Nehru Youth Centre ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ, ನೆಹರು ಯುವ ಕೇಂದ್ರ, ಶಿವಮೊಗ್ಗ ಮತ್ತು ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ,ಗೋಪಾಳ, ಮುಖಾ ಮುಖಿ ರಂಗತಂಡದ ಸಹಯೋಗದೊಂದಿಗೆ ದಿನಾಂಕ 05.06.2024 ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಕ್ಕಳಿಗೆ ಪರಿಸರದ ಬಗ್ಗೆ ,ಗಿಡಗಳನ್ನು ಏಕೆ ನೆಡಬೇಕು ಅದರಿಂದಾಗುವ ಪ್ರಯೋಜನಗಳು, ಗಿಡ,ಮರಗಳು ನಮಗೆ ನೀಡಿರುವ ಕೊಡುಗೆಗಳು ಹಾಗೂ ಪರಿಸರವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಸವಿವರವಾಗಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳಾದ ಶ್ರೀ.ಉಲ್ಲಾಸ್ ಕೆ.ಟಿ.ಕೆ ರವರು ತಿಳಿಸಿದರು.
Nehru Youth Centre ಮಕ್ಕಳು ಪರಿಸರದ ಬಗ್ಗೆ ತಮಗೆ ತಿಳಿದ ವಿಚಾರಗಳನ್ನು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾನಿಕೇತನ ಶಾಲೆಯ ಮುಖ್ಯೋಪಾಧ್ಯಾಯರು,ಮುಖಾಮುಖಿ ರಂಗತಂಡದ ಮಹೇಂದ್ರ,ರಂಗಾಯಣ ಮಂಜು, ಶಿಕ್ಷಕ ವೃಂದದವರು, ಆಡಳಿತ ಮಂಡಳಿಯವರು,ಶಾಲಾಮಕ್ಕಳು ಉಪಸ್ಥಿತರಿದ್ದರು ಹಾಗೂ ಎಲ್ಲರೂ ಜೊತೆಗೂಡಿ ಶಾಲೆಯ ಸುತ್ತಮುತ್ತ ಗಿಡಗಳನ್ನು ನೆಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.