ್ಗ ಇವರ ಆಶ್ರಯದಲ್ಲಿ 2025ರ ನೀಟ್ ಲಾಂಗ್ ಟರ್ಮ್ ಉಚಿತ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದ್ದು, 2024 ಜುಲೈ 1 ರಿಂದ ತರಗತಿಗಳು ಪ್ರಾರಂಭಗೊಳ್ಳಲಿವೆ ಎಂದು ಅಚೀವರ್‍ಸ್ ಕೋಚಿಂಗ್ ಸೆಂಟರ್‌ನ ತರಬೇತುದಾರ ವರುಣ್ ನಾಯಕ್ ಹೇಳಿದರು.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಶುಕ್ರವಾರ ಮಾತನಾಡಿದ ಅವರು, ಈ ಸಂಬಂಧ ನೋಂದಣಿ ಪ್ರಾರಂಭವಾಗಿದೆ. ಕೋರ್ಸ್‌ಗೆ ಆಯ್ಕೆಯಾಗುವವರು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ನಗರ ವಿದ್ಯಾರ್ಥಿಗಳು ೯೭% ಗ್ರಾಮೀಣ ವಿದ್ಯಾರ್ಥಿಗಳಿಗೆ ೯೫% ಅಂಕವಿರಬೇಕು. ೨೦೨೩ ಮತ್ತು ೨೦೨೪ ನೇ ವರ್ಷದ ನೀಟ್ ಪರೀಕ್ಷೆ ಬರೆದು ೪೦೦ ಅಂಕಗಳಿಗಿಂತ ಮೇಲೆ ಇರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಾಗೂ ಎಸ್‌ಸಿ, ಎಸ್‌ಟಿ, ಓಬಿಸಿ ಹಾಗೂ ಮೈನಾರಿಟಿ ವಿದ್ಯಾರ್ಥಿಗಳಿಗೆ ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡ ೯೨ ಕ್ಕಿಂತ ಹೆಚ್ಚು ಅಂಕ ಪಡೆದಲ್ಲಿ ಶೇಕಡ ೫೦ ರಷ್ಟು ರಿಯಾಯಿತಿ ನೀಡಲಾಗುವುದು ಎಂದರು.
ದ್ವಿತಿಯ ಪಿಯುಸಿ ೯೦% ಕ್ಕಿಂತ ಕಡಿಮೆ ಅಂಕವನ್ನು ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ಪಡೆಯಲು ಅಚೀವರ್
Achievers Organization ಅಕಾಡೆಮಿಯ ಪರೀಕ್ಷೆಯನ್ನು ಮಾನದಂಡವಾಗಿ ನೀಡಲಾಗಿದೆ. ಈ ಸಂಬಂಧ ಪ್ರವೇಶ ದಾಖಾಲಾತಿಗಳು ಆರಂಭವಾಗಿದ್ದು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಚೀವರ್ ಟ್ರಸ್ಟ್‌ವತಿಯಿಂದ ಉಚಿತ ತರಬೇತಿಗೆ ಆಹ್ವಾನಿಸಲಾಗಿದೆ ಎಂದರು.
ಪ್ರಸಕ್ತ ಪಿಯು ೧ ಮತ್ತು ೨ ರ ವಿದ್ಯಾರ್ಥಿಗಳಿಗೆ ಸಂಜೆ ಮತ್ತು ವೀಕೆಂಡ್ ಕೆಸಿಇಟಿ, ನೀಟ್ ತರಗತಿಗಳು ಲಭ್ಯವಿರುತ್ತದೆ. ಆದ್ದರಿಂದ ಸರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆಯಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಿಲಕನಗರದ ೧ನೇ ಕ್ರಾಸ್ (ರಾಘವೇಂದ್ರ ಮಠದ ರಸ್ತೆಯಲ್ಲಿರುವ) ಕಚೇರಿಯನ್ನು ಸಂಪರ್ಕಿಸಬಹುದು ಎಂದರು.