Meteorological Department ಉತ್ತರಪ್ರದೇಶದಲ್ಲಿ 7ನೇ ಹಾಗೂ ಅಂತಿಮ ಹಂತದ ಮತದಾನದ ಸಂದರ್ಭ ಉಷ್ಣಾಘಾತದಿಂದ 33 ಚುನಾವಣಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಉತ್ತರಪ್ರದೇಶದ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ಹೇಳಿದ್ದಾರೆ.
ಮತದಾನದ ಕೊನೆಯ ದಿನದಂದು ಕೇವಲ ಒಂದು ರಾಜ್ಯದಲ್ಲಿ ಬಿಸಿಲ ಹೊಡೆತದಿಂದ ಸಾವನ್ನಪ್ಪಿರುವ ಈ ಅಂಕಿ-ಅಂಶಗಳು ಅಚ್ಚರಿ ಮೂಡಿಸಿದೆ. ಮೃತರಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ, ನೈರ್ಮಲ್ಯ ಸಿಬ್ಬಂದಿ ಮತ್ತು ಮತಗಟ್ಟೆ ಸಿಬ್ಬಂದಿಗಳು ಸೇರಿದ್ದಾರೆ. ಮೃತರ ಕುಟುಂಬಗಳಿಗೆ ಸೂಕ್ತವಾದ ಹಣಕಾಸು ಪರಿಹಾರವನ್ನು ಒದಗಿಸಲಾಗುವುದು ಎಂದು ರಿನ್ವಾ ಹೇಳಿದ್ದಾರೆ.
45 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಿಂದ ಅನೇಕ ಸ್ಥಳಗಳಲ್ಲಿ ತೀವ್ರವಾದ ಶಾಖದ ಅಲೆಯಿಂದ ಅನೇಕ ಸಾವುಗಳ ವರದಿಯಾಗಿದೆ. ಬಲ್ಲಿಯಾ ನಗರದಲ್ಲಿ ಮತದಾನ ಮಾಡಲು ಸರತಿ ಸಾಲಿನಲ್ಲಿದ್ದ ಮತದಾರ ರಾಮ್ ಬದಾನ್ ಚೌಹಾಣ್ ಅವರು ಬಿದ್ದು ಪ್ರಜ್ಞೆ ಕಳೆದುಕೊಂಡರು. ಅವರನ್ನು ಕೂಡಲೇ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
Meteorological Department ಆಯಾ ಕ್ಷೇತ್ರಗಳಲ್ಲಿ ಮೃತಪಟ್ಟ ಚುನಾವಣಾ ಸಿಬ್ಬಂದಿ ಕುರಿತು ವರದಿ ಸಲ್ಲಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಜಿಲ್ಲಾಡಳಿತ ಮೃತಪಟ್ಟ ಚುನಾವಣಾ ಸಿಬ್ಬಂದಿಯ ಮರಣೋತ್ತರ ಪರೀಕ್ಷೆಯ ವರದಿಯನ್ನು ಕೂಡ ಸಲ್ಲಿಸಲಿದ್ದಾರೆ ಎಂದು ರಿನ್ವಾ ತಿಳಿಸಿದ್ದಾರೆ.