Shivamogga Police ಶಿವಮೊಗ್ಗ ನಗರದ ಬ್ರೈಟ್ ಹೊಟೆಲಿನಲ್ಲ್ಲಿ ಗ್ರಾಹಕ ಬಿಟ್ಟು ಹೋದ 4 ಲಕ್ಷ ರೂ. ಇದ್ದ ಹಣದ ಚೀಲವನ್ನು ಅಲ್ಲಿನ ಸರ್ವರ್ ಎತ್ತಿಕೊಂಡು ಹೋದ ಘಟನೆ ಸಂಭವಿಸಿದ್ದು, ಆತನನ್ನು ಬಂಧಿಸಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಾಗರ ತಾಲೂಕು ಜಂಬಾನಿ ಗ್ರಾಮದ ವಾಸಿ ಲೋಕೇಶ್ ಎನ್ನುವವರು ತನ್ನ ಸ್ನೇಹಿತನೊಂದಿಗೆ ಹೋಟೇಲ್ ನಲ್ಲಿ ಊಟ ಮಾಡುತ್ತಿದ್ದಾಗ 4 ಲಕ್ಷ ರೂ. ಇದ್ದ ಚೀಲವನ್ನು ಟೇಬಲ್ ಮೇಲೆ ಇಟ್ಟಿದ್ದರು.
ಅವಸರದಲ್ಲಿ ಚೀಲವನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು. ಸ್ವಲ್ಪ ಸಮಯದ ನಂತರ ಕಾರಿನಲ್ಲಿ ಬ್ಯಾಗ್ ಇಲ್ಲದೇ ಇರುವುದು ಕಂಡುಬಂದಿದ್ದು, ವಾಪಾಸ್ ಹೋಟೇಲ್ ಗೆ ಬಂದು ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಹೋಟೇಲ್ ನಲ್ಲಿ ಸರ್ವರ್ ಕೆಲಸ ಮಾಡುವ ಹೇಮಂತ್ ಕುಮಾರ್ ಎಂಬುವವನು ಬ್ಯಾಗ್ ನ್ನು ತೆಗೆದು ನೋಡಿ ಸ್ಟೋರ್ ರೂಮಿನಲ್ಲಿ ಇಡುವ ದೃಶ್ಯಾವಳಿ ಕಂಡುಬಂದಿತು.
ಪೋನ್ ಮಾಡಿ ಆತನಿಗೆ ಹಣದ ಬ್ಯಾಗ್ ನ ಬಗ್ಗೆ ವಿಚಾರ ಮಾಡಿದಾಗ ಯಾವುದೇ ಬ್ಯಾಗ್, ನಗದು ಹಣ ನಾನು ತೆಗೆದುಕೊಂಡಿಲ್ಲವೆಂದು ಹೇಳಿ ಪೋನ್ ಕಟ್ ಮಾಡಿದ್ದನು. ಅಲ್ಲದೆ ಬೆಳಿಗ್ಗೆ ಹೊಟೇಲ್ ನ ಕೆಲಸಕ್ಕೂ ಕೂಡ ಬಂದಿಲಯರಲಿಲ್ಲ. ಆದ್ದರಿಂದ ನಗದು ಹಣ ಕಳ್ಳತನ ಮಾಡಿಕೊಂಡು ಹೋದ ಹೇಮಂತ್ ಕುಮಾರ್ ಈತನ ಮೇಲೆ ಪ್ರಕರಣ ದಾಖಲಿಸಿದ್ದರು.
Shivamogga Police ಪೊಲೀಸರ ತಂಡವು ಪ್ರಕರಣದ ಆರೋಪಿತ ಹೇಮಂತ್ ಕುಮಾರ್ ಅಲಿಯಾಸ್ ಹೇಮಂತ್ (40) ಈತ ವಾಸವಿರುವ ಅಶೋಕನಗರ ದ ಮನೆಗೆ ತೆರಳಿ ದಸ್ತಗಿರಿ ಮಾಡಿ, ಆತನಿಂದ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.