Monday, February 2, 2026
Monday, February 2, 2026

Shivamogga News ಒಡವೆ ಅಂಗಡಿಯಲ್ಲಿ ಒಡವೆ ಪೆಟ್ಟಿಗೆ ದೋಚಿಕೊಂಡು ವ್ಯಕ್ತಿ ಪರಾರಿ

Date:

Shivamogga News ಗ್ರಾಹಕರಂತೆ ಚಿನ್ನ-ಬೆಳ್ಳಿ ಅಂಗಡಿಗೆ ಬಂದಿದ್ದ ಮೂವರು ಯುವತಿಯರು ಹಾಗೂ ಓರ್ವ ಪುರುಷ ವ್ಯಕ್ತಿ ಉಂಗುರ ಮತ್ತು ಬೆಳ್ಳಿ ದೀಪ ಖರೀದಿ ನೆಪದಲ್ಲಿ ಬುದ್ಧಿವಂತಿಕೆಯಿಂದ ಅಂಗಡಿಯವರ ಕಣ್ತಪ್ಪಿಸಿ ಲಕ್ಷಾಂತರ ರೂ. ಬೆಲೆ ಬಾಳುವ ಸುಮಾರು 67 ಗ್ರಾಂ ತೂಕದ ಒಡವೆಗಳ ಬಾಕ್ಸ್ ಅನ್ನು ದೋಚಿಕೊಂಡು ಪರಾರಿಯಾದ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.

ಶಿವಮೊಗ್ಗ ನಗರದ ಗಾಂಧಿಬಜಾರ್ ಬಳಿಯ ತಿರುಪಳಯ್ಯನ ಕೇರಿಯ ಸಂಪತ್ ಜ್ಯುವೆಲರ್ಸ್‌ಗೆ ಗ್ರಾಹಕರಂತೆ ಬಂದಿದ್ದ ಈ ಮೂವರು ಯುವತಿಯರು ಹಾಗೂ ಓರ್ವ ಪುರುಷ ಉಂಗುರ ವಗೈರೆಗಳನ್ನು ಖರೀದಿಸುವ ನೆಪದಲ್ಲಿ ಒಡವೆ ದೋಚಿದ್ದಾರೆ ಎಂದು ಅಂಗಡಿ ಮಾಲೀಕರು ದೂರಿತ್ತಿದ್ದಾರೆ. ಅಂಗಡಿಗೆ ಬಂದಿದ್ದ ಇವರು ಮದುವೆ ಗಿಫ್ಟ್‌ಗೆ ಬಂಗಾರದ ಉಂಗುರ ತೋರಿಸುವಂತೆ ಕೇಳಿದ್ದಾರೆ. ಇನ್ನೊಬ್ಬ ವ್ಯಕ್ತಿ ಹಾಗೂ ಮಹಿಳೆ ಬೆಳ್ಳಿ ಕಾಮಾಕ್ಷಿ ದೀಪ ತೋರಿಸಿ ಎಂದಿದ್ದಾರೆ. ಈ ಸಂದರ್ಭದಲ್ಲಿ ಯುವತಿ ಯರಿಬ್ಬರಿಗೆ ಡಿಸ್‌ಪ್ಲೇಸ್‌ನಲ್ಲಿದ್ದ ಉಂಗುರಗಳನ್ನು ತೋರಿಸಿದಾಗ ಇದು ಬೇಡ ಕಡಿಮೆ ತೂಕದ 3 ಗ್ರಾಂ ಒಳಗಿನ ಉಂಗುರ ತೋರಿಸಿ ಎಂದಿದ್ದಾರೆ. ಆಗ ಮಾಲೀಕರು ಬೇರೆ ಉಂಗುರ ತರಲು ಲಾಕರ್ ರೂಂಗೆ ಹೋಗಿ ಉಂಗುರ ತಂದು ತೋರಿಸಿದಾಗ ಇದು ಓಕೆ, ನಮ್ಮವರನ್ನು ಕರೆದುಕೊಂಡು ಬಂದು ಖರೀದಿಸುತ್ತೇನೆ ಎಂದು ಆ ಯುವತಿಯರು ಜಾಗ ಖಾಲಿ ಮಾಡಿದ್ದಾರೆ.

Shivamogga News ಇನ್ನೋರ್ವ ಪುರುಷ ಹಾಗೂ ಮಹಿಳೆ ಕಡಿಮೆ ಬೆಲೆಯ ಬೆಳ್ಳಿ ದೀಪ ತೋರಿಸಿ ಎಂದು ಹೇಳಿ ನಂತರ ಬರುತ್ತೇವೆ ಎಂದು ವಾಪಾಸ್ ಹೊರಟಿದ್ದಾರೆ. ಉಂಗುರ ತರಲು ತಾವು ಲಾಕರ್ ರೂಮಿಗೆ ಹೋದಾಗ ನಮ್ಮ ಅಂಗಡಿಯ ಹುಡುಗಿಗೆ ಇನ್ನಿಬ್ಬರು ಅಡ್ಡಲಾಗಿ ನಿಂತಿದ್ದು, ಈ ಸಂದರ್ಭ ಬಳಸಿ ಚಿನ್ನದ ಒಡವೆಗಳಿದ್ದ ಪ್ಲಾಸ್ಟಿಕ್ ಬಾಕ್ಸ್ ಅನ್ನು ಓರ್ವ ಯುವತಿ, ಡಿಸ್‌ಪ್ಲೇ ಗ್ಲಾಸ್ ಡ್ರಾ ತೆಗೆದು ಕೈ ಹಾಕಿ ಅಲ್ಲಿದ್ದ ಒಡವೆಗಳ ಬಾಕ್ಸ್‌ನ್ನು ತನ್ನ ಬ್ಲೌಸ್‌ನಲ್ಲಿ ಹಾಕಿಕೊಂಡು ಬುದ್ದಿವಂತಿಕೆ ಯಿಂದ ಒಡವೆಗಳನ್ನು ದೋಚಿದ್ದಾರೆ ಎಂದು ಪೇಟೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...