Pranavananda Swamiji ಈಡಿಗ ಸಮಾಜದ ಪ್ರಣವಾನಂದ ಸ್ವಾಮೀಜಿ ಇಂದು ಶಿವಮೊಗ್ಗದ ಚಂದ್ರಶೇಖರನ್ ನಿವಾಸಕ್ಕೆ ಭೇಟಿ ನೀಡಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ವಿರೋಧಿಸಿ ಆತ್ಮಹತ್ಯೆಗೆ ಶರಣಾಗಿದ್ದ ಚಂದ್ರಶೇಖರನ್ ಕುಟುಂಬಕ್ಕೆ ಪ್ರಣವಾನಂದ ಸ್ವಾಮೀಜಿ ಸಾಂತ್ವಾನ ಹೇಳಿದರು.
ನಂತರ ಪತ್ರಿಕಾ ಭವನದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ , ನಾರಾಯಣಗುರು ಪೀಠ ಈಡಿಗ ಸಮಾಜದ ಪರವಾಗಿ ಸಾಂತ್ವನ ಹೇಳಲು ಬಂದಿದ್ದೇನೆ.
ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದ ಹಿಂದೆ ಪ್ರಭಾವಿ ಬಲಶಾಲಿಗಳಿದ್ದಾರೆ. 183 ಕೋಟಿ ಹಣ ಬೇರೆ ರಾಜ್ಯದ ಕಂಪನಿಗಳ ಖಾತೆಗೆ ವರ್ಗಾವಣೆಯಾಗಿದೆ ಆ ಕಂಪನಿಗಳ ಮಾಲೀಕರಿಗೂ ರಾಜ್ಯದ ರಾಜಕೀಯ ಮಹಾನ್ ನಾಯಕರುಗಳಿಗೆ ಇರುವ ಸಂಬಂಧ ಏನು ಇದೆಲ್ಲವೂ ಸಹ ತನಿಖೆ ಆಗಬೇಕು ಎಂದರು.
40% ಕಮೀಷನ್ ವಿರುದ್ಧವಾಗಿ ಬಂದ ಈ ಸರ್ಕಾರ ಈಗ ಎಷ್ಟು ಪರ್ಸಂಟೇಜ್ ಕಮೀಷನ್ ಸರ್ಕಾರ ಎಂದು ಹೇಳಬೇಕಿದೆ. ಒಂದು ನಿಗಮದಲ್ಲಿ ಅಧಿಕಾರಿಗಳು ಪಿನ್ ಬದಲಾವಣೆ ಮಾಡಬೇಕೆಂದರೆ ಆ ಇಲಾಖೆಯ ಸಚಿವರ ಅನುಮತಿ ಬೇಕಾಗುತ್ತದೆ ಹಾಗಿದ್ದಲ್ಲಿ ಇಷ್ಟು ದೊಡ್ಡ ಮಟ್ಟದ ಹಣ ವರ್ಗಾವಣೆಯಾಗಿದೆ ಎಂದರೆ ಸಚಿವರ ಅನುಮತಿ ಇಲ್ಲದೆ ಆಗಿಲ್ಲ ಆದ್ದರಿಂದ ಕೂಡಲೆ ಸಚಿವ ನಾಗೇಂದ್ರರನ್ನು ಸರ್ಕಾರ ಕೈಬಿಡಬೇಕು ಎಂಬುದು ಆಗ್ರಹವಾಗಿದೆ ಎಂದರು.
Pranavananda Swamiji ಎಸ್ ಐ ಟಿ ಹಾಗು ಸಿ ಐ ಡಿಯಿಂದ ಕೆಲಸವಾಗಲ್ಲ ಈ ಪ್ರಕರಣದಲ್ಲಿ ಅಂತರಾಜ್ಯದ ಮಟ್ಟದಲ್ಲಿ ವ್ಯವಹಾರ ಆಗಿದೆ ಆದ್ದರಿಂದ ಪ್ರಕರಣವನ್ನು ಸಿಬಿಐಗೆ ವಹಿಸಬೇಕು.
ಚಂದ್ರಶೇಖರನ್ ಕುಟುಂಬ ಮನೆಯ ಯಜಮಾನ ಕಳೆದುಕೊಂಡು ಕಷ್ಟದಲ್ಲಿದೆ ಸರ್ಕಾರ ಚಂದ್ರಶೇಖರನ್ ಕುಟುಂಬದ ಪತ್ನಿ ಅಥವಾ ಅವರ ಮಗನಿಗೆ ಸರ್ಕಾರಿ ಕೆಲಸ ಮತ್ತು ಅವರಿಗೆ ತಕ್ಷಣ ಒಂದು ಕೋಟಿ ರೂಪಾಯಿಗಳ ಪರಿಹಾರ ನೀಡಬೇಕು ಹಾಗು
ತಪ್ಪಿತಸ್ಥರನ್ನು ಬಂಧಿಸಬೇಕು ಎಂದರು.
ರಾಜ್ಯ ಸರ್ಕಾರದ ಅಧೀನದಲ್ಲಿರುವ ನಿಗಮಗಳ ಹಣವನ್ನು ರಕ್ಷಣೆ ಮಾಡುವಲ್ಲಿ ಸಿದ್ಧರಾಮಯ್ಯ ಸರ್ಕಾರ ವಿಫಲವಾಗಿದೆ . ಆದ್ದರಿಂದ ಕೂಡಲೇ ಈ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಪ್ರಣವಾನಂದ ಸ್ವಾಮಿಗಳು ಆಗ್ರಹಿಸಿದರು.